ಕಲೆಯಾಗಿ ಪ್ರಸಾದನ

Author : ಮೇಕಪ್‌ ನಾಣಿ

Pages 66

₹ 150.00
Year of Publication: 1998
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

ಗ್ರೀನ್‌ ರೂಂ ನಾಣಿ ಅಥವಾ ಮೇಕಪ್‌ ನಾಣಿ ಎಂದೇ ಹೆಸರಾಗಿರುವ ನಾಣಿ ಅವರದು ಪ್ರಸಾದನ ಕ್ಷೇತ್ರದಲ್ಲಿ ಅಪಾರ ಅನುಭವ. ಭಾರತದ ವಿರಳ ಪ್ರಸಾದನ ತಜ್ಞರಲ್ಲಿ ಅವರು ಪ್ರಮುಖರು. ನಾಟಕ, ಚಲನಚಿತ್ರ ಕ್ಷೇತ್ರಗಳಲ್ಲಿರುವ ಕರ್ನಾಟಕದ ಬಹುಸಂಖ್ಯಾತ ಕಲಾವಿದರು ನಾಣಿಯವರ ಮೇಕಪ್ಪಿನಿಂದ ಮೆರುಗು ಪಡೆದವರೇ ಆಗಿದ್ದಾರೆ. ಇಂಗ್ಲೆಂಡಿನಲ್ಲಿ ಕಲಿತು ನಾಟ್ಯ ಹಾಗೂ ಪ್ರಸಾದನ ಕಲೆಗಳ ಆಳ-ಅಗಲಗಳನ್ನು ಅರಿತು ತಮ್ಮ ಜ್ಞಾನವನ್ನು ಅನುಭವದ ಮೂಸೆಯಲ್ಲಿಟ್ಟು ಇನ್ನೂ ಸಮೃದ್ಧಗೊಳಿಸಿಕೊಂಡಿರುವ ನಾಣಿ ಅವರು ಈ ಪುಸ್ತಕದಲ್ಲಿ ಪ್ರಸಾದನ ಕುರಿತು ಸುಲಲಿತವಾಗಿ ವಿವರಿಸಿದ್ದಾರೆ.

About the Author

ಮೇಕಪ್‌ ನಾಣಿ

ಗ್ರೀನ್‌ ರೂಮ್‌ ನಾಣಿ ಅಥವಾ ಮೇಕಪ್‌ ನಾಣಿ ಎಂದೇ ಹೆಸರಾಗಿರುವ ನಾಣಿ ಅವರ ಪೂರ್ಣ ಹೆಸರು ಬೆಳವಾಡಿ ನಂಜುಂಡಯ್ಯ ನಾರಾಯಣ. ಇವರು 1929 ನವೆಂಬರ್‌ 3ರಮದು ತುಮಕೂರಿನಲ್ಲಿ ಜನಿಸಿದರು. ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ಶಿಕ್ಷಣ ಪಡೆದ ಇವರು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇಂಗ್ಲೆಂಡಿನಲ್ಲಿ ನಾಟ್ಯಕಲೆ ಕಲಿತು, ಪ್ರಸಾಧನ ಕಲೆಗಳ ಆಳ-ಅಗಲವನ್ನು ಅಧ್ಯಯನ ನಡೆಸಿದ್ದಾರೆ. ಸಿನಿಮಾ ನಿದೇರ್ಶನ, ನಟನೆಯಲ್ಲಿಯೂ ತೊಡಗಿಸಿಕೊಂಡಿದ್ದ ಇವರು ನಿವೃತ್ತಿ-ಪ್ರವೃತ್ತಿ ಧಾರವಾಹಿಯನ್ನು ನಿದೇರ್ಶಿಸಿದ್ದಾರೆ. ಪ್ರೊ. ಹುಚ್ಚುರಾಯ ಸಿನಿಮಾದ ಪಾತ್ರದ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯು ಸಂದಿದೆ.  ಇವರಿಗೆ ಕರ್ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿದೆ. ‘ಕಲೆಯಾಗಿ ಪ್ರಸಾದನ’ ಕೃತಿಯನ್ನು ರಚಿಸಿದ್ದಾರೆ. ...

READ MORE