ಕಲ್ಹಣನ ರಾಜ ತರಂಗಿಣಿ

Author : ಎಸ್. ಶಿವರಾಜಪ್ಪ

Pages 111

₹ 72.00




Year of Publication: 2019
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ಖ್ಯಾತ ವಿದ್ವಾಂಸ ಡಾ. ಎಸ್. ಶಿವರಾಜಪ್ಪ ಅವರು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಕೃತಿ -ಕಲ್ಹಣನ ರಾಜ ತರಂಗಿಣಿ. ಕಾಶ್ಮೀರದ ಬ್ರಾಹ್ಮಣ ಕಲ್ಹಣನಿಂದ 12ನೇ ಶತಮಾನದಲ್ಲಿ ಸಂಸ್ಕೃತದಲ್ಲಿ ಬರೆದ ಹಾಗೂ ವಾಯವ್ಯ ಭಾರತೀಯ ಉಪಖಂಡದ, ವಿಶೇಷವಾಗಿ ಕಾಶ್ಮೀರದ ರಾಜರ ಬಗ್ಗೆ ಬರೆದ ಒಂದು ಛಂದೋಬದ್ಧ ಐತಿಹಾಸಿಕ ಕಾಲಾನುಕ್ರಮ. ರಾಜತರಂಗಿಣಿ ಕೇವಲ ರಾಜರ ಪಟ್ಟಿಯಲ್ಲ; ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳ ಆಕರ. ರಾಜಾಸ್ಥಾನದವರ ದೃಷ್ಟಿಕೋನದಿಂದ ಬರೆದ ರಚನೆಯಾದರೂ ಮಧ್ಯಯುಗದಲ್ಲಿ ಭಾರತ ಜನತೆಯ ಜೀವನಸ್ವರೂಪವನ್ನು ಅರಿಯಲು ಸಹಾಯಕವಾಗಿದೆ.

About the Author

ಎಸ್. ಶಿವರಾಜಪ್ಪ

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಹೊಸೂರು ಗ್ರಾಮದ ಲೇಖಕ ಎಸ್. ಶಿವರಾಜಪ್ಪ, ವೃತ್ತಿಯಲ್ಲಿ ಸಂಸ್ಕೃತ ಪ್ರಾಧ್ಯಾಪಕರು. ಸಂಸ್ಕೃತದಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪದವೀಧರರು. ಮಹಾರಾಜ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಸಂಸ್ಕೃತ ಪ್ರವೇಶ, ರಾಜ ತರಂಗಿಣಿ ಮುಂತಾದವು ...

READ MORE

Related Books