ಕನ್ನಡ ಗಜಲ್

Author : ಚಿದಾನಂದ ಸಾಲಿ

Pages 240

₹ 125.00
Year of Publication: 2015
Published by: ಕೇಂದ್ರ ಸಾಹಿತ್ಯ ಅಕಾಡೆಮಿ
Address: ಸೆಂಟ್ರಲ್ ಕಾಲೇಜು ಆವರಣ, ಡಾ. ಬಿ.ಆರ್. ಅಂಬೇಡ್ಕರ್ ಬೀದಿ ಬೆಂಗಳೂರು - 560001

Synopsys

ನಿರ್ದಿಷ್ಟ ಕಾವ್ಯಪ್ರಕಾರದ ಬೆಳವಣಿಗೆ ಮತ್ತು ವಿಕಾಸವನ್ನು ಅನುಕೂಲ ರೀತಿಯಲ್ಲಿ  ದಾಖಲಿಸುವ ವಿಶಿಷ್ಟ ಕೃತಿ 'ಕನ್ನಡ ಗಜಲ್'. ಈ ಪ್ರಕಾರದಲ್ಲಿ ಅಧ್ಯಯನ ಮಾಡಿರುವ ಎಲ್ಲರ ರಚನೆಗಳ ಜೊತೆಗೆ ಅಧ್ಯಯನಪೂರ್ಣ ಪ್ರಸ್ತಾವನೆಯನ್ನೂ ಪುಸ್ತಕ ಒಳಗೊಂಡಿದೆ. ಇದರ ಸಂಪಾದನಾ ಕಾರ್ಯ ಮಾಡಿದವರು ಲೇಖಕ, ಕವಿ, ಅನುವಾದಕ ಚಿದಾನಂದ ಸಾಲಿ. ಗಜಲ್ ಪ್ರಕಾರದ  ಛಂದೋಲಕ್ಷಣದ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಒದಗಿಸುವ ಒಂದು ಪ್ರವೇಶಿಕೆಯಂತಿದೆ ’ಕನ್ನಡ ಗಜಲ್’.

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Related Books