ಕನ್ನಡ ರಾಮಾಯಣಗಳಲ್ಲಿ ರಾವಣ

Author : ವಿವೇಕಾನಂದ ಸಜ್ಜನ

Pages 84

₹ 70.00




Year of Publication: 2019
Published by: ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ
Address: ಮುಖ್ಯಬೀದಿ, ಕಲಬುರಗಿ- 585101

Synopsys

‘ಕನ್ನಡ ರಾಮಾಯಣಗಳಲ್ಲಿ ರಾವಣ’ ಲೇಖಕ ವಿವೇಕಾನಂದ ಸಜ್ಜನ ಅವರ ತೌಲನಿಕ ಅಧ್ಯಯನದ ಕೃತಿ. ರಾಮಾಯಣಕ್ಕೆ ಕಾರಣವಾಗುವ 'ರಾವಣ'ನ ಪಾತ್ರವನ್ನು ಕಂಡ ಬಗೆಯ ವಿವರಗಳ ಸಂಗ್ರಹ ಇಲ್ಲಿದೆ.

ರಾಮಾಯಣದ ರಾವಣನ ವಿವರಗಳನ್ನುಅಧ್ಯಯನದ ದೃಷ್ಟಿಯಿಂದ ವಿಂಗಡಿಸಿದ್ದು,  ಕವಿಗಳ ಬದುಕು ಬರೆಹದ ಭಾಗದಲ್ಲಿ ಸಂಸ್ಕೃತ ಕವಿ ವಾಲ್ಮೀಕಿ ಹಾಗು ಕನ್ನಡದ ಕವಿಗಳಾದ ನಾಗಚಂದ್ರ, ಮುದ್ದಣ, ಕುವೆಂಪು ಅವರ ಜೀವನ-ಬರೆಹಗಳ ವಿವರ ಕೊಡಲಾಗಿದೆ. ನಂತರ ರಾಮಾಯಣ, ನಾಗಚಂದ್ರನ ರಾಮಚಂದ್ರಚರಿತ ಪುರಾಣ, ಮುದ್ದಣನ ಅದ್ಭುತ ರಾಮಾಯಣ ಹಾಗೂ ಕುವೆಂಪು ಅವರ ರಾಮಾಯಣದರ್ಶನಂ ಕೃತಿಗಳಲ್ಲಿ ಮೂಡಿ ಬಂದ ರಾವಣನ ಪಾತ್ರದ ವಿವಿಧ ಆಯಾಮಗಳ ಕುರಿತ ಚರ್ಚೆ ಇದೆ.

About the Author

ವಿವೇಕಾನಂದ ಸಜ್ಜನ
(18 July 1992)

ವಿವೇಕಾನಂದ ಸಜ್ಜನ ಅವರು ಕಲುಬುಗಿ ಜಿಲ್ಲೆಯಲ್ಲಿ 1992ರಲ್ಲಿ ಜನಿಸಿದರು. ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಸ್ವಗ್ರಾಮ. 2015ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಿಂದ ಚಿನ್ನದ ಪದಕದೊಂದಿಗೆ ಎಂ.ಎ ಕನ್ನಡ ಪಡವಿ ಪಡೆದಿರುವ ಅವರು ಹಳೆಗನ್ನಡ, ಮಧ್ಯಕಾಲೀನ ಕನ್ನಡ ಸಾಹಿತ್ಯ ಆಸಕ್ತಿಯ ಕ್ಷೇತ್ರಗಳು. ಜೊತೆಗೆ ಶಾಸ್ತ್ರೀಯ ಸಂಗೀತದ ವಿದ್ಯಾರ್ಥಿ, ಕನ್ನಡ ಪುಸ್ತಕ ಪ್ರಾಧಿಕಾರವು ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನಕ್ಕೆ ವಚನ ವೈವಿಧ್ಯ ವಿಮರ್ಶಾ ಲೇಖನಗಳ ಸಂಕಲನ ಆಯ್ಕೆ, 2018ರಲ್ಲಿ ಪ್ರಕಟ, ದ್ವಿತೀಯ ಕೃತಿ ಕನ್ನಡ ರಾಮಾಯಣಗಳಲ್ಲಿ ರಾವಣ 2019ರಲ್ಲಿ ಪ್ರಕಟವಾಗಿದೆ. ಪ್ರಸ್ತುತ ಕರ್ನಾಟಕ ...

READ MORE

Related Books