ಕಾಲಬಂಧ

Author : ಪ್ರಶಾಂತ್ ಭಟ್

Pages 136

₹ 120.00
Year of Publication: 2020
Published by: ಸಮನ್ವಿತ ಪ್ರಕಾಶನ
Address: ಬೆಂಗಳೂರು
Phone: 9844192952

Synopsys

ಲೇಖಕ ಪ್ರಶಾಂತ್ ಭಟ್ ಅವರ ಚೊಚ್ಚಲ ಕಾದಂಬರಿ ‘ಕಾಲಬಂಧ’. ಕೃತಿಗೆ ಬೆನ್ನುಡಿ ಬರೆದ ಶ್ರೀನಿಧಿ ಡಿ. ಎಸ್. ‘ಕನ್ನಡ ಸಾಹಿತ್ಯಲೋಕದ ವಿರಳ ಪ್ರಕಾರ ಸೈನ್ ಫಿಕ್ಷನ್, ಇಂಗ್ಲೀಷ್‌ನಲ್ಲಿ ಈ ವರ್ಗಕ್ಕೆ ಸೇರಿದ ಅಸಂಖ್ಯ ಕಾದಂಬರಿಗಳು ಬಂದಿವೆ. ಅವು ಬಹು ಜನಪ್ರಿಯವೂ ಹೌದು. ನಮ್ಮಲ್ಲಿ ಕೆಲವೇ ಲೇಖಕರು ಈ ದಿಸೆಯ ಪ್ರಯತ್ನ ಮಾಡಿದ್ದಾರೆ. ಇದೀಗ ಪ್ರಶಾಂತ್ ಭಟ್ ಅಂತಹುದೇ ಒಂದು ಅಪರೂಪದ ಕಾದಂಬರಿಯನ್ನು ಬರೆದಿದ್ದಾರೆ. ಅನೂಹ್ಯ ತಿರುವುಗಳ, ಓದುಗರನ್ನು ಹೊಸದೇ 'ಲೋಕಕ್ಕೆ ಕರೆದೊಯ್ಯುವ ಕೃತಿ 'ಕಾಲಬಂಧ'. ಭಿನ್ನ ಮನೋಧರ್ಮದ ಈ ಕಾದಂಬರಿಯನ್ನು ಓದುವುದೇ ಒಂದು ಚಂದದ ಅನುಭೂತಿ. ವಿಜ್ಞಾನ ಜಗತ್ತಿನ ಸರಳ | ವಿವರಣೆ, ಜೊತೆಗೆ Nail Biting ರೋಚಕ ಅಂಶಗಳು ಇಲ್ಲಿನ ಹೆಚ್ಚುಗಾರಿಕೆ. ಅಸಹಜ ಎನಿಸದ ವಿವರಗಳು, ವೇಗವಾಗಿ ಸಾಗುವ ಕಥನ ಶೈಲಿ, ಪುಟಪುಟಗಳಲ್ಲೂ ಎದುರಾಗುವ ಅಚ್ಚರಿ ಎಲ್ಲೂ ಪುಸ್ತಕ ಎತ್ತಿಡದೆ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ. ಹಿತವಾದ 'ಬಿಸಿ ಕಾಫಿಯ ಘಮದಂತೆ ಈ ಕಾದಂಬರಿ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಉತ್ತಮ ಓದುಗರೂ ಆಗಿರುವ ಪ್ರಶಾಂತ್, ಈ ಕೃತಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಕಾದಂಬರಿಕಾರರಾಗಿ ಪದಾರ್ಪಣೆ ಮಾಡಿದ್ದಾರೆ.’ ಎಂದು ಪ್ರಶಂಸಿದ್ದಾರೆ.

About the Author

ಪ್ರಶಾಂತ್ ಭಟ್

ಲೇಖಕ ಪ್ರಶಾಂತ್ ಭಟ್ ಅವರು ಮೂಲತಃ ಮಂಗಳೂರಿನವರು. ಇವರ ಚೊಚ್ಚಲ ಕೃತಿ ‘ಕಾಲಬಂಧ’. ...

READ MORE

Related Books