ಕಲಬುರಗಿ ಮಾಧ್ಯಮ

Author : ಶಿವರಾಮ ಅಸುಂಡಿ

Pages 172

₹ 115.00




Year of Publication: 2015
Published by: ಪ್ರಗತಿ ಗ್ರಾಫಿಕ್ಸ್, ಬೆಂಗಳೂರು
Phone: 9448102158

Synopsys

ಕಲಬುರಗಿ ಮಾಧ್ಯಮ ಕಲಬುರಗಿ ಜಿಲ್ಲೆಯ ಮಾಧ್ಯಮ ಚರಿತ್ರೆಯನ್ನು ಬಿಂಬಿಸುವ ಕೃತಿ. ಕಲಬುರ್ಗಿ ಜಿಲ್ಲೆಯ ಮಾಧ್ಯಮ ಇತಿಹಾಸವನ್ನು ಕಟ್ಟಿಕೊಟ್ಟಿದೆ. ಸ್ವಾತಂತ್ರ್ಯ ಪೂರ್ವದಿಂದ ಹಿಡಿದು 2015ರವರೆಗಿನ ಜಿಲ್ಲೆಯ ಮಾಧ್ಯಮ ಲೋಕವನ್ನು ಬಿಚ್ಚಿಡುತ್ತದೆ. ಹಸ್ತ ಪತ್ರಿಕೆಗಳು, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಕುರಿತಾದ ವಿವರಣಾತ್ಮಕ ಮಾಹಿತಿಯನ್ನೊಳಗೊಂಡಿದ್ದು, ಕಲಬುರಗಿ ಜಿಲ್ಲೆಯ ಹಿರಿಯ ಪತ್ರಕರ್ತರನ್ನು ಪರಿಚಯಿಸುವ ಪ್ರಯತ್ನವೂ ನಡೆದಿದೆ.

About the Author

ಶಿವರಾಮ ಅಸುಂಡಿ

ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಶಿವರಾಮ ಅಸುಂಡಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಅಸುಂಡಿ ಗ್ರಾಮದವರು. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಆರಂಭಿಸಿ ಮಾಧ್ಯಮದೊಂದಿಗೆ ನಂಟು ಬೆಳೆಸಿಕೊಂಡರು. ಎಂ.ಎ., ಎಂ.ಫಿಲ್., ಪಿಎಚ್.ಡಿ. ಪದವಿ ಪಡೆದಿರುವ ಅವರು ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗಲೇ ಮಾಧ್ಯಮ ಕ್ಷೇತ್ರ ಪ್ರವೇಶಿಸಿದರು. ಬಳ್ಳಾರಿಯ ’ಈ ನಮ್ಮ ಕನ್ನಡ ನಾಡು’ ದೈನಿಕದಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ .ಟಿ.ವಿ.ಗೆ ಸೇರಿ ಹಾವೇರಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. 2004ರಿಂದ ಕಲಬುರಗಿಯಲ್ಲಿ ಈಟಿವಿ ಪ್ರತಿನಿಧಿಯಾಗಿದ್ದಾರೆ.  ’ದು.ನಿಂ.ಬೆಳಗಲಿ ಅವರ ದೇವದಾಸಿ’ ಕಾದಂಬರಿ ಕುರಿತು ಎಂ.ಫಿಲ್. ಪದವಿ ಮಾಡಿರುವ ಅಸುಂಡಿ ಅವರು ಡಾ.ಮಲ್ಲಿಕಾ ಘಂಟಿ ಮಾರ್ಗದರ್ಶನದಲ್ಲಿ ’ದಲಿತ ...

READ MORE

Related Books