ಕನಕದಾಸರ ಸಾಹಿತ್ಯದಲ್ಲಿ ಮಹಿಳಾ ನೆಲೆಗಳು

Pages 78

₹ 80.00




Year of Publication: 2018
Published by: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ
Address: ಕಾಗಿನೆಲೆ, ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆ
Phone: 08375-289388

Synopsys

ಕನಕದಾಸರ ಕೀರ್ತನೆಗಳಲ್ಲಿನ ಭಾವ ಬಿಂಬಗಳು ಅನೇಕ ವಿಚಾರಗಳನ್ನು ಹೊಂದಿದ್ದು ಸಮಾಜದ ಎಲ್ಲ ಆಯಾಮಗಳನ್ನು ಕಂಡುಂಡ ಅನುಭವದೊಂದಿಗೆ ವಿಷದಪಡಿಸಿದಂತಿದೆ. ಮಹಿಳೆ ಎಲ್ಲ ಸ್ಥರದಲ್ಲೂ ಗಂಡಿಗೆ ಸಹಚಾರಣಿಯಾಗಿ ಜೀವನ ಸವೆಸಿದಾಕೆ. ಹೆಂಡತಿಯಾಗಿ, ತಾಯಿಯಾಗಿ, ಗೆಳತಿಯಾಗಿ ಹೀಗೆ ಅನೇಕ ಸ್ಥರಗಳಲ್ಲಿ ನೆಲೆನಿಂತು ಗಂಡಿನ ಶ್ರೇಯೋಭಿವೃದ್ಧಿಯನ್ನು ಕಾಣುವ ಹಂಬಲವುಳ್ಳವಳು ಎನ್ನುತ್ತದೆ ಲೇಖಕ ಪ್ರಕಾಶ ವೀ. ಅಮರದ ಅವರ ‘ಕನಕದಾಸರ ಸಾಹಿತ್ಯದಲ್ಲಿ ಮಹಿಳಾ ನೆಲೆಗಳು’ ಕೃತಿ. ಇಲ್ಲಿನ ಕಾವ್ಯಗಳು ಅಂದಿನ ಸಮಾಜ ಅಲ್ಲಿನ ವಿಶೇಷತೆಗಳು ಮತ್ತು ಭಿನ್ನತೆಗಳನ್ನು ಒಳಗೊಂಡಿವೆ. ಮಹಿಳೆಯನ್ನು ತನ್ನಕಾವ್ಯದಲ್ಲಿ ಕಾಣುವ ಕನಕದಾಸರು ಅನೇಕ ಸಲ ಸಮಕಾಲೀನ ಮತ್ತು ಸ್ಥಳೀಕರಣದ ಹಿನ್ನೆಲೆಯಲ್ಲಿ ಕಂಡಿದ್ದು, ಅದರೊಟ್ಟಿಗೆ ಅವಳನ್ನು ಉನ್ನತೀಕರಿಸುವ ಮತ್ತು ಅವಳಲ್ಲಿನ ಬಲಾಬಲವನ್ನು ತಿಳಿಸುವ ಪ್ರಯತ್ನವನ್ನು ಮಾಡಿದ್ದಾರೆ. ಮಹಿಳೆಯರ ನಿಲುವುಗಳು ಹಾಗೂ ಮಹಿಳೆಯರ ನಡೆನುಡಿಯ ಹಿನ್ನೆಲೆಯಲ್ಲಿ ಸಾಕಾರಗೊಂಡ ಜೀವನದ ಒಂದಷ್ಟು ವಿಚಾರಗಳನ್ನು ಇಲ್ಲಿ ಬಿತ್ತರಿಸಲಾಗಿದೆ. ಇಡೀ ಕಾಲವೇ ಮಹಿಳೆಯನ್ನು ತುಚ್ಚವಾಗಿ ಕಾಣುತ್ತಿದ್ದಾಗ ಅವಳನ್ನು ಸಂಪೂರ್ಣವಾಗಿ ಬದಲಾಯಿಸದಿದ್ದರೂ ಅದರೊಟ್ಟಿಗೆ ಬದಲಾವಣೆಗಳು ಇಲ್ಲಿ ಗಮನಾರ್ಹವಾಗಿ ಮೂಡಿಬಂದಿದೆ. ಈ ಕೃತಿಯಲ್ಲಿನ ವಿಚಾರಗಳು ಹೀಗಿವೆ: ದಾಸಸಾಹಿತ್ಯ : ಮಹಿಳೆ, ಕನಕದಾಸರು: ಸಮಕಾಲೀನ ಮಹಿಳೆ, ಕನಕದಾಸರ ಸಾಹಿತ್ಯ: ಮಹಿಳೆ, ಕನಕದಾಸರ ಕಾವ್ಯದಲ್ಲಿನ ಸ್ತ್ರೀ ಪಾತ್ರಗಳು, ಕನಕದಾಸರ ಸ್ತ್ರೀ ಪರ ನಿಲುವುಗಳು, ಆಧ್ಯಾತ್ಮಿಕ ಸ್ವಾತಂತ್ಯ್ರ, ಜೈವಿಕ ಕಾರಣ, ಲಿಂಗ ಬೇದ ನಿರಾಕರಣೆ, ಮಾಯೆ ಪರಿಕಲ್ಪನೆ, ದೈವತ್ವ, ಧಾರ್ಮಿಕ ಪರಿಕಲ್ಪನೆ, ಸತಿಪತಿಗಳ ಸಖ್ಯ, ಸಾಮಾಜಿಕ ಸ್ವಾತಂತ್ಯ್ರ, ವ್ಯಕ್ತಿ ಸ್ವಾತಂತ್ಯ್ರ, ಅಭಿವ್ಯಕ್ತಿ ಸ್ವಾತಂತ್ಯ್ರ, ಕನಕದಾಸರ ಕಾವ್ಯ ಕೀರ್ತನೆಗಳಲ್ಲಿನ ವರ್ಣನೆಗಳು, ಸಮಾರೋಪ ಇವೆಲ್ಲಾವುಗಳನ್ನು ಒಳಗೊಂಡಿದೆ.

Related Books