ಕಡುಗಲಿಯ ನಿಡುಗಾಥೆ

Author : ಕೆ.ವಿ. ಅಕ್ಷರ

Pages 111

₹ 108.00




Year of Publication: 2020
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು-577417, ಸಾಗರ ತಾಲೂಕು, ಜಿಲ್ಲೆ ಶಿವಮೊಗ್ಗ.
Phone: 09480280401

Synopsys

ಲೇಖಕ ಕೆ.ವಿ. ಅಕ್ಷರ ಅವರು ಬರೆದ ಕೃತಿ-ಕಡುಗಲಿಯ ನಿಡುಗಾಥೆ. ಸಂಸ್ಕೃತ ಕವಿ ಭವಭೂತಿಯ ‘ಮಹಾವೀರ ಚರಿತ’ ನಾಟಕವನ್ನು ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ. ಯಜ್ಞ ಪಾಲನೆಗಾಗಿ ವಿಶ್ವಾಮಿತ್ರನೊಂದಿಗೆ ಹೊರಟ ರಾಮನು ನಂತರ ಮತ್ತೆ ಹಿಂದುರುಗಿ ಬಂದ ಪಟ್ಟಾಭಿಷೇಕ ಮಾಡಿಕೊಳ್ಳುವವರೆಗಿನ ಕಥೆಯು ಈ ನಾಟಕದ ವಸ್ತು. ಸೀಮಿತ ಸನ್ನಿವೇಶಗಳಲ್ಲಿ ಅಂದರೆ, ವಿಶ್ವಾಮಿತ್ರನ ಆಶ್ರಮ, ಪಂಚವಟಿ, ಲಂಕೆ ಮತ್ತು ಮರುಪ್ರಯಾಣದ ಆಕಾಶಮಾರ್ಗ ಹೀಗೆ ಕಥೆ ರೂಪುಗೊಂಡು ಕಥೆ ಮುಗಿಸುವ ಶೈಲಿಯಲ್ಲಿ ಸೃಜನಾತ್ಮಕತೆ ಇದೆ. ನಾಟಕದಲ್ಲಿ 7 ಅಂಕಗಳಿವೆ. ರಾಮಾಯಣದ ಹೊಸ ಬಗೆಯ ವ್ಯಾಖ್ಯಾನಗಳೂ ಇವೆ. ಸಂಸ್ಕೃತದಲ್ಲಿ ಕಾಣಿಸಿಕೊಂಡ ರಾಮಾಯಣದ ಹೊಸ ಬಗೆಯ ವ್ಯಾಖ್ಯಾನಗಳಿಗೆಲ್ಲ ಅಡಿಪಾಯ ಹಾಕಿಕೊಟ್ಟ ಕೃತಿ ಇದು ಎಂದು ಹೇಳಲಾಗುತ್ತದೆ. ಅಂದಿನ ನಾಟಕದ ವಸ್ತುವನ್ನು ಇಂದಿನ ರಂಗಕ್ಕೆ ಅಳವಡಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಕಾಣಬಹುದು. 

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books