ಕಲಿತದ್ದು ಕಲಿಸಿದ್ದು

Author : ಬಿ.ಎ. ವಿವೇಕ ರೈ

Pages 152

₹ 150.00




Year of Publication: 2019
Published by: ಸಾವಣ್ಣ ಎಂಟರ್‌ಪ್ರೈಸಸ್‌
Address: ಸಂ.57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿಬೆಂಗಳೂರು

Synopsys

ಬಿ.ಎ. ವಿವೇಕ ರೈ ಅವರ ಬದುಕು ಕುರಿತ ಚಿತ್ರಣ ನೀಡಿರುವ ಕೃತಿ ’ಕಲಿಸಿದ್ದು ಕಲಿತದ್ದ”. ಕೃತಿಯ ಬಗ್ಗೆ ಜೋಗಿ ಅವರು ಬರೆಯುತ್ತಾ, ’ಬಿ.ಎ. ವಿವೇಕ ರೈ ಅವರ ಬದುಕಿನ ಪಯಣದಲ್ಲಿ ನಾನೂ ಸಹಯಾತ್ರಿ ಎನ್ನುವುದು ನನಗೆ ಹೆಮ್ಮೆಯ ಸಂಗತಿ. ಅವರು ಬದುಕಿದ ರೀತಿಯ ಒಂದಿಷ್ಟು ಮುಖಗಳನ್ನಾದರೂ ನಾನು ಹತ್ತಿರದಿಂದ ಕಂಡಿದ್ದೇನೆ. ನನ್ನ ಮನದ 'ಗಿಳಿಸೂವೆ'ಗೆ ಕಂಡಿದ್ದಕ್ಕಿಂತ ವಿಶೇಷವಾದ, ಅಪರೂಪವಾದ ಲೋಕ ಈ ಕೃತಿಯಲ್ಲಿದೆ. ನಾಲ್ಕು ಗೋಡೆಗಳ ಒಳಗೂ- ಅದರಾಚೆಗೂ ವಿವೇಕ ರೈ ಕಲಿತಿದ್ದಾರೆ ಹಾಗೂ ಕಲಿಸಿದ್ದಾರೆ. ನಿರಂತರ ಕಲಿಯುವಿಕೆಗೆ ರೈ ಅವರು ಒಂದು ಶ್ರೇಷ್ಠ ಮಾದರಿ. ಈ ಕೃತಿ ನಮ್ಮ ಬದುಕಿನ ಬಾಗಿಲನ್ನೂ ತೆರೆಯುತ್ತದೆ ಎನ್ನುವ ನಂಬಿಕೆ ನನ್ನದು’ ಎಂದಿದ್ದಾರೆ.

About the Author

ಬಿ.ಎ. ವಿವೇಕ ರೈ
(08 December 1946)

ಡಾ. ಬಿ.ಎ.ವಿವೇಕ ರೈ ಸಂಸ್ಕೃತಿ ಚಿಂತಕರು. ಕನ್ನಡ-ತುಳು ಭಾಷೆಯ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರು. ಅವರ ಹುಟ್ಟೂರು ಪುತ್ತೂರು ತಾಲೂಕಿನ 'ಪುಣಚಾ'. (ಜನನ: 1946ರ ಡಿಸೆಂಬರ್ 8ರಂದು), ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ, ಮತ್ತೂರಿನಲ್ಲಿ ಪಿಯುಸಿ, ಬಿಎಸ್ಸಿ ವ್ಯಾಸಂಗ, ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರಕೇಂದ್ರ ದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.  ಕನ್ನಡ ಮತ್ತು ತುಳು ಭಾಷೆಯ ಬಗ್ಗೆ ಅಪಾರ ಒಲವು-ಪಾಂಡಿತ್ಯ ಉಳ್ಳವರು. ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸಿದ ವಿದ್ವಾಂಸರು. ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ, ...

READ MORE

Related Books