ಕನ್ನಡ ಜಾನಪದ ನಿಘಂಟು ಸಂಪುಟ 3

Author : ರಾಮೇಗೌಡ (ರಾಗೌ)

Pages 784

₹ 1000.00




Year of Publication: 2017
Published by: ವಿಸ್ತರಣೆ ಮತ್ತು ಸಲಹಾಕೇಂದ್ರ
Address: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ, ಶಿಗ್ಗಾಂವಿ ತಾಲ್ಲೂಕು, ಹಾವೇರಿ 581197
Phone: 0836-2255180

Synopsys

ದೈನಂದಿನ ಬಳಕೆಯ ಕನ್ನಡ ಭಾಷೆಯಲ್ಲಿ ಕ್ರಿಯಾಶೀಲ ಹಾಗೂ ನಿತ್ಯ ಬಳಕೆಯ ಪದಗಳನ್ನು ಸಂಸ್ಕೃತಿಯ ವಿಶಿಷ್ಟತೆಯೊಂದಿಗೆ ವಿವರಿಸುವ ಪರಿಕಲ್ಪನೆಯೊಂದಿಗೆ ಕನ್ನಡ ಜಾನಪದ ನಿಘಂಟು ಮೂಡಿಬಂದಿದ್ದು, ಜಾನಪದದೊಂದಿಗೆ ಸಂಬಂಧ ಹೊಂದಿರುವ ಗ್ರಂಥಪದಗಳನ್ನು ವಿಶ್ಲೇಷಿಸುವ ಮಾದರಿಯನ್ನು ಇಲ್ಲಿ ಅನುಸರಿಸಲಾಗಿದೆ. ಪ್ರಯೋಗಾತ್ಮಕ ಉಚ್ಚಾರ ಎಂದಿನಂತೆ ಉಳಿಸಿಕೊಳ್ಳುವ ಜೊತೆಗೆ ಬಳಕೆಯ ಸಂದರ್ಭವನ್ನು ಉಲ್ಲೇಖಿಸಿ, ಕಾಲ/ದೇಶಗಳ ಮೂಲಕ ಭಿನ್ನ ಪಠ್ಯತೆಯನ್ನು ಇಲ್ಲಿ ನೀಡಲಾಗಿದೆ. ಪದದ ಸಾಂಸ್ಕೃತಿಕ ಮತ್ತು ಸಾಮಾಜಿಕ ಮಹತ್ವವನ್ನು ಗುರುತಿಸುವ ಜೊತೆಗೆ ಅದರ ಸಮಾನ ರೂಪಗಳನ್ನು ಹಾಗೂ ಭಿನ್ನ ರೂಪಗಳನ್ನು ಕೊಡುವ ಮೂಲಕ ಪದಸಂಸ್ಕೃತಿಯನ್ನು ವಿಶ್ಲೇಷಿಸಲಾಗಿದೆ. ಆಹಾರ, ಔಷಧಿ, ನಂಬಿಕೆ, ಕಲೆಗಳ ಜೊತೆಗೆ ಪ್ರಕೃತಿ-ಸಂಸ್ಕೃತಿ ಹಾಗೂ ವಿವಿಧ ಸಮುದಾಯಗಳ ವೈವಿಧ್ಯಮಯ ಪದ ಬಳಕೆಯ ವಿಶೇಷಗಳನ್ನು ಈ ನಿಘಂಟಿನಲ್ಲಿ ಕಟ್ಟಿಕೊಡುವ ಮೂಲಕ ಅಧ್ಯಯನ ಲೋಕಕ್ಕೆ ನಿಘಂಟಿನ ಕೊಡುಗೆ ಸ್ತುತ್ಯರ್ಹ. 

ಹಿರಿಯ ಜನಪದ ವಿದ್ವಾಂಸರೂ, ಲೇಖಕರೂ ಆದ ಪ್ರೊ. ಡಿ.ಬಿ. ನಾಯಕ ಮತ್ತು ಡಾ. ರಾಮೇಗೌಡ (ರಾಗೌ) ಕೃತಿ ಹೊರಬರಲು ಕಾರಣವಾಗಿರುವ ಶಕ್ತಿಗಳು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆರ್ಥಿಕ ನೆರವಿನೊಂದಿಗೆ ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ನಿಘಂಟುಗಳು ಪ್ರಕಟಗೊಂಡಿವೆ.

ನಿಘಂಟಿನ ಮೂರನೇ ಸಂಪುಟದಲ್ಲಿ ಕು ಪದದಿಂದ ಖೌ ಪದದವರೆಗಿನ ಜನಪದ ಪದಗಳನ್ನು ಪ್ರಕಟಿಸಲಾಗಿದೆ. 

About the Author

ರಾಮೇಗೌಡ (ರಾಗೌ)

ಜಾನಪದ ವಿದ್ವಾಂಸ ಡಾ. ರಾಮೇಗೌಡ (ರಾಗೌ) ಅವರು ಕವಿ, ನಾಟಕಕಾರ, ವಿಮರ್ಶಕ, ಸಂಶೋಧಕರು ಕೂಡ. ಯಾತ್ರೆ, ತೆಪ್ಪ, ಮೋಡ ಮುಸುಕಿದ ಆಕಾಶ, ನೆಲದ ಮರೆಯ ನಿಧಾನ, ಮಾತು ಮೌನಗಳ ನಡುವೆ, ಆರದಿರಲಿ ಈ ಬೆಳಕು, ಮಾತು ಮಾರ್ಗ, ನಿನ್ನೆ ನಾಳೆಗಳ ನಡುವೆ (ಸಮಗ್ರ) ಅವರ ಪ್ರಕಟಿತ ಕವನ ಸಂಕಲನಗಳು. ದೊರೆ ದುರ್ಯೋಧನ (ನಾಟಕ) ಮತ್ತು ಕುಮಾರ ರಾಮ, ಕಂದನ ಕವನಗಳು, ಆರು ಪ್ರಾಣಿಕಥೆಗಳು (ಮಕ್ಕಳ ಸಾಹಿತ್ಯ) ಕೃತಿಗಳನ್ನು ಪ್ರಕಟಿಸಿದ್ದಾರೆ.  ರಾಘವಾಂಕ, ಕಾವ್ಯಾನುಶೀಲನ, ಅವಗಾಹನ, ಕುವೆಂಪು ಸಾಹಿತ್ಯ ವಿಮರ್ಶನ, ದುರ್ಗಸಿಂಹ, ಪ್ರಾಸ್ತಾವಿಕ(ವಿಮರ್ಶೆ) , ಲಕ್ಷೀಶನ ಕಾವ್ಯ ಪ್ರವೇಶ, ರನ್ನನ ಕಾವ್ಯಾಧ್ಯಯನ (ಸಂಶೋಧನ ಕೃತಿಗಳು)   ಕೆ.ಎಸ್.ನರಸಿಂಹಸ್ವಾಮಿ (ಜೀವನ ಚರಿತ್ರೆ),  ಸಾಹಸ , ಭೀಮವಿಜಯ, ಅಜಿತತೀರ್ಥಂಕರ ಪುರಾಣ, ಲಕ್ಷ್ಮೀಶನ ಜೈಮಿನಿ ಭಾರತ (ಗ್ರಂಥಸಂಪಾದನೆ) ಮತ್ತು ನಮ್ಮ ಗಾದೆಗಳು, ಕಿಟ್ಟೆಲ್ ಕೋಶದ ಗಾದೆಗಳು, ಕರ್ಣಾಟಕದ ಜನಪದ ಕಥೆಗಳು, ನಮ್ಮ ...

READ MORE

Excerpt / E-Books

Related Books