ಕಲ್ಲಳ್ಳಿ ಗಜಲ್

Author : ದೊಡ್ಡಕಲ್ಲಹಳ್ಳಿ ನಾರಾಯಣಪ್ಪ

Pages 102

₹ 102.00




Year of Publication: 2020
Published by: ಸನ್ಮಿತ್ರ ಪ್ರಕಾಶನ
Address: ದೊಡ್ಡಕಲ್ಲಹಳ್ಳಿ. ಕೋಲಾರ ಜಿಲ್ಲೆ

Synopsys

ಲೇಖಕ ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಅವರ ಗಜಲ್ನ ಸಂಕಲನ-ಕಲ್ಲಳ್ಳಿ ಗಜಲ್. ಒಟ್ಟು 40 ಗಜಲ್ ಗಳಿವೆ. ಪ್ರತೀ ಗಜಲ್ ಗೂ ರಮೇಶ್ ಅಗ್ರಹಾರ ಅವರು ಬಿಡಿಸಿದ ಚಿತ್ರಗಳಿವೆ. ಇಲ್ಲಿಯ ಗಜಲ್ ಗಳಲ್ಲಿ ಸಾಮಾಜಿಕ ತಲ್ಲಣಗಳು, ರಾಜಕೀಯ ಅರಾಜಕತೆಗಳು ನೋವು-ನಲಿವು , ನಿಟ್ಟುಸಿರು ಮುಖ್ಯ ವಸ್ತುಗಳಾಗಿವೆ.  ಗಜಲ್ ಗಳ ರಚನೆ ಚೌಕಟ್ಟಿಗಿಂತ ಭಾವಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಕಂಡು ಬರುತ್ತದೆ. ಭಾವ-ಅರ್ಥದ ದೃಷ್ಟಿಯಿಂದ ಇಲ್ಲಿಯ ಗಜಲ್ ಗಳು ಓದುಗರ ಗಮನ ಸೆಳೆಯುತ್ತವೆ. 

About the Author

ದೊಡ್ಡಕಲ್ಲಹಳ್ಳಿ ನಾರಾಯಣಪ್ಪ
(01 August 1982)

ಲೇಖಕ  ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಅವರು ಕೋಲಾರ ಜಿಲ್ಲೆಯ  ಮಾಲೂರು ತಾಲ್ಲೂಕಿನ ದೊಡ್ಡಕಲ್ಲಹಳ್ಳಿ ಗ್ರಾಮದವರು. ಎಂ.ಎ,  ಬಿ.ಇಡಿ ಪದವೀಧರರು. ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಳೇಸಂದ್ರ ಗ್ರಾಮದಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ. ಕೃತಿಗಳು: ಬೆಂಗಾಡು, ಉತ್ತೀತೀಯ ಹಾಡು  (ಕವನ ಸಂಕಲನಗಳು) ಎದೆಯೊಳಗಿನ ಇಬ್ಬನಿ ,  ಕಲ್ಲಳ್ಳಿ ಗಜಲ್ (ಗಜಲ್  ಸಂಕಲನಗಳು) ಪ್ರಶಸ್ತಿ-ಗೌರವಗಳು: ಗೋವಿಂದದಾಸ್ ಪ್ರಶಸ್ತಿ ಹಾಗೂ ಬೆಳಕು ಸಾಹಿತ್ಯ ಪ್ರಶಸ್ತಿ,  ಮೈಸೂರು ಹಾಗೂ ಕಲಬುರಗಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಮಾನಾಂತರ ಕವಿಗೋಷ್ಠಿ, ಜನನುಡಿ ಮಂಗಳೂರು, ಮೇ ಸಾಹಿತ್ಯ ಸಮ್ಮೇಳನ ಧಾರವಾಡ, ಕೋಲಾರದಲ್ಲಿ ನಡೆದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ...

READ MORE

Related Books