ಕಮಲಾದೇವಿ ಚಟ್ಟೋಪಾಧ್ಯಾಯ

Author : ಗೀತಾ ಶೆಣೈ

Pages 120

₹ 80.00




Year of Publication: 2016
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಶಿವಾನಂದ ಸರ್ಕಲ್‌ ಹತ್ತಿರ, ಬೆಂಗಳೂರು
Phone: 08022161900

Synopsys

ಸಹಕಾರಿ ಸೇವಾಕ್ಷೇತ್ರ, ಸ್ವಾತಂತ್ಯ್ರ ಚಳವಳಿಯ ಸ್ವದೇಶಿ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವರು ಕಮಲಾದೇವಿ ಚಟ್ಟೋಪಾಧ್ಯಾಯ.

ಸೇವಾದಳದಲ್ಲಿ ಪ್ರವೇಶ ಪಡೆದ ಕಮಲಾದೇವಿ ಮುಂದೆ ಸಕ್ರಿಯ ರಾಜಕಾರಣಕ್ಕೆ ಪದಾರ್ಪಣೆ ಮಾಡಿದರು. ಸ್ವಾತಂತ್ಯ್ರ ಸಂಗ್ರಾಮದ ಎಲ್ಲ ಚಳವಳಿಗಳಲ್ಲಿ ಭಾಗವಹಿಸಿ ಕಾರಾಗೃಹ ಸೇರಿ ಅತ್ಯಂತ ಕಠಿಣ ದಿನಗಳನ್ನು ಕಳೆದರು. ಹೀಗೆ ಸ್ವಾತಂತ್ಯ್ರ ಹೋರಾಟದ ಮೂಲಕ ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಜೀವನ-ಸಾಧನೆ ಕುರಿತು ಜೋತ್ಸ್ನಾ ಕಾಮತ್ ಬರೆದ ಕೃತಿಯನ್ನು ಗೀತಾ ಶೆಣೈ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Reviews

(ಕಮಲಾದೇವಿ ಚಟ್ಟೋಪಾಧ್ಯಾಯ ಪುಸ್ತಕದ ಪರಿಚಯ, ಆಗಸ್ಟ್ 2012)

ದೇಶಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟು ಸಮರ್ಪಣಾಭಾವದಿಂದ ರಾಷ್ಟ್ರೀಯ ಮಟ್ಟದಲ್ಲಿ ಸ್ವಾತಂತ್ರ್ಯ ಚಳುವಳಿಯ ಎಲ್ಲ ಮಜಲುಗಳಲ್ಲಿ ಪಾಲ್ಗೊಂಡ ಧೀರೋದಾತ್ತ ಮಹಿಳೆ ಕಮಲಾದೇವಿ ಚಟ್ಟೋಪಾಧ್ಯಾಯ, ಸ್ವದೇಶಿ ಆಂದೋಲನದ ಕಾವು ಮುಗಿಲುಮುಟ್ಟಿದ್ದ ಕಾಲವದು. ಸ್ವಯಂ ಸೇವಿಕೆಯಾಗಿ ಸೇವಾದಲದಲ್ಲಿ ಪ್ರವೇಶ ಪಡೆದು ಸಕ್ರಿಯ ರಾಜಕಾರಣಕ್ಕೆ ಧುಮುಕಿ ಹೋರಾಟ ಗಳಲ್ಲಿ ತೊಡಗಿಕೊಂಡರು. ಗಾಂಧೀಜಿಯವರನ್ನೂ ಒಳಗೊಂಡಂತೆ ಅಂದಿನ ರಾಜಕೀಯ ಮುತ್ಸದ್ದಿ-ದೇಶಪ್ರೇಮಿ ಧುರೀಣರೊಂದಿಗೆ ನಿಕಟ ಸಂಪರ್ಕವಿದ್ದ ಈಕೆ ಒದಗಿಬಂದ ದೇಶಸೇವೆಯ ಯಾವ ಅವಕಾಶವನ್ನೂ ಬಿಟ್ಟುಕೊಡಲಿಲ್ಲ. ಕಾಂಗ್ರೆಸ್‌ ಅಧಿವೇಶನದಲ್ಲಿ - ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಧೈರ್ಯ- ಸಾಹಸ-ಛಲ-ಸ್ವಾಭಿಮಾನ ಧಮನಿ ಧಮನಿಗಳಲ್ಲೂ ಉಕ್ಕುತ್ತಿರುವಾಗ ಕಮಲಾದೇವಿಯಂತಹ ದೇಶಾಭಿಮಾನಿ ಮಹಿಳೆ ಹೇಗೆ ಸುಮ್ಮನಿರಲು ಸಾಧ್ಯ ? ಅವರು ವೈಯಕ್ತಿಕ ಸುಖ-ಸಂತೋಷಗಳನ್ನು ಬಲಿಗೊಟ್ಟರು. ಕಠಿಣ ಕಾರಾಗೃಹವಾಸ ಅನುಭವಿಸಿದರು. ಸಾರ್ವಜನಿಕ ಸೇವೆ ಅವರ ಪ್ರಥಮಾದ್ಯತೆ ಆಗಿತ್ತು ಅವರ ಕುಟುಂಬಜೀವನ ಭಗ್ನಗೊಂಡಿತ್ತಾದರೂ ಅವರು ಅದನ್ನು ಸಂಘರ್ಷವನ್ನಾಗಿ ಎಂದೂ ಮಾರ್ಪಡಿಸಿರಲಿಲ್ಲ. ಪ್ರಚಾರದ ಭರಾಟೆಯಿಲ್ಲದೆ ತ್ಯಾಗಮನೋಭಾವದಿಂದ ಮಾಡಿದ ನಿಸ್ಪೃಹ ಸೇವೆಯನ್ನು ಗುರುತಿಸಿ ವಿವಿಧ ಪುರಸ್ಕಾರಗಳು ಇವರಿಗೆ ಸಂದಿವೆ. ಭಾರತ ಸರಕಾರದ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರು. ಇವರ ಬಗ್ಗೆ ಸುಲಭ ಲಭ್ಯವಲ್ಲದ ಅಮೂಲ್ಯ ಮಾಹಿತಿಗಳನ್ನು ಶ್ರಮವಹಿಸಿ ಸಂಗ್ರಹಿಸಿ ಜೀವನ-ಸಾಧನೆಗಳನ್ನು ಕೊಂಕಣಿ ಭಾಷೆಯಲ್ಲಿ ಬರೆದವರು ಜ್ಯೋತ್ಸಾ ಕಾಮತ್ ಹಾಗೂ ಕನ್ನಡಕ್ಕೆ ಅನುವಾದಿಸಿದ ಗೀತಾ ಶೆಣೈ ಅವರ ಸಾಧನೆಯೇನೂ ಕಡಿಮೆಯದಲ್ಲ.

Related Books