ಕಲಾ ಸಾಧಕ

Author : ಎನ್. ಮರಿಶಾಮಾಚಾರ್

Pages 52

₹ 40.00




Year of Publication: 1996
Published by: ಸಿ.ಎಂ.ಎನ್ ಪ್ರಕಾಶನ
Address: 88, 1ನೇ ಎ ಕ್ರಾಸ್, 7ನೇ ಮುಖ್ಯರಸ್ತೆ, 2ನೇ ಬ್ಲಾಕ್, ಜಯನಗರ, ಬೆಂಗಳೂರು- 560011

Synopsys

‘ಕಲಾ ಸಾಧಕ’ ಕಲಾವಿದ, ಲೇಖಕ ಎನ್. ಮರಿಶಾಮಾಚಾರ್ ಅವರ ಕೃತಿ. ಈ ಕೃತಿಯಲ್ಲಿ ತಮ್ಮ ಆದರ್ಶ ಗುರು ಕಲಾ ಸಾಧಕ ಕೆ.ಕೆ. ಹೆಬ್ಬಾರರನ್ನು ಕುರಿತ ಲೇಖನಗಳನ್ನು ಸಂಕಲನ ಮಾಡಿದ್ದಾರೆ. ಕಲಾಸೇವೆಗೆ ಬದುಕನ್ನು ಮುಡಿಪಿಟ್ಟಿದ್ದ ಕೆ.ಕೆ. ಹೆಬ್ಬಾರರ ಸಾಧಕ ಬದುಕಿನ ಕುರಿತಾಗಿ ಒಬ್ಬ ಆದರ್ಶ ಶಿಷ್ಯರಾಗಿ ತಾವು ಕಂಡ ಕಲಾ ಬದುಕಿನ ಕುರಿತ ಲೇಖನಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

About the Author

ಎನ್. ಮರಿಶಾಮಾಚಾರ್
(15 May 1951 - 03 April 2013)

ಕರ್ನಾಟಕದ ಕಲಾವಲಯದ ಹಿರಿಯರು ’ಮರಿ’ ಎಂದು ಕರೆಯುತ್ತಿದ್ದ ಎನ್. ಮರಿಶಾಮಾಚಾರ್‌ ಅವರು ರಾಜ್ಯದ ಅಪರೂಪದ ಕಲಾಪರಿಚಾರಕ-ಲೇಖಕ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್‌  ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮರಿಶಾಮಾಚಾರ್‌ ಅವರು ಕಲಾಸಾಹಿತಿ. ’ನಡೆದಾಡುವ ಕಲಾಕೋಶ’ ಎಂದು ಕಲಾವಲಯದಲ್ಲಿ ಅವರನ್ನು ಗುರುತಿಸಲಾಗುತ್ತಿತ್ತು. ವಿಜಯಪುರದಲ್ಲಿ 1951ರ ಮೇ 15ರಂದು ಜನಿಸಿದ ಮರಿಶಾಮಾಚಾರ್‌ ಅವರು ಜಯನಗರದ ಆರ್‌.ವಿ. ಹೈಸ್ಕೂಲಿನಲ್ಲಿ ಓದುತ್ತಿರುವಾಗ ಡ್ರಾಯಿಂಗ್ ಮಾಡಲು ಆರಂಭಿಸಿದ್ದರು. ಅವರ ಅಣ್ಣ ಕೆನ್‌ ಶಾಲೆಯ ವಿದ್ಯಾರ್ಥಿಯಾಗಿದ್ದ. ಕಲೆಯ ಅಭಿರುಚಿ ಬಂದದ್ದು ಅವರ ಅಣ್ಣನಿಂದಲೇ. ಅಣ್ಣನ ಮೂಲಕ ಪರಿಚಯವಾದ ಕಲಾಗುರು ಆರ್‌.ಎಂ. ಹಡಪದ ಅವರ ಶಿಷ್ಯರಾಗಿದ್ದ ’ಮರಿ’ ಅವರು ಅವರ ಬಳಿ ಐದು ವರ್ಷ ...

READ MORE

Related Books