ಕಡಲ್ಗಳ್ಳರ ಸರಹದ್ದಿನಲ್ಲಿ

Author : ಗೀತಾ ಕುಂದಾಪುರ

Pages 220

₹ 200.00




Year of Publication: 2021
Published by: ನಿವೇದಿತಾ ಪ್ರಕಾಶನ
Address: ನಂ.3437 (1ನೇ ಮಹಡಿ), 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ, 2ನೇ ಹಂತ, ಬೆಂಗಳೂರು-560 070
Phone: 9448733323

Synopsys

ಲೇಖಕಿ ಗೀತಾ ಕುಂದಾಪುರ ಅವರ ಪ್ರವಾಸ ಕಥನ ‘ಕಡಲ್ಗಳ್ಳರ ಸರಹದ್ದಿನಲ್ಲಿ’. ರಷ್ಯಾ ಮತ್ತು ಸ್ಕ್ಯಾಂಡಿನೆವಿಯಾ ಪ್ರವಾಸ ಕೈಗೊಂಡವೇಳೆ ಆದ ಅನುಭವಗಳನ್ನು ಪ್ರವಾಸ ಕಥನದ ರೂಪದಲ್ಲಿ ಹೊರತಂದಿದ್ದಾರೆ.

ಕೃತಿಯಲ್ಲಿ ಜಯಶ್ರೀ ದೇಶಪಾಂಡೆಯವರು ಮುನ್ನುಡಿಯ ಮಾತುಗಳನ್ನು ಬರೆದಿದ್ದು, ಪ್ರವಾಸ ಪ್ರಿಯರು ತಮ್ಮೊಡನೆ  ಸಂಗ್ರಹಿಸಿ ತರುವ ಒಂದು ಅಪರಿಮಿತ ಸಂಪತ್ತೆಂದರೆ ಅನುಭವ.‌ ನಮ್ಮಲ್ಲಿ 'ಅನುಭವಗಳ ಗಣಿ' ಎಂಬ ನುಡಿಗಟ್ಟು ಇದೆ. ಯಾಕೆಂದರೆ ಅನುಭವ  ಎನ್ನುವುದು ಗಣಿಯಷ್ಟೇ ಆಳ, ದೀರ್ಘ ಮತ್ತು ವಿಸ್ತಾರವೂ ಆಗಿರಲು ಸಾಧ್ಯವಿದೆ. ಈ ವಿಸ್ತಾರದಲ್ಲಿ ನಾವು ಏನನ್ನಾದರೂ ತುಂಬಿಕೊಳ್ಳಬಹುದಾದ ಸಾಧ್ಯತೆಗಳೂ ಅಗಣಿತ. ಅದಕ್ಕೆ ಗಣಿಯಂತೆ ಎಲ್ಲೋ ಒಂದೆಡೆ ಮುಕ್ತಾಯವೂ ಇರಲಾರದು. ಹೀಗಿರುವಾಗ ನಮ್ಮ ಭೂಮಿಯ ಉತ್ತರ ಗೋಲರ‍್ಧದ ಕೆಲವು ನಾಡುಗಳಿಗೆ ತೆರಳಿ, ಅಲ್ಲಿನ ಇಂಚಿಂಚನ್ನೂ ಸುತ್ತಾಡಿ ಗೀತಾ ಅವರು ಉಡಿಯಲ್ಲಿ ತುಂಬಿಕೊಂಡು ಬಂದ ಅನುಭವವೂ ಖಂಡಿತ ಅಪಾರವಾಗಿಯೇ ಇದೆ ಎಂಬುದಾಗಿ ಹೇಳಿದ್ದಾರೆ. ಅಲ್ಲದೆ ಹದಿನೈದು ದಿನಗಳ ಪ್ರವಾಸದಲ್ಲೇ‌ ಹದಿನೈದು ವರ್ಷಗಳ ಓಡಾಟದಷ್ಟು ಬೆರಗನ್ನು ಕಂಡು ಅದನ್ನು ಮನಸ್ಸು ಎದೆಗಳಲ್ಲಿ ಗ್ರಹಿಸಿ ಕಾಪಿಟ್ಟುಕೊಂಡು ಬಂದ ಬರಹದ ಇನ್ನೊಂದು ಶಕ್ತಿಯೆಂದರೆ ಪ್ರತಿಯೊಂದು ದೇಶದ ಇತಿಹಾಸದ ವಿಭಿನ್ನ ಕಥೆಗಳು, ಭೌಗೋಳಿಕ ವೈವಿಧ್ಯ, ರಾಜಕೀಯ ವಿಶೇಷ, ಆರ್ಥಿಕ ಸ್ಥಿತಿಗತಿ, ಅರಣ್ಯಸಂಪತ್ತು ಸಾಂಸ್ಕೃತಿಕ ಪರಂಪರೆ, ಜನಮನದ ಇರಸರಿಕೆ, ಪ್ರಚಲಿತ ವಾತಾವರಣ, ಹವಾಮಾನ, ಹೀಗೆ ಯಾರೇ ‌ಪ್ರವಾಸಕ್ಕೆ ಹೊರಟರೂ ಅವರಿಗೆ ಬೇಕಾಗಬಹುದಾದ ಒಂದೊಂದೂ ವಿವರಗಳ ದಾಖಲಿಸಿ‌ ಒಂದು ಪರ್ಫೇಕ್ಟ್ ಪ್ರವಾಸೀ ಲೇಖನದ ಚೌಕಟ್ಟನ್ನು ಅಳವಡಿಸಿ ಬರೆದಿರುವ ಪುಸ್ತಕವಿದು. ಪುಸ್ತಕ 'ಕಡಲ್ಗಳ್ಳರ ಕಾಲುದಾರಿ- ರಷ್ಯಾ ಮತ್ತು ಸ್ಕ್ಯಾಂಡಿನೇವಿಯ ಪ್ರವಾಸ ಕಥನ' ಅಲ್ಲಿಗೆ ಹೋಗ ಬಯಸುವವರಿಗೆ ಒಂದು ಅಮೂಲ್ಯ ಉಡುಗೊರೆಯಾದೀತು ಎಂದು ನನ್ನ ಅಭಿಪ್ರಾಯ ಎಂದಿದ್ದಾರೆ.

About the Author

ಗೀತಾ ಕುಂದಾಪುರ
(23 June 1967)

ಬರಹಗಾರ್ತಿ ಗೀತಾ ಕುಂದಾಪುರ ಅವರು ಜನಿಸಿದ್ದು 1967 ಜೂನ್‌ 23ರಂದು ಎಂಕಾಂ ಪದವಿ ಪಡೆದಿರುವ ಇವರು ವಿದೇಶಗಳಲ್ಲಿ ಪ್ಲಾನರ್‌ ಮತ್ತು ಪ್ರಾಜೆಕ್ಟ್ ಕಂಟ್ರೋಲರ್‌ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕಾಲೇಜು ದಿನಗಳಿಂದಲೇ ಸಾಹಿತ್ಯಾಸಕ್ತರಾಗಿದ್ದ ಇವರು ವಿವಿಧ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಿಗೆ ಲೇಖನ ಕತೆಗಳನ್ನು ಬರೆಯುವ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಇವರು ಬರೆದ ಸಣ್ಣ ಕತೆಗಳು ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದ್ದು ‘ಅಪ್ರಮೇಯ’ ಶೀರ್ಷಿಕೆಯಡಿ ಪುಸ್ತಕವಾಗಿ ಪ್ರಕಟಗೊಂಡಿದೆ. ಇವರ ಇನ್ನೊಂದು ಕೃತಿ ದ್ವೀಪಗಳತ್ತ ಯಾನ - ಜಪಾನ್ ಮತ್ತು ಆಸ್ಟ್ರೇಲಿಯಾ ಪ್ರವಾಸ ಕಥನ. ...

READ MORE

Related Books