ಕನ್ನಡ ಕಾದಂಬರಿ

Author : ಟಿ.ಪಿ. ಅಶೋಕ

Pages 544

₹ 420.00




Year of Publication: 2020
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ

Synopsys

ನಾಲ್ಕು ದಶಕಗಳ ಓದಿನ ಕನ್ನಡ ಕಾದಂಬರಿಗಳನ್ನು ಓದುತ್ತಾ, ವಿಮರ್ಶಿಸುತ್ತಾ ಬಂದಿರುವ ಟಿ.ಪಿ.ಅಶೋಕ ಅವರ ಎಲ್ಲ ಮುಖ್ಯ ಲೇಖನಗಳ ಸಂಗ್ರಹ ‘ಕನ್ನಡ ಕಾದಂಬರಿ’. ಗುಲ್ವಾಡಿ ವೆಂಕಟರಾಯರಿಂದ ಪ್ರದೀಪ ಕೆಂಜಿಗೆ ಅವರ ಕೃತಿಗಳವರೆಗೆ ಹಬ್ಬಿರುವ ಅಶೋಕ ಅವರ ಈವರೆಗಿನ  ಕಾದಂಬರಿ ಅಧ್ಯಯನಳು,ಅದರ ಎಲ್ಲ ಆಳ-ವಿಸ್ತಾರಗಳಲ್ಲಿ ಕಾಣಿಸಿಕೊಂಡಿದೆ. ಮಾಸ್ತಿ-ಕಾರಂತ-ಕುವೆಂಪು ಅವರಂಥ ಹಿರಿಯ ಬರಹಗಾರರನ್ನು ಚರ್ಚಿಸುವಷ್ಟೇ ಆಸ್ಥೆಯಿಂದ, ಗಾಂಭೀರ್ಯದಿಂದ ಮಹಾದೇವ, ಬೊಳುವಾರು, ನಾಗವೇಣಿಯವರಂಥ ಸಮಕಾಲೀನರ ಕೃತಿಗಳನ್ನು ಚರ್ಚಿಸುವ ಅಶೋಕರ ವಿಮರ್ಶಾ ವ್ಯಾಪ್ತಿ ಬೆರಗು ಹುಟ್ಟಿಸುವಂತಿದೆ.

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Related Books