ಕಂಡ ಹಾಗೆ (ಸಂಗ್ರಹ-1 )

Author : ಗೌರಿ ಲಂಕೇಶ್

Pages 173

₹ 113.00




Year of Publication: 2009
Published by: ಲಂಕೇಶ ಪ್ರಕಾಶನ
Address: ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು- 560004

Synopsys

ಗೌರಿ ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಅವರು ಬರೆದ ಅಂಕಣ ಬರೆಹಗಳ ಕೃತಿ-‘ಕಂಡ ಹಾಗೆ-ಸಂಗ್ರಹ -1'. ನೇರ ನಡೆಯ ಗೌರಿ ಅವರು ತಮ್ಮ ವಿಚಾರ-ಭಾವಗಳನ್ನು ನೇರ ನುಡಿಯಲ್ಲೇ ವ್ಯಕ್ತಪಡಿಸಿದ್ದರ ತದ್ರೂಪವೇ ಈ ಅಂಕಣ ಬರೆಹಗಳು. ಸಮಾಜ-ಶಿಕ್ಷಣ- ರಾಜಕೀಯ ವಿದ್ಯಮಾನಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅತ್ಯಂತ ಸಂಯುಮದಿಂದ ಸಾಮಾಜಿಕ ನ್ಯಾಯ ಹಾಗೂ ಕಳಕಳಿಯೊಂದಿಗೆ ಬರೆದ ಬರೆಹಗಳಿದ್ದು, ತಮ್ಮದೇ ಓದುಗರ ವರ್ಗವನ್ನು ನಿರ್ಮಿಸಿಕೊಳ್ಳುವಷ್ಟು ಶಕ್ತಿಯಾಲಿಯಾಗಿವೆ ಇಲ್ಲಿಯ ಬರೆಹಗಳು. ವಸ್ತು, ವಿಷಯ ಮಂಡನಾ ರೀತಿ, ಸಮರ್ಥನೆಗಳು, ಬದುಕಿನ ಬದ್ಧತೆಗಳು ಹೀಗೆ ಒಂದು ಬರೆಹವು ಮೌಲಿಕವಾಗಿ ಓದುಗರನ್ನು ಸೆಳೆಯುತ್ತದೆ.  

About the Author

ಗೌರಿ ಲಂಕೇಶ್
(29 January 1962 - 05 September 2017)

ಭಾರತೀಯ ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರು 1962  ಜನವರಿ 29 ರಂದು ಜನಿಸಿದರು. ಗೌರಿ ಲಂಕೇಶ್ ಪತ್ರಿಕೆ' ವಾರ ಪತ್ರಿಕೆ ನಡೆಸುತ್ತಿದ್ದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸಿದ್ಧ ಅಂಕಣಕಾರರು. 'ಆವರಣ' ಎಂಬ ವಿಕೃತಿ-ವಿಮರ್ಶೆ (ಸಂಪಾದಿತ), ಇದ್ರೀಸ್ ಶ್ರೀರವರ ದರವೇಶಿ ಕತೆಗಳು (ಅನುವಾದ), ಗಿಡುಗಗಳಿಗೆ ಬಲಿಯಾದ ಗಿಳಿ ಬೇನ್‌ಜೀರ್‌ (ಜೀವನಚಿತ್ರ), ಹಲವಾರು ಫ್ರೆಂಚ್, ಹಿಂದಿ ಇಂಗ್ಲಿಷ್ ಭಾಷೆಯ ಸಣ್ಣ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಬೆಂಗಳೂರು ದೆಹಲಿ ಹಾಗೂ ಫ್ರಾನ್ಸ್ ಮತ್ತು ಅಮೆರಿಕಾದಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ, ಲಂಕೇಶ್ ವಾರಪತ್ರಿಕೆಯ ಸಂಪಾದಕರು ಮತ್ತು ಗೈಡ್' ಮಾಸಪತ್ರಿಕೆಯ ಪ್ರಕಾಶಕರು, ಕರ್ನಾಟಕ ಕೋಮು ಸೌಹಾರ್ದ ...

READ MORE

Related Books