ಕನ್ನಡ ಚಿತ್ರಗೀತೆಗಳ ಚಾರಿತ್ರಿಕ ಅಧ್ಯಯನ

Author : ಎನ್.ಎಸ್. ಶ್ರೀಧರಮೂರ್ತಿ

Pages 216

₹ 150.00




Year of Publication: 2013
Published by: ಕರ್ನಾಟಕ ಚಲನಚಿತ್ರ ಅಕಾಡಮಿ
Address: ಬಾದಾಮಿ ಹೌಸ್, ಜೆ.ಸಿ. ರಸ್ತೆ, ಬೆಂಗಳೂರು- 560002

Synopsys

‘ಕನ್ನಡ ಚಿತ್ರಗೀತೆಗಳ ಚಾರಿತ್ರಿಕ ಅಧ್ಯಯನ’ ಎನ್.ಎಸ್. ಶ್ರೀಧರಮೂರ್ತಿ ಅವರ ಕೃತಿ. ಚಲನಚಿತ್ರ ಮಾಧ್ಯಮಕ್ಕೆ ಭಾರತೀಯ ಚಿತ್ರರಂಗ ನೀಡಿದ ಕೊಡುಗೆ ಎಂದೇ ಗುರುತಿಸಲ್ಪಟ್ಟಿರುವ ಪ್ರಕಾರ ಚಿತ್ರಗೀತೆಗಳು. ಇವು ಜನಪ್ರಿಯ ನೆಲೆಯಲ್ಲಿ ಹೆಚ್ಚಾಗಿ ಗುರುತಿಸಲ್ಪಟ್ಟಿದ್ದರೂ ಮಾಧ್ಯಮದ ಕಲಾತ್ಮಕ ಸ್ವರೂಪಕ್ಕೆ ತನ್ನದೇ ಆದ ಅನನ್ಯ ಕಾಣಿಕೆಯನ್ನು ನೀಡಿವೆ. ಆದರೆ ಇವುಗಳ ಕುರಿತು ಅಕಾಡೆಮಿಕ್ ಎನ್ನಿಸಬಲ್ಲ ಚರ್ಚೆಗಳು ನಡೆದಿಲ್ಲವೆಂದೇ ಹೇಳಬೇಕು. ನಡೆದಿರುವ ಚರ್ಚೆಗಳಲ್ಲೂ ಮೂಲತಃ ಅಮೂರ್ತ ನೆಲೆಯ ಇವುಗಳನ್ನು ಮೂರ್ತ ನೆಲೆಯ ಸಾಹಿತ್ಯದ ಮಾನದಂಡದಲ್ಲಿ ಹಿಡಿಯಲು ಹೋಗಿ ಉಂಟಾಗಿರುವ ಗೊಂದಲಗಳು ಇದುವರೆಗಿನ ಚರ್ಚೆಯ ಕೇಂದ್ರ ತಪ್ಪಿ ಹೋಗಲು ಕಾರಣವಾಗಿದೆ.

ಕನ್ನಡದಲ್ಲಿ ಚಿತ್ರಗೀತೆಗಳಿಗೆ ಸರಿ ಸುಮಾರು ಎಂಟು ದಶಕಗಳ ಇತಿಹಾಸವಿದೆ. ಅವುಗಳು ಚಲನಚಿತ್ರವನ್ನು ಜನಪ್ರಿಯವಾಗಿಸಿದಂತೆ ಶ್ರೇಷ್ಠ ಪ್ರಯೋಗಗಳ ಚಲನಚಿತ್ರ ಮಾಧ್ಯಮ ಪ್ರಬುದ್ಧತೆಯನ್ನು ಪಡೆಯಲೂ ಕಾರಣವಾಗಿದೆ. ಕನ್ನಡ ಚಿತ್ರಗೀತೆಯ ಪರಂಪರೆಯಲ್ಲಿ ನಡೆದಿರುವ ಸಂಗೀತ ಮತ್ತು ಸಾಹಿತ್ಯದ ನೆಲೆಯ ಪ್ರಯೋಗಗಳನ್ನು ಗುರುತಿಸಿ, ಅವುಗಳನ್ನು ಸೈದ್ಧಾಂತಿಕ ಚೌಕಟ್ಟಿನಲ್ಲಿ ವಿಶ್ಲೇಷಿಸುವ ಮಹತ್ವದ ಪ್ರಯತ್ನವನ್ನು ಈ ಕೃತಿ ಮಾಡಿದೆ.

About the Author

ಎನ್.ಎಸ್. ಶ್ರೀಧರಮೂರ್ತಿ
(24 August 1968)

ಎನ್.ಎಸ್.ಶ್ರೀಧರಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು  'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇವರು ಸಾಹಿತ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ‘ಸಿಂಹಾವಲೋಕನ, ನಗುವ ನಯನ ಮಧುರ ಮೌನ, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಾಹಿತ್ಯ ಸಂವಾದ, ಹಾಡು ಮುಗಿಯುವುದಿಲ್ಲ, ಸಿನಿಮಾ ಎನ್ನುವ ನಾಳೆ’ ಅವರ ಪ್ರಮುಖ ಕೃತಿಗಳು. ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ...

READ MORE

Related Books