ಕನಕದಾಸರು ಮತ್ತು ಸೂರದಾಸರು ತಾತ್ವಿಕ ನೆಲೆಗಳು

Author : ಎನ್.‌ ದೇವರಾಜ್

Pages 98

₹ 90.00




Year of Publication: 2018
Published by: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ
Address: ಪ್ರಕಾಶಕರು: ಆಯುಕ್ತರು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆ
Phone: 08375-289388

Synopsys

‘ಕನಕದಾಸರು ಮತ್ತು ಸೂರದಾಸರು ತಾತ್ವಿಕ ನೆಲೆಗಳು’ ಎನ್‌.ದೇವರಾಜ್‌ ಅವರ ಕೃತಿಯಾಗಿದೆ. ಕನಕದಾಸರು ಕಲಿಯೂ, ಕವಿಯೂ ಆಗಿದ್ದವರು. ದಾಸರಲ್ಲಿ ಕವಿ ಕವಿಗಳಲ್ಲಿ ದಾಸರಾಗಿ ಯಾವುದೇ ಒಂದು ಜಾತಿ, ಮತ ಪಂಥಕ್ಕೆ ಸೀಮಿತಗೊಳ್ಳದ ಇವರು ದಾಸ, ಭಕ್ತ, ದಾಸಶ್ರೇಷ್ಠ, ಸಂತ, ಮಹಾತ್ಮಾ, ಮಹಾಮಾನವತಾವಾದಿ, ಸಾಮಾಜಿಕ ಚಿಂತಕ, ವೈಚಾರಿಕತೆಯ ಹರಿಕಾರ, ದಾರ್ಶನಿಕ ಕನಕದಾಸರೆಂದು ಜನಮನದಲ್ಲಿ ನೆಲೆ ನಿಂತಿದ್ದಾರೆ. ಸರ್ಕಾರ ಹೋರಾಟದಿಂದ ಕೂಡಿದ ಅವರ ಆದರ್ಶ ಬದುಕು ಹಾಗೂ ಸಾಮಾಜಿಕ, ಧಾರ್ಮಿಕ, ವೈಚಾರಿಕ ಚಿಂತನೆಗಳಿಂದ ಕೂಡಿದ ಅವರ ಸಾಹಿತ್ಯ, ವರ್ಗ ಬೇಧಗಳಿಲ್ಲದ ಅವರ ಹೊಸ ಸಮಾಜ ಪರಿಕಲ್ಪನೆಯ ಚಿಂತನೆಗಳು ಮುಂದಿನ ತಲೆಮಾರುಗಳಿಗೆ ಅವಶ್ಯವೆಂದರಿತ ಕರ್ನಾಟಕ 2006-07 ರಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದೆ. ಆ ಮೂಲಕ ಅವರ ಜನ್ಮಭೂಮಿ ಬಾಡ ಹಾಗೂ ಕರ್ಮಭೂಮಿ ಕಾಗಿನೆಲೆಯನ್ನು ಅಂತರ್‌ರಾಷ್ಟ್ರೀಯ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿ ಪಡಿಸುತ್ತಿದೆ ಎನ್ನುತ್ತಾರೆ ಹೊರಪೇಟೆ ಮಲ್ಲೇಶಪ್ಪ.

About the Author

ಎನ್.‌ ದೇವರಾಜ್

ಎನ್. ದೇವರಾಜ್‌ ಅವರು ಎಂ.ಎ, ಎಂ.ಇಡಿ, ಪಿ.ಹೆಚ್‌ಡಿ ಹಾಗೂ ಎಂ.ಬಿ.ಎ. ಪದವೀಧರರು. ಕನ್ನಡ ಭಾಷಾ ಸಾಹಿತ್ಯ, ದಾಸ ಚರಿತ್ರೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಆ ಕುರಿತಾಗಿ ಸಂಶೋಧನಾ ಪ್ರಬಂಧಗಳನ್ನೂ ರಚಿಸಿದ್ದಾರೆ. ಬರವಣಿಗೆ ಇವರ ಹವ್ಯಾಸವಾಗಿದೆ. ಕೃತಿಗಳು: ಕನಕದಾಸರು ಮತ್ತು ಸೂರದಾಸರು ತಾತ್ವಿಕ ನೆಲೆಗಳು ...

READ MORE

Related Books