ಕಲಾವಿದ ಎಂ.ಎಸ್. ಜತ್ತಿ

Author : ಪಿ.ಎಸ್. ಕಡೇಮನಿ

Pages 215

₹ 30.00




Year of Publication: 2017
Published by: ಲಿಂಗಾಯತ ಅಧ್ಯಯನ ಸಂಸ್ಥೆ,
Address: ಗದಗ

Synopsys

ವಿಜಯಪುರ ಜಿಲ್ಲೆಯ ಮಹಾಂತೇಶ ಶಂಕರಪ್ಪ ಜತ್ತಿ ಕರ್ನಾಟಕದ ಚಿತ್ರಕಲಾವಿದರಲ್ಲಿ ಒಬ್ಬರು. ಮುಂಬೈನ ಜೆ.ಜೆ. ಕಲಾಶಾಲೆಯಲ್ಲಿ ಅಧ್ಯಯನ ಮಾಡಿದ ಜತ್ತಿ ಅವರು ಕಲಾಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇಳಕಲ್ಲಿನ ಮಹಾಂತ ಜೋಳಿಗೆ ಸರಣಿ ಸೇರಿದಂತೆ ಅವರು ರಚಿಸಿರುವ ಭಾವಚಿತ್ರಗಳು, ಭೂದೃಶ್ಯ ಚಿತ್ರಣಗಳು ಕಣ್ಮನ ತಣಿಸುತ್ತವೆ.
ಛಾಯಾಗ್ರಹಣದಲ್ಲಿಯೂ ನುರಿತ ಜತ್ತಿ ಅವರು ಹತ್ತಕ್ಕೂ ಹೆಚ್ಚು ಕಲಾಪ್ರದರ್ಶನ, ಹಲವಾರು ಕಲಾಶಿಬಿರಗಳಲ್ಲಿ ಭಾಗಿಯಾಗಿದವರು. ಎಂ.ಎಸ್. ಜತ್ತಿ ಅವರ ಜೀವನ, ಸಾಧನೆ, ಕಲಾಕೃತಿಗಳ ಮಹತ್ವ, ದೊರೆತ ಪ್ರಶಸ್ತಿಗಳ ವಿವರವಾದ ಚರ್ಚೆಯನ್ನು ಪಿ.ಎಸ್. ಕಡೇಮನಿ ಅವರು ಈ ಪುಸ್ತಕದಲ್ಲಿ ನೀಡಿದ್ದಾರೆ. ಪುಟ್ಟ ಜೀವನ ಚರಿತ್ರೆಯಲ್ಲಿ ಜತ್ತಿಯವರ ಭಾವಚಿತ್ರಗಳು ಮತ್ತು ಕಲಾಕೃತಿಗಳನ್ನು ನೀಡಲಾಗಿದೆ.

About the Author

ಪಿ.ಎಸ್. ಕಡೇಮನಿ
(01 June 1954)

ಕಲಾವಿದ ಪಿ.ಎಸ್‌. ಕಡೇಮನಿ ಅವರು ವಿಜಯಪುರದ ನಿವಾಸಿ. 1954ರ ಜೂನ್‌ 1ರಂದು ಜನಿಸಿದ ಅವರು ಚಿತ್ರ ಕಲಾವಿದರು. ಭಾವಚಿತ್ರ ಪೇಂಟಿಂಗ್‌ ಮಾಡುವುದರಲ್ಲಿ ನಿಷ್ಣಾತರಾಗಿರುವ ಕಡೇಮನಿ ಅವರು ಕಲಾವಿದ ಎಂ.ಎಸ್‌. ಜತ್ತಿ ಕುರಿತ ಜೀವನ ಚರಿತ್ರೆಯನ್ನು ಪ್ರಕಟಿಸಿದ್ದಾರೆ. ...

READ MORE

Related Books