ಕಣ

Author : ಟಿ.ಗೋವಿಂದರಾಜು

Pages 236

₹ 200.00




Year of Publication: 2019
Published by: ಶ್ರೀಮತಿ ಮಲ್ಲಮ್ಮ ಪಟೇಲ್ ನಾರಸೀಗೌಡ ಸಾಂಸ್ಕೃತಿಕ ಟ್ರಸ್ಟ್ರಿ
Address: ನಂ. 1273, 7ನೇ ಕ್ರಾಸ್, ಚಂದ್ರಾ ಬಡಾವಣೆ, ವಿಜಯನಗರ, ಬೆಂಗಳೂರು- 560040
Phone: 9964124831

Synopsys

‘ಕಣ’ ಲೇಖಕ ಡಾ. ಟಿ. ಗೋವಿಂದರಾಜು ಅವರು ಜಾನಪದದ ಬಗ್ಗೆ ಬರೆದಿರುವ ಸಂಶೋಧನಾತ್ಮಕ ಕೃತಿ. ಗೋವಿಂದರಾಜು ಅವರು ಜಾನಪದವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದವರು. ರಾಷ್ಟ್ರೀಯ ಅಂತಾರಾಷ್ಟ್ರೀಯ ಕಮ್ಮಟಗಳಲ್ಲಿ ಪಾಲ್ಗೊಂಡು ತರಬೇತಿ ಪಡೆದವರು. ವಿಶ್ವವಿದ್ಯಾನಿಲಯ ವ್ಯಾಪ್ತಿಯಿಂದ ಹೊರಗಿದ್ದುಕೊಂಡು ತಮ್ಮ ಮಿತಿಯಲ್ಲೇ ತಮಗೆ ಸಾಧ್ಯವಾಗುವಷ್ಟು ಸಕ್ರಿಯವಾಗಿಯೇ ಜಾನಪದ ಕೆಲಸವನ್ನು ಮಾಡುತ್ತಾ ಬಂದವರು.

ಈ ಕೃತಿಯಲ್ಲಿ ಅಧಿಜಾನಪದ: ಪರಿಕಲ್ಪನೆ, ಅರ್ಥವಿಸ್ತರಣೆ, ಒಗಟಿಗೆ ಎಷ್ಟು ಉತ್ತರ, ಪ್ರಾಚ್ಯ ವಾದ್ಯವಿಜ್ಞಾನ, ಆರತಕ್ಷತೆ ಜನಗಳು- ಒಂದು ಅಂತರ್ ನೋಟ, ದನಗಳ ಜಾತ್ರೆ- ಒಂದು ಜಾನಪದ ಅಧ್ಯಯನ, ಜಾನಪದ ಅಧ್ಯಯನದ ಒಂದು ಘಟಕವಾಗಿ-ಹಳ್ಳಿ, ಆಯಗಾರರು, ಹಡದಿಗಾರರು ಹಾಗೂ ವಿನಿಮಯಗಾರರು, ದಕ್ಷಿಣ ಕರ್ನಾಟಕದ ಗ್ರಾಮವಿನ್ಯಾಸಗಳು, ಮುಸ್ಲಿಮರ ಮದುವೆ ಸಂಪ್ರದಾಯ, ಸಾಂದರ್ಭಿಕ ಸಿದ್ಧಾಂತ, ಸ್ಥಿತ್ಯಂತರದ ಬದುಕಿನಲ್ಲಿ ಬೇಟೆ ಸಂಸ್ಕೃತಿ, ಕರ್ನಾಟಕ ಗ್ರಾಮದೇವತೆಗಳು, ಗರತಿಯ ಹಾಡು- ಪುನರ್ವಿಮರ್ಶೆ, ಜನಪದಗೀತೆಗಳನ್ನು ಬರೆಯುತ್ತಿದ್ದರೇ, ಜನಪದ ಸಂಗೀತದ ಉಳಿವು ಬೆಳವು, ಜಾನಪದ 1995: ಜೀವನ ಚರಿತ್ರೆಗಳು ಮತ್ತು ಸಂಸ್ಮರಣ ಗ್ರಂಥಗಳು, ಕರ್ನಾಟಕ ಜಾನಪದೀಯ ಚಟುವಟಿಕೆಗಳು, ಜನಪದದ ಕವಿತೆಯ ಅಂತರಂಗ-ಬಹಿರಂಗ ಸೇರಿದಂತೆ ಜಾನಪದ ಆಸಕ್ತರ ಗಮನಸೆಳೆಯುವ ಹಲವು ಅಧ್ಯಯನಗಳಿವೆ. ಲೇಖಕ ಗೋವಿಂದರಾಜು ಜಾನಪದ ಅಧ್ಯಯನಕ್ಕೆ ಹೊಸ ನೋಟ-ಒಳನೋಟಗಳನ್ನು ಸೇರಿಸಿದ್ದಾರೆ. ವಿಚಾರಬಿಂದುಗಳ ಎಳೆ ಹಿಡಿದು ಸಾಗಿ ಅವನ್ನು ವಿವಿಧ ಸ್ತರಗಳಲ್ಲಿ ವಿಸ್ತರಿಸಿ ಸಂಸ್ಕೃತಿಯ ಸುಮುಖವಾದ, ಸಮತೂಕದ ವ್ಯಾಖ್ಯಾನ ಮಾಡಿದ್ದಾರೆ.

About the Author

ಟಿ.ಗೋವಿಂದರಾಜು

ಡಾ. ಟಿ. ಗೋವಿಂದರಾಜು ಕವಿಯಾಗಿ, ಪ್ರಬಂಧಕಾರರಾಗಿ, ಕತೆಗಾರರಾಗಿ ಪರಿಚಿತರು. ಇವರು ಹುಟ್ಟಿದ್ದು 15.01.1953 ದೊಡ್ಡಬಳ್ಳಾಪುರ ತಾ. ಚನ್ನಾದೇವಿ ಅಗ್ರಹಾರದಲ್ಲಿ. ಇವರ ತಂದೆ  ದೊಡ್ಡೇರಿ ತಿಮ್ಮರಾಯಪ್ಪ, ತಾಯಿ  ಹೊನ್ನಮ್ಮ. ಕೃಷಿಕ ಮನೆತನದವರು. ಹೊನ್ನಮ್ಮ ಅವರು ತಮ್ಮ ಅಪಾರ ದೇಸೀ ಜ್ಞಾನ ವಿಶೇಷದ ಅಭಿವ್ಯಕ್ತಿಗಾಗಿ ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದವರು. ಬೆಂಗಳೂರು ವಿಶ್ವಿ ವಿದ್ಯಾಲಯದಿಂದ  ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಹಾಗೂ ಜಾನಪದ ಅಧ್ಯಯನದಲ್ಲಿ ಪಿಎಚ್.ಡಿ. ಪಡೆದ ಟಿ. ಗೋವಿಂದರಾಜು,  ಪ್ರಾರಂಭಕ್ಕೆ ಸಿನಿಮಾ ಕ್ಷೇತ್ರ, ಎಚ್. ಎಲ್. ನಾಗೇಗೌಡರೊಂದಿಗೆ ಜಾನಪದ ಟ್ರಸ್ಟ್ ಕಾರ್ಯದರ್ಶಿಯಾಗಿ, ಜಾನಪದ ಜಗತ್ತು  ಪತ್ರಿಕಾ ಸಂಪಾದಕನಾಗಿ ದುಡಿದ ಹಿರಿಮೆ ಹೊಂದಿದ್ದಾರೆ. ಸರ್ಕಾರದ ವಿವಿಧ ...

READ MORE

Related Books