ಕಂಬಾರ ಕಾವ್ಯ ಕಾರಣ

Author : ಸರಜೂ ಕಾಟ್ಕರ್‌

Pages 180

₹ 160.00




Published by: ಯಾಜಿ ಪ್ರಕಾಶನ
Address: ಹೊಸಪೇಟೆ
Phone: 9481042400

Synopsys

ಕಂಬಾರರು ಜನಪದ ಮಿಥ್‌ಗಳನ್ನ ಹೊಸ ರೀತಿಯಲ್ಲಿ ಹೇಳಿದವರು. ಹಳೆಯ ಮಿಥ್‌ಗಳನ್ನು ಭಂಜಿಸಿ, ಅವುಗಳಿಗೆ ಹೊಸ ಸ್ಪರ್ಶ ನೀಡಿದವರು. ಇಂತಹ ಬಹುಮುಖ ಪ್ರತಿಭೆ ಕಂಬಾರರ ಕಾವ್ಯವನ್ನು ನಂತರದ ಪೀಳಿಗೆಯ ಕವಿ, ಲೇಖಕರು ಈ ಕೃತಿಯಲ್ಲಿ ಹೊಸ ಬಗೆಯಲ್ಲಿ  ವಿವರಿಸಿದ್ದಾರೆ. ಒಬ್ಬ ಕವಿಯ ಕಾವ್ಯವನ್ನು ಹೊಸ ತಲೆಮಾರಿನವರು ಯಾವ ರೀತಿ ನೋಡಿದ್ದಾರೆಂಬುದನ್ನು ಇಲ್ಲಿನ ಬರಹಗಳು ವಿವರಿಸುತ್ತದೆ. ಕಂಬಾರರ ಪುತ್ರಿ ಜಯಶ್ರೀ ಸೇರಿದಂತೆ ನಾಡಿನ 26 ಮಂದಿ ಹಿರಿಯ ಕಿರಿಯ ಕವಿಗಳು ಒಂದೊಂದು ಕವನದ ಕುರಿತು ದಾಖಲಿಸಿರುವ ಅನಿಸಿಕೆಗಳು ಈ ಕೃತಿಯಲ್ಲಿವೆ.

About the Author

ಸರಜೂ ಕಾಟ್ಕರ್‌
(14 August 1953)

ವೃತ್ತಿಯಲ್ಲಿ ಪತ್ರಕರ್ತರು ಆಗಿರುವ ಕವಿ ಸರಜೂ ಕಾಟ್ಕರ್ ಅವರು ಜನಿಸಿದ್ದು (1953 ಆಗಸ್ಟ್‌ 14ರಂದು) ಹುಬ್ಬಳ್ಳಿಯಲ್ಲಿ . ತಂದೆ ಹಣಮಂತರಾವ್, ತಾಯಿ ಗೌರಾಬಾಯಿ.  ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ (ಕನ್ನಡ) ಪದವೀಧರರು.ಕರ್ನಾಟಕ ವಿ.ವಿ.ಯಿಂದ ‘ಕನ್ನಡ-ಮರಾಠಿ ದಲಿತ ಸಾಹಿತ್ಯ: ಒಂದು ಅಧ್ಯಯನ’ ವಿಷಯವಾಗಿ (1994) ಪಿಎಚ್ ಡಿ ಪಡೆದರು. ಸಂಯುಕ್ತ ಕರ್ನಾಟಕದಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಂತರ ಇಂಡಿಯನ್‌ ಎಕ್ಸ್‌ಪ್ರೆಸ್‌ ಬಳಗದ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಸೇರಿದಂತೆ ಸರ್ಕಾರದ ಹಲವಾರು ಅಕಾಡೆಮಿ, ಸಮಿತಿ ಹೀಗೆ ವಿವಿಧ ಜವಾಬ್ದಾರಿತ ಸ್ಥಾನಗಳನ್ನು ನಿರ್ವಹಿಸಿದ್ದಾರೆ.  ಕೃತಿಗಳು: ಬೆಂಕಿ-ನೀರು, ಹಸಿದ ನೆಲ, ಸೂರ್ಯ, ...

READ MORE

Related Books