ಕನ್ನಡ ಪತ್ರಿಕೋದ್ಯಮ

Author : ಎನ್.ಎಸ್.ಸೀತಾರಾಮಶಾಸ್ತ್ರಿ

Pages 48

₹ 5.00




Year of Publication: 1987
Published by: ಕರ್ನಾಟಕ ಪತ್ರಿಕಾ ಅಕಾಡೆಮಿ
Address: ಕರ್ನಾಟಕ ಪತ್ರಿಕಾ ಅಕಾಡೆಮಿ ಬೆಂಗಳೂರು

Synopsys

ಕನ್ನಡ ಪತ್ರಿಕೋದ್ಯಮ- ನಾಡಿನ ಹಿರಿಯ ಪತ್ರಕರ್ತರಾದ ಶ್ರೀ.ಎನ್.ಎಸ್. ಸೀತಾರಾಮ ಶಾಸ್ತ್ರಿಯವರು ಪತ್ರಿಕೋದ್ಯಮದ ಕುರಿತು ಬರೆದಿರುವ ಕೃತಿ. ಕನ್ನಡ ಪತ್ರಿಕೋದ್ಯಮದ ಅಭಿವೃದ್ಧಿಗೆ ಹಾಗೂ ಪತ್ರಕರ್ತರ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಲು ನೆರವಾಗುವ ಕೆಲವು ಪುಸ್ತಕಗಳನ್ನು ಪ್ರಕಟಿಸಬೇಕೆಂದು ಕರ್ನಾಟಕ ಪತ್ರಿಕಾ ಅಕಾಡೆಮಿ ನಿರ್ಧರಿಸಿತ್ತು. ಈ ಯೋಜನೆಯ ಉದ್ದೇಶ ಸಾರ್ವಜನಿಕರಿಗೆ ಪತ್ರಿಕೋದ್ಯಮದ ವಿವಿಧ ಮುಖಗಳನ್ನು ಪರಿಚಯಿಸುವ ಕಿರುಹೊತ್ತಿಗೆಗಳು ಮತ್ತು ಸಂಶೋಧನಾ ಲೇಖನಗಳು, ಪ್ರಶಸ್ತಿ ಪಡೆದ ಲೇಖನಗಳು, ಅತ್ಯುತ್ತಮ ಸಂಪಾದಕೀಯಗಳು, ಫೀಚರ್ ಲೇಖನಗಳು ಇವುಗಳನ್ನು ಸಂಕಲನ ರೂಪದಲ್ಲಿ ಪ್ರಕಟಿಸುವುದು. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕೆಲವು ಇಂಗ್ಲೀಷ್ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸುವುದು, ಜಿಲ್ಲಾ ಪತ್ರಿಕೆಗಳ ಇತಿಹಾಸ ಕುರಿತು ಕಿರುಹೊತ್ತಿಗೆ ತರುವುದು.  ವೃತ್ತಪತ್ರಿಕಾ ಕಾಯಿದೆ-ಕಾನೂನು ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸುವುದು, ಕನ್ನಡ ಪತ್ರಿಕೆಗಳ - ಪತ್ರಕರ್ತರ ವರ್ಣನಾತ್ಮಕ ಸೂಚಿ ಇತ್ಯಾದಿ ಪ್ರಕಟಣೆಗಳನ್ನು ಅಕಾಡೆಮಿಯ ತ್ರೈವಾರ್ಷಿಕ ಯೋಜನೆಯಲ್ಲಿ ಅಳವಡಿಸಿತ್ತು. 

ಈ ಯೋಜನೆಯ ಅಡಿಯಲ್ಲಿ ಸೀತಾರಾಮ ಶಾಸ್ತ್ರಿಯವರುನವರು ಪತ್ರಿಕೋದ್ಯಮದ ಕುರಿತು ಮಾಹಿತಿಗಳನ್ನು ಸಂಗ್ರಹಿಸಿ, ಶೋಧಿಸಿ , ಪತ್ರಿಕೋದ್ಯಮದ ಅಧ್ಯಯನಕ್ಕೆಬೇಕಾದ  ಚೌಕಟ್ಟನ್ನು ಒದಗಿಸಿದ್ದಾರೆ.

Related Books