ಕನ್ನಡ ಬರಹದ ಸೊಲ್ಲರಿಮೆ – 7

Author : ಡಿ.ಎನ್. ಶಂಕರ ಬಟ್

Pages 296

₹ 280.00




Year of Publication: 2019
Published by: ಡಾ. ಡಿ. ಎನ್. ಶಂಕರ ಬಟ್
Address: ಡಾ.ಡಿ.ಎನ್.ಶಂಕರ್ ಬಟ್ ಅಂಚೆ ಪೆಟ್ಟಿಗೆ :- ಬಿ.ಮಂಚಾಲೆ ಸಾಗರ ೫೭೭ ೪೩೧

Synopsys

 ಅಲ್ಲಗಳೆತದ ಸೊಲ್ಲುಗಳು, ಕೇಳ್ವಿಸೊಲ್ಲುಗಳು, ಸೆಲವುಸೊಲ್ಲುಗಳು ಮತ್ತು ಬೆರಗುಸೊಲ್ಲುಗಳು ಎಂಬುದಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಿರುವ ಲೇಖಕರು ಕನ್ನಡದ ವ್ಯಾಕರಣವನ್ನು ವಿವರಿಸಿದ್ದಾರೆ. ಮೊದಲನೆಯ (ಹದಿನಯ್ದನೇ) ಅಧ್ಯಾಯಗಳಲ್ಲಿ ಎಸಕ/ಇರುಹಗಳನ್ನು ಇಲ್ಲವೇ ಅವುಗಳ ಒಂದು ಪಾಂಗನ್ನು ಅಲ್ಲಗಳೆಯುವ ಬಗೆ ಹೇಗೆ ಎಂಬುದನ್ನು ವಿವರಿಸಲಾಗಿದೆ. ಇದಲ್ಲದೆ, ಸೆಲವು, ಕೇಳ್ವಿ ಮೊದಲಾದ ಬೇರೆ ಬಗೆಯ ಸೊಲ್ಲುಗಳನ್ನು ಅಲ್ಲಗಳೆಯುವ ಬಗೆಯನ್ನೂ ಇದರಲ್ಲಿ ತಿಳಿಸಲಾಗಿದೆ. ಎರಡನೆಯ (ಹದಿನಾರನೇ) ಅಧ್ಯಾಯದಲ್ಲಿ  ಸೊಲ್ಲುಗಳು ತಿಳಿಸುವ ಎಸಕ/ಇರುಹಗಳ ಕುರಿತಾಗಿ ಇಲ್ಲವೇ ಅವುಗಳ ಒಂದು ಪಾಂಗಿನ ಕುರಿತಾಗಿ ಕೇಳ್ವಿಯನ್ನೆತ್ತುವುದು ಹೇಗೆ ಎಂಬುದನ್ನು ತಿಳಿಸಲಾಗಿದೆ. ಮೂರನೇ (ಹದಿನೇಳನೇ) ಪಸುಗೆಯಲ್ಲಿ ಸೊಲ್ಲುಗಳನ್ನು ಬಳಸಿ ಇನ್ನೊಬ್ಬರಿಂದ ಒಂದು ಎಸಕವನ್ನು ಮಾಡಿಸಿಕೊಳ್ಳುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ, ಮತ್ತು ಕೊನೆಯ (ಹದಿನೆಂಟನೇ) ಪಸುಗೆಯಲ್ಲಿ ಆಡುಗನು ತನ್ನ ಬೆರಗು, ನಲಿವು, ಕಿರಿಕಿರಿ, ಮೊದಲಾದ ಅನಿಸಿಕೆಗಳನ್ನು ಸೊಲ್ಲುಗಳ ಒಂದು ಬಗೆಯ ಮೂಲಕ ತಿಳಿಸುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ. ನೂರಾರು ನುಡಿಗಳಲ್ಲಿ ಸೊಲ್ಲುಗಳನ್ನು ಹೇಗೆ ಕಟ್ಟಲಾಗುತ್ತದೆ ಎಂಬುದನ್ನು ಅವುಗಳ ವ್ಯಾಕರಣಗಳಿಂದ ತಿಳಿದುಕೊಂಡು, ಕನ್ನಡದಲ್ಲಿ ಸೊಲ್ಲುಗಳನ್ನು ಕಟ್ಟುವ ಬಗೆಯನ್ನು ಈ ಹದಿನೆಂಟು ಪಸುಗೆಗಳಲ್ಲಿ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.

About the Author

ಡಿ.ಎನ್. ಶಂಕರ ಬಟ್

ಹಿರಿಯ ಲೇಖಕ ಡಿ.ಎನ್. ಶಂಕರ ಬಟ್ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾಶಾಸ್ತ್ರಜ್ಞರು. ಮದ್ರಾಸ್ ವಿಶ್ವವಿದ್ಯಾಲಯದಿಂದ  ಸಂಸ್ಕೃತದಲ್ಲಿ ಸ್ನಾತಕ್ಕೋತ್ತರ ಪದವೀಧರರು.  ಪುಣೆ ವಿಶ್ವವಿದ್ಯಾಲಯದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ.ಪದವೀಧರರು. ಅಮೇರಿಕಾದ ಸ್ಟ್ಯಾನ್ಪೋರ್‍ಡ್ ಯುನಿವರ್‍ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯುನಿವರ್‍ಸಿಟಿ, ಬೆಲ್ಜಿಯಂ ದೇಶದ ಆಂಟ್ವೆರ್‍ಪ್ ಯುನಿವರ್‍ಸಿಟಿ, ಜರ್‍ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮಯ್ಸೂರಿನಲ್ಲಿರುವ ಬಾರತೀಯ ಬಾಶಾ ಸಂಸ್ತಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಅರಕೆಗಾರರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಅರಕೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ...

READ MORE

Related Books