ಕನ್ನಡ (ಹೈದರಾಬಾದ್ ಕರ್ನಾಟಕ ಸಾಲು: ಸಂಪುಟ-4)

Author : ಬಸವರಾಜ ಕೋಡಗುಂಟಿ

Pages 100

₹ 80.00




Year of Publication: 2018
Published by: ಬಂಡಾರ ಪ್ರಕಾಶನ
Address: ಮಸ್ಕಿ, ರಾಯಚೂರು
Phone: 9886407011

Synopsys

ಹಿಂದುಳಿದ ಪ್ರದೇಶ ಎಂತಲೇ ಹೆಸರಾಗಿರುವ ಹೈದರಾಬಾದ್ ಕರ್ನಾಟಕದ ಸಾಹಿತ್ಯ ಶ್ರೀಮಂತಿಕೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳನ್ನು ಬಸವರಾಜ ಕೋಡಗುಂಟಿ ಅವರು ಬರೆದಿದ್ದಾರೆ. ಈ ಸರಣಿಯಲ್ಲಿ ಊರು, ದರಗಾ, ಕೆರೆ, ಬಾವಿ, ಶಾಸನ, ಕೋಟೆ, ರಾಜಮನೆತನ, ಕನ್ನಡ, ಬುಡಕಟ್ಟು ಮೊದಲಾದವು. ವಿಶಿಷ್ಟವಾದ ಎಲ್ಲಮ್ಮ, ಅಲ್ಲಮಪ್ರಭು ಮೊದಲಾದ ಸಂಪುಟಗಳು ಇವೆ.

ಈ ಕೃತಿಯಲ್ಲಿ ಎರಡು ಭಾಗವಿದ್ದು, ಮೊದಲ ಭಾಗದಲ್ಲಿ ಬಸವರಾಜ ಕೊಡಗುಂಟಿಯವರ ಕನ್ನಡ ಎಂಬ ಲೇಖನ ಇದೆ. ಇಲ್ಲಿ ಈ ಭಾಗದ ಕನ್ನಡಗಳು, ಅವುಗಳ ಇತಿಹಾಸಿಕ ಬೆಳವಣಿಗೆ, ವೈವಿಧ್ಯತೆ ಮೊದಲಾದವನ್ನು ಚರ್ಚಿಸಿದೆ. ಎರಡನೆಯ ಭಾಗದಲ್ಲಿ ಏಳು ಲೇಖನಗಳು ಇವೆ. ಈ ಲೇಖನಗಳು ಹೈದರಾಬಾದ್ ಕರ್ನಾಟಕವನ್ನು ಪ್ರತಿನಿಧಿಸುವಂತಿದ್ದು ಭಿನ್ನ ಪ್ರದೇಶಗಳ ಕನ್ನಡಗಳ ಭಿನ್ನತೆಗಳನ್ನು ಪರಿಚಯ ಮಾಡಿಕೊಡುತ್ತವೆ. 

About the Author

ಬಸವರಾಜ ಕೋಡಗುಂಟಿ

ಬಸವರಾಜ ಕೋಡಗುಂಟಿ ಇವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ, ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು, ಮಾತೆಂಬುದು, ಬಾಶಿಕ ಕರ್ನಾಟಕ. ಇತರ ಕೃತಿಗಳೆಂದರೆ ಭಾಷಾ ವಿಶ್ಲೇಷಣೆ, ಊರು, ಹೈದರಾಬಾದ್ ಕರ್ನಾಟಕ, ಕರ್ನಾಟಕದ ಮಾತುಗಳು, ದರಗಾ, ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6 (ಊರು, ಕೋಟೆ, ಶಾಸನ, ಕೆರೆ-ಬಾವಿ, ಕನ್ನಡ, ದರಗಾ) ಮುಂತಾದವು.  ...

READ MORE

Related Books