ಕನಕದಾಸರ ಮೋಹನತರಂಗಿಣಿ ಮಹಾಕಾವ್ಯದಲ್ಲಿ ಹಕ್ಕಿಗಳು

Author : ಶಶಿಧರಸ್ವಾಮಿ ಆರ್. ಹಿರೇಮಠ

Pages 184

₹ 220.00




Year of Publication: 2020
Published by: ಖುಷಿ ಪ್ರಕಾಶನ ತುಮಕೂರು
Address: ಶಶಿಧರಸ್ವಾಮಿ ಆರ್. ಹಿರೇಮಠ, ಶ್ರೀಗುರು ಕಂತೀಸ್ವಾಮಿ ಮಠ, ಅಂಚೆ:ಕದರಮಂಡಲಗಿ ತಾ: ಬ್ಯಾಡಗಿ, ಜಿ: ಹಾವೇರಿ-581106
Phone: 8861308304

Synopsys

ಕನಕದಾಸರು ತಮ್ಮೂರಾದ ಕದರಮಂಡಲಗಿ ಶ್ರೀಕಾಂತೇಶನ ಸನ್ನಿಧಿಗೆ ಬಂದು ‘ಮೋಹನತರಂಗಿಣಿ’ ಕಾವ್ಯದಲ್ಲಿ ಪ್ರಸ್ತಾಪಿಸಿದ ಹಕ್ಕಿಗಳ ಕುರಿತು ಶಶಿಧರ ಸ್ವಾಮಿ ಆರ್. ಹಿರೇಮಠ ಅವರು ಪ್ರಬಂಧ ಬರೆದಿದ್ದಾರೆ. ಶೃಂಗಾರ ಭರಿತ ಕಾವ್ಯದ ಏರಿಳಿತಗಳು ಲಯಬದ್ದವಾಗಿ ಮೇಳೈಸಿರುವ ಈ ಕಾವ್ಯದಲ್ಲಿ ಕಾಮದಹನ, ರತಿಯ ಪ್ರಲಾಪ, ಜಲಕ್ರಿಡೆ, ಭಾಣಾಸುರನ ಶಿವಪೂಜೆ, ಹರಿಹರರ ಕಾಳಗ ಹೀಗೆ ಪ್ರತಿ ಅಧ್ಯಾಯವೂ ಗಮನ ಸೆಳೆಯುವಂತಹವು. ವಿಶೇಷವಾಗಿ ಅವರು ಪ್ರಸ್ತಾಪಿಸಿದ ಹಕ್ಕಿಗಳ ಕುರಿತು ಕುತೂಹಲ ಮೂಡಿದ್ದರಿಂದ ಈ ಪ್ರಬಂಧ ಬರೆಯಲು ಪ್ರೇರಣೆ ಎಂದು ಲೇಖಕರು ಹೇಳಿದ್ದಾರೆ. ಮಾತ್ರವಲ್ಲ; ಅವುಗಳ ಕುರಿತಾಗಿ ವೈಜಾನಿಕ ಹಾಗೂ ಪೌರಾಣಿಕ ಹಿನ್ನೆಲೆಗಳನ್ನುಇಲ್ಲಿ ಉಲ್ಲೇಖಿಸಿದ್ದಾರೆ. 

‘ನಮ್ಮ ದೇಶಕ್ಕೆ ಬ್ರಿಟಿಷರು ಬರುವ ಮುಂಚೆ ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸುವ ಪ್ರವೃತ್ತಿ ನಮ್ಮಲ್ಲಿ ಇರಲಿಲ್ಲವಾದರೂ ನಮ್ಮ ಜನಪದರಲ್ಲಿ ಹಕ್ಕಿಗಳ ಹೆಸರುಗಳು ಹಾಸುಹೊಕ್ಕಾಗಿರುವುದು ಕಂಡು ಬರುತ್ತದೆ. ಆ ಕಾರಣವಾಗಿ, ಕನಕದಾಸರು ತಮ್ಮ ಕಾವ್ಯಗಳಲ್ಲಿ ಹಕ್ಕಿಗಳ ಹೆಸರುಗಳನ್ನು ಹೇಳುತ್ತ ಅವುಗಳ ನಡವಳಿಕೆಗಳನ್ನೂ ಸಹ ವಿವರಿಸಿದ್ದು, ಲೇಖಕರು ಸವಿಸ್ತಾರವಾಗಿ ಕಾಣಿಸಿದ್ದು ಕೃತಿಯ ವೈಶಿಷ್ಟ್ಯ.

 

About the Author

ಶಶಿಧರಸ್ವಾಮಿ ಆರ್. ಹಿರೇಮಠ
(04 October 1974)

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರು-ಶಶಿಧರಸ್ವಾಮಿ ಆರ್. ಹಿರೇಮಠ. ತಂದೆ: ರುದ್ರಮುನಿಸ್ವಾಮಿ, ತಾಯಿ: ಸಂಪತ್ತುಕುಮಾರಿ, ವನ್ಯಜೀವಿ ಛಾಯಾಗ್ರಹಣ ಇವರ ಹವ್ಯಾಸ ಮತ್ತು ಪರಿಸರ, ವನ್ಯಜೀವಿ, ಕೀಟ, ಪಕ್ಷಿ, ಸಸ್ಯ, ನಿಸರ್ಗ ಕುರಿತು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಕನಕದಾಸರ ಮೋಹನತರಂಗಿಣಿ ಮಹಾಕಾವ್ಯದಲ್ಲಿ ಹಕ್ಕಿಗಳು’ ಇವರ ಚೊಚ್ಚಲ ಕೃತಿ. ವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿ ಇವರ ಛಾಯಾಚಿತ್ರಗಳಿಗೆ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಸ್ವರ್ಣ ಪದಕ, ರಜತ ಪದಕ, ಕಂಚಿನ ಪದಕದ ಪ್ರಶಸ್ತಿಗಳು ಸಂದಿವೆ. ಇವರ ಛಾಯಾಗ್ರಹಣದಲ್ಲಿ AFIAP, AFIP, EFIP, FIC-G (Gold) ಡಿಸ್ಟಿಕ್ಷನ್ ಗೌರವ ಪ್ರಶಸ್ತಿಗಳು ...

READ MORE

Related Books