ಕನಸಿನೂರಿನ ಕಿಟ್ಟಣ್ಣ

Author : ಕೆ. ಪ್ರಭಾಕರನ್

Pages 138

₹ 80.00




Year of Publication: 2012
Published by: ದೇಸೀ ಪುಸ್ತಕ
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

1994 ರಲ್ಲಿ ಕೇರಳ ರಾಜ್ಯದ ಬಾಲ ಸಾಹಿತ್ಯ ಇನ್ಸಿಟ್ಯೂಟ್ ನೀಡುವ ’ಅತ್ಯುತ್ತಮ ಸೃಜನಶೀಲ ಕೃತಿ’ ಎನ್ನುವ ಪುರಸ್ಕಾರಕ್ಕೆ ಪಾತ್ರವಾದ ’ಕನಸಿನೂರಿನ ಕಿಟ್ಟಣ್ಣ’ ಎನ್ನುವ ಮಕ್ಕಳ ಕಾದಂಬರಿಯ ಮೂಲ ಕರ್ತೃ ಇ. ಪಿ ಪವಿತ್ರನ್. ಮಲಯಾಳಂ ಭಾಷೆಯಿಂದ ಕನ್ನಡಕ್ಕೆ ತಂದವರು ಕೆ. ಪ್ರಭಾಕರನ್.

ಶೀರ್ಷಿಕೆಯೇ ಸೂಚಿಸುವಂತೆ ಈ ಕಾದಂಬರಿಯ ನಾಯಕ ಕಿಟ್ಟಣ್ಣ. ಕನಸಿನೂರು  ಎಂಬ ಪುಟ್ಟಹಳ್ಳಿಯ ಮಧ್ಯಮವರ್ಗದ ಜಮೀನುದಾರಿ ಕುಟುಂಬವೊಂದರಲ್ಲಿ ಜನಿಸಿದ ಕಿಟ್ಟಣ್ಣನ ಬುದ್ದಿಶಕ್ತಿ, ಅವನ ನಿಸರ್ಗಪ್ರೇಮ, ನಿಸರ್ಗದೊಂದಿಗಿನ ಅವನ ವಿಚಿತ್ರ  ಒಡನಾಟ, ಅವನಿಂದಾಗುವ ಸಾಹಸಗಳು, ಅವನ ಬದುಕಿನಲ್ಲಾಗುವ ಆಕಸ್ಮಿಕ ತಿರುವುಗಳು ಮತ್ತು ಆಶ್ಚರ್ಯಕರ ಬೆಳವಣಿಗೆಗಳು ಇಡೀ ಕಾದಂಬರಿಯ ಕಥಾನಕದ ವಿವಿಧ ಶಾಖೆಗಳಾಗಿ ಟಿಸಿಲೊಡೆಯುತ್ತಾ ಹೋಗುತ್ತವೆ.

About the Author

ಕೆ. ಪ್ರಭಾಕರನ್
(26 April 1957)

ವೃತ್ತಿಯಿಂದ ಎಂಜಿನಿಯರ್‌ ಆಗಿರುವ ಕೆ. ಪ್ರಭಾಕರನ್‌ ಅವರು ಮೆಸ್ಕಾಮ್‌ (ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ)ದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದರು (2014ರ ವರೆಗೆ). ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಸದ್ಯ ಶಿವಮೊಗ್ಗ ನಿವಾಸಿ. ಸಾಹಿತ್ಸಯ ಮುದಾಯ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಮಲೆಯಾಳಂನಿಂದ ’ಕನಸನೂರಿನ ಕಿಟ್ಟಣ್ಣ’ ಕೃತಿಯನ್ನು ಕನ್ನಡೀಕರಿಸಿದ್ದಾರೆ. ...

READ MORE

Related Books