ಕಗ್ಗತ್ತಲ ಕಾಲ

Author : ಎಸ್‌.ಬಿ. ರಂಗನಾಥ್

₹ 320.00




Year of Publication: 2022
Published by: ಸಾಹಿತ್ಯ ಅಕಾದೆಮಿ
Address: ರವೀಂದ್ರ ಭವನ, 35, ಫಿರೋಜಶಾಹ ರಸ್ತೆ, ನವದೆಹಲಿ- 110001

Synopsys

ʻಕಗ್ಗತ್ತಲ ಕಾಲʼ ಕೃತಿಯು ಲೇಖಕ ಶಶಿ ತರೂರ್‌ ಆಂಗ್ಲಬಾಷೆಯಲ್ಲಿ ಬರೆದ ʻಆನ್ ಎರಾ ಆಫ್‌ ಡಾರ್ಕ್‌ನೆಸ್‌ʼ ಗದ್ಯ ಪುಸ್ತಕದ ಕನ್ನಡ ಅನುವಾದವಾಗಿದೆ. ಲೇಖಕ ಪ್ರೊ. ಎಸ್.ಬಿ. ರಂಗನಾಥ್‌ ಇದರ ಅನುವಾದಕರು. ಮೂಲ ಕೃತಿಗೆ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಲಭಿಸಿದೆ. ಕೃತಿಯಲ್ಲಿ ತೀಕ್ಷ್ಯ ಹಾಗೂ ವಿಶಿಷ್ಟ ಸಂಶೋಧನಾತ್ಮಕ ದೃಷ್ಠಿ ಮತ್ತು ಮೊನಚಾದ ವ್ಯಂಗ್ಯ ಮಿಶ್ರಿತ ಶೈಲಿಯಲ್ಲಿ, ಬ್ರಿಟಿಷ್ ಆಡಳಿತವು ಭಾರತಕ್ಕೆ ಹೇಗೆ ವಿಧ್ವಂಸಕಾರಿಯಾಗಿತ್ತು ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ. ಭಾವನಾತ್ಮಕ ಶೈಲಿಯಲ್ಲಿ ರಚಿಸಲ್ಪಟ್ಟ ಈ ಕೃತಿಯು ಭಾರತ ಇತಿಹಾಸದ ಅತ್ಯಂತ ಪ್ರಮುಖ ಕಾಲಘಟ್ಟಗಳಲ್ಲಿ ಒಂದಾದ ಈ ಅವಧಿಯ ಬಗ್ಗೆ ಇರುವ ಹಲವು ತಪ್ಪು ಕಲ್ಪನೆಗಳನ್ನು ತೊಡೆದುಹಾಕುವಲ್ಲಿ ಪ್ರಯತ್ನಿಸಿದೆ.

About the Author

ಎಸ್‌.ಬಿ. ರಂಗನಾಥ್

ಪ್ರೊ. ಎಸ್‌.ಬಿ. ರಂಗನಾಥ್ ಅವರು‌ ಸೃಜನಶೀಲ ಬರವಣಿಗೆಯೊಂದಿಗೆ ಬಹುಕಾಲ ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುತ್ತಿರುವ ಪ್ರಮುಖ ಲೇಖಕರಲ್ಲಿ ಒಬ್ಬರು. ಇವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಇವರ ಖ್ಯಾತ ಐತಿಹಾಸಿಕ ಅನುವಾದಿತ ಕಾದಂಬರಿ ʻಟಿಪ್ಪು ಸುಲ್ತಾನನ ಖಡ್ಗʼ ಕೃತಿಯು ಮೂರು ಭಾರಿ ಮರು ಮುದ್ರಣಗಳನ್ನು ಕಂಡಿದೆ. ರಾಷ್ಟ್ರಪತಿ ಪ್ರಶಸ್ತಿ ವಿಜೇತ ಬಂಗಾಳಿ ಚಲನಚಿತ್ರಗಳ ಮೂಲ ಕಾದಂಬರಿಗಳು, ತಕಳಿ ಶಿವಶಂಕರ ಪಿಳ್ಳೆ, ಎಂ.ಟಿ. ವಾಸುದೇವನ್ ನಾಯರ್‌ ಮುಂತಾದವರ ಕತೆಗಳನ್ನು ಕನ್ನಡಿಸಿದ್ದಾರೆ. ಅನುವಾದ ಕೃತಿಗಳು: 'ಭುವನ ಸೋಮ್', 'ಪ್ರತಿದ್ವಂದಿ', ಭೀಷ್ಮ ಸಾಹನಿʼ, ʻರಣಹದ್ದುಗಳ ಮಧ್ಯೆʼ, ʻಜಹೂರ್‌ ಭಕ್ಷ್‌ʼ, ʻಎಲೆಲೆ ಮಧುಬಾಲೆ!ʼ, ʻಸಿರಿ ...

READ MORE

Related Books