ಕಲಾಸ್ವಾದನೆ: ಆಧುನಿಕ ದೃಷ್ಟಿ

Author : ನಿಂಗಪ್ಪ ಎಂ. ಅಂಗಡಿ

Pages 116

₹ 125.00




Year of Publication: 2020
Published by: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ
Address: ಡೊಂಗರಗಾoವ ಗ್ರಾಮ, ಕಮಲಾಪುರ ತಾಲೂಕು, ಕಲಬುರಗಿ ಜಿಲ್ಲೆ
Phone: 97411 69055

Synopsys

ಲೇಖಕ ಡಾ. ನಿಂಗಪ್ಪ ಅಂಗಡಿ ಅವರ ಕೃತಿ-ಕಲಾ ಸ್ವಾದನೆ: ಆಧುನಿಕ ದೃಷ್ಟಿ. ಸಂಶೋಧನಾತ್ಮಕ ಲೇಖನ ಸಂಗ್ರಹವಿದು. ಮಾಹಿತಿ ತಂತ್ರಜ್ಞಾನವು ಜಾಗತೀಕರಣದ ಪ್ರಮುಖ ಅಸ್ತ್ರ. ದೃಶ್ಯಕಲಾ ಸಾಹಿತ್ಯದ ಅಭಿವೃದ್ಧಿಗಾಗಿ ಈ ಅಸ್ತ್ರದ ಸಮರ್ಥ ಬಳಕೆಯನ್ನು ಅಂಗಡಿಯವರಂತಹ ಸೃಜನಶೀಲ ಕಲಾಬೋಧಕರಿಗೆ ಸಾಧ್ಯವಾಗುತ್ತದೆ. ಸಂವೇದನಾಶೀಲ ಮನಸ್ಸು, ಚರಿತ್ರೆ, ಚಿತ್ರ,ಬಣ್ಣ, ತಂತ್ರಜ್ಞಾನ ಇತ್ಯಾದಿ ಭಾವ ಗ್ರಹಣಕ್ಕೆ ತಂದುಕೊಳ್ಳುವ ಕ್ರಮಗಳು ಕೃತಿಯಲ್ಲಿ ಕಂಡು ಬರುತ್ತವೆ. ಒಟ್ಟು 9 ವೈವಿಧ್ಯಮಯ ಲೇಖನಗಳಿವೆ. ಅನ್ಯಜ್ಞಾನ ಶಾಸ್ತ್ರ, ಶಿಸ್ತು, ಆಳವಾದ ಅಧ್ಯಯನದ ಅಗತ್ಯತೆಯನ್ನು ಬದಿಗೊತ್ತಿ ಒಬ್ಬ ದೃಶ್ಯಕಲಾ ಸಾಹಿತಿ ಅವುಗಳಿಗೆ ಸಂಬಂಧವಿರುವ ಸಂವೆದನಾ ನೆಲೆಗಳನ್ನು ಹೇಗೆ ಪಡೆಯಬಲ್ಲ ಎಂಬುದಕ್ಕೆ ಲೇಖಕರು ಸಾಕ್ಷಿ.

ಕರ್ನಾಟಕದಲ್ಲಿ ಆಧುನಿಕ ಕಲೆ -ಒಂದು ನೋಟ ಎಂಬ ಲೇಖನದಲ್ಲಿ ಆಧುನಿಕತೆಯೆಂಬ ವಿಚಾರವು ಬ್ರಿಟಿಷರ ಆಗಮನದಿಂದ ಭಾರತದಲ್ಲಿ ತಲೆಯೆತ್ತಿದೆ ಎಂಬುದು ಒಂದೆಡೆ; ಹೊಸತನದ ಸಂಸ್ಕೃತಿ ಮಿಶ್ರಣವು ಕೂಡ ಬ್ರಿಟಿಷರ ಆಗಮನದ ಪರಿಣಾಮವೇ ಎಂಬುದು ಮತ್ತೊಂದೆಡೆ. ಭಾರತದ ಆಳರಸರ ಆಶ್ರಯದಲ್ಲಿದ್ದ ಸಾಂಪ್ರದಾಯಿಕ ಕಾರ್ಯಚಟುವಟಿಕೆಗಳು ಬ್ರಿಟಿಷ್ ಸಂಸ್ಕೃತಿಯಿಂದ ಅವನತಿಯತ್ತ ಸಾಗಿದೆ ಎಂದೂ ಹೇಳುತ್ತಾರೆ. ಪಠ್ಯ ವಿಷಯದ ಕಲಾಪ್ರಯೋಗಗಳು ಅದರಲ್ಲಿ ಅನುಭಾವ ಹಾಗೂ ವೈಚಾರಿಕ ಪ್ರಯೋಗ ಎಂಬ ಎರಡು ನೆಲೆಯಲ್ಲಿ ನಡೆಯುತ್ತವೆ. ಪ್ರಾದೇಶಿಕ ಪರಿಸರದ ವೈವಿಧ್ಯತೆಯ ಸಂಘರ್ಷಗಳು ಇಂದಿನ ದೃಶ್ಯಕಲೆ ಗಳಲ್ಲಿ ಕಂಡುಬರುತ್ತವೆ.ಎಂದು ದಾಖಲಿಸುತ್ತಾರೆ.ಮಹಾಮಹಿಮ ಶ್ರೀ ಮೈಲಾರಲಿಂಗೇಶ್ವರ ಮತ್ತು ದೈವಭಿ ವ್ಯಕ್ತಿಯ ಜನಪದ ಕಲೆಗಳ ಒಂದು ದೃಶ್ಯ ಚಿಂತನೆ ಎಂಬ ಲೇಖನವು ಕಲೆ, ಜಾನಪದ ಮತ್ತು ಅಭಿವ್ಯಕ್ತಿ, ಎಂಬ ಮೂರು ವಿಚಾರಗಳು ವಿಭಿನ್ನವಾಗಿ ಮೂಡಿ ಬಂದಿದ್ದು, ಒಂದು ಸಮುದಾಯದ ಸಮಗ್ರತೆಯನ್ನು ದೃಶ್ಯ ರೂಪಕದಂತೆ ಚಿತ್ರಿಸಲಾಗಿದೆ. ರಾಜಪರಂಪರೆಯ ವರ್ಣಚಿತ್ರ ಕಲಾವಿದರ ಸುಬ್ರಹ್ಮಣ್ಯರಾಜು, ಮಕ್ಕಳ ಚಿತ್ರಕಲೆ ಒಂದು ಪರಿಕಲ್ಪನೆ, ಕಂಪ್ಯೂಟರ್ ಚಿತ್ರಕಲೆ, ಕಂಪ್ಯೂಟರ್ ಧಾವಂತದತ್ತ ಚಿತ್ರಕಲೆಯ ಸವಾಲು ಮತ್ತು ಸಾಧ್ಯತೆಗಳು, ಕೊಚ್ಚಿಯ ಬೈನಾಲೆ ಕಲಾಪ್ರದರ್ಶನ ಒಂದು ನೋಟ, ಹೀಗೆ ವೈವಿಧ್ಯಮಯ ಲೇಖನಗಳಿವೆ. ದೃಶ್ಯಕಲೆ ಅಧ್ಯಯನದ ವಿದ್ಯಾರ್ಥಿಗಳಿಗೆ ಈ ಕೃತಿಯು ತುಂಬಾ ಪ್ರಯೋಜನಕಾರಿ. 

About the Author

ನಿಂಗಪ್ಪ ಎಂ. ಅಂಗಡಿ

ಲೇಖಕ ನಿಂಗಪ್ಪ ಎಂ. ಅಂಗಡಿ ಅವರು ಕಲಾವಿದರು. ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕಮಗಿ ಗ್ರಾಮದವರು. ಆರ್ಟ್ ಮಾಸ್ಟರ್ ಡಿಪ್ಲೊ, ಜಿ.ಡಿ. ಆರ್ಟ್, ಕರ್ನಾಟಕ ವಿವಿಯಿಂದ ಬಿಎಫ್ ಎ ಹಾಗೂ ಎಂಎಫ್ ಎ ಪದವಿ ಪಡೆದರು. ‘ಗ್ಲಾಸ್ ಪೇಂಟಿಗ್ಸ್ ಆಫ್ ಕರ್ನಾಟಕ: ಎ ಸ್ಟಡಿ’  ವಿಷಯವಾಗಿ ಹಂಪಿಯ ಕನ್ನಡ ವಿ.ವಿ.ಗೆ ಸಲ್ಲಿಸಿದ ಇವರ ಸಂಶೋಧನಾ ಮಹಾಪ್ರಬಂಧ. ಮೈಸೂರು, ಬೆಂಗಳೂರು ಹಾಗೂ ಧಾರವಾಡಗಳಲ್ಲಿ ಇವರು ತಮ್ಮ ಕಲಾಕೃತಿಗಳ ಪ್ರದರ್ಶನ ಮಾಡಿದ್ದಾರೆ. ಲಕ್ನೋ, ಪಣಜಿ, ದೆಹಲಿ, ಕೇರಳ ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಸಾಂಊಹಿಕವಾಗಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ದೇಶದಾದ್ಯಂಥ ನಡೆದ ಕಲಾಮೇಳ, ಚಿತ್ರಕಲಾಕೃತಿಗಳ ...

READ MORE

Related Books