ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ, ಸಂಪುಟ-2

Author : ಸಿ. ವೀರಣ್ಣ

Pages 520

₹ 315.00

Buy Now


Year of Publication: 2017
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580/01

Synopsys

ಡಾ. ಸಿ. ವೀರಣ್ಣಅವರು ಬರೆದ ಸಂಶೋಧನಾ ಕೃತಿ-ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ-ಸಂಪುಟ-2. ಕ್ರಿ. ಶ..1100 ರಿಂದ 1400 ರವರೆಗಿನ ಕನ್ನಡ ಸಾಹಿತ್ಯದ ಚಾರಿತ್ರಿಕ ಬೆಳವಣಿಗೆಯನ್ನು ದಾಖಲಿಸಿದೆ. ಕನ್ನಡದ ಮಧ್ಯಕಾಲೀನ ಸಾಹಿತಿ ಕೃತಿ ಮತ್ತು ಕಾಲದ ಬಗ್ಗೆ ಮರು ವಿಮರ್ಶೆ ಇದೆ. ಈ ಕಾಲಘಟ್ಟದ ಕವಿ ಮತ್ತು ಕಾವ್ಯಗಳ ಬಗ್ಗೆ ನಡೆದ ಅಧ್ಯಯನಗಳನ್ನು ಗ್ರಹಿಸಲಾಗಿದೆ. ವಚನ ಚಳವಳಿಯ ಕುರಿತೂ ವಿಶ್ಲೇಷಣೆ ಇದೆ. ಮಧ್ಯಕಾಲಿನ ಸಂಗತಿಗಳ ಆರ್ಥಿಕ ಹಾಗೂ ಸಾಮಾಜಿಕ ಬದುಕಿನ ರೀತಿ-ನೀತಿಗಳನ್ನು ಪ್ರಸ್ತಾಪಿಸಲಾಗಿದೆ. ಪ್ರಾಚೀನ ಕರ್ನಾಟಕ ಸಾಹಿತ್ಯದ ಅಧ್ಯಯನ ದೃಷ್ಟಿಯಿಂದ ಈ ಕೃತಿಯು ಅತ್ಯಂತ ಉಪಯುಕ್ತ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. 

About the Author

ಸಿ. ವೀರಣ್ಣ

ಡಾ. ಸಿ. ವೀರಣ್ಣಅವರು ಸಂಶೋಧಕ, ಸಾಮಾಜಿಕ ಚಿಂತಕ. 1942 ಜೂನ್ 15ರಂದು ಜನನ. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಎಂ.ಎ ಪದವಿಯನ್ನು ಪಡೆದಿರುವ ಅವರು ಐಚ್ಛಿಕ ಕನ್ನಡದಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ(1967) ಅತಿಹೆಚ್ಚು ಅಂಕಗಳಿಸಿ ”ಪ್ರೊ.ಎ.ಆರ್.ಕೃಷ್ಣಶಾಸ್ತ್ರೀ ಸ್ಮಾರಕ ಸುವರ್ಣ ಪದಕವನ್ನು ಪಡೆದಿರುತ್ತಾರೆ. ಹಂಪಾ ನಾಗರಜಯ್ಯ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಕಾವ್ಯ ಕಂಡ ಹೆಣ್ಣು’ ಪ್ರಬಂಧ ಮಂಡಿಸಿ ಪಿ.ಎಚ್.ಡಿ ಪದವಿಯನ್ನು ಪಡೆದಿರುತ್ತಾರೆ. ತಮ್ಮ ಅಧ್ಯಾಪಕ ವೃತ್ತಿ ಜೀವನವನ್ನು ಆಚಾರ್ಯ ಪದವಿ ಕಾಲೇಜಿನಲ್ಲಿಆರಂಭಿಸಿದ ಅವರು, ಎರಡು ವರ್ಷಗಳ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ 'ಡಾ.ಜಿ.ಎಸ್.ಶಿವರುದ್ರಪ್ಪ ಅವರ ಕನ್ನಡ ಅಧ್ಯಯನ ಕೇಂದ್ರ'ದಲ್ಲಿ ಸಂಶೋಧನಾ ಸಹಾಯಕರಾಗಿ ...

READ MORE

Awards & Recognitions

Related Books