ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಡಾ. ಅಂಬೇಡ್ಕರ್‌ ಚಿಂತನೆಯ ಎಳೆಗಳು

Author : ಎಸ್.ಪಿ. ಪದ್ಮಪ್ರಸಾದ್‌

Pages 132

₹ 100.00




Year of Publication: 2020
Published by: ಹಂಪಿ ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಆಧುನಿಕ ಕನ್ನಡ ಸಾಹಿತ್ಯ, ಮಾರ್ಕ್ಸ್‌ವಾದ, ಲೋಹಿಯಾವಾದ, ಗಾಂಧೀವಾದ, ಸ್ತ್ರೀವಾದ, ಅಂಬೇಡ್ಕರ್‌ವಾದಗಳ ಪ್ರೇರಣೆ-ಪಭಾವದ ಹಿನ್ನೆಲೆಯಲ್ಲಿ ಅವರ ಚಿಂತನೆಗಳು ಸಾಹಿತ್ಯದಲ್ಲಿ ರಚನೆಗೊಂಡಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಅದಕ್ಕಾಗಿಯೇ ಲೇಖಕ ಎಸ್.ಪಿ. ಪದಪ್ರಸಾದ್ ಅವರು ಇಲ್ಲಿ ಪ್ರಾಚೀನ ಕಾವ್ಯಗಳಾದ ಕವಿರಾಜಮಾರ್ಗ, ಜೈನಪುರಾಣಗಳಲ್ಲಿ ಹಾಗೂ ಮಧ್ಯಕಾಲೀನ ವಚನಕಾರರ ಮತ್ತು ಕೀರ್ತನಕಾರರ ಸಾಹಿತ್ಯದಲ್ಲಿ ಆದರೆ ಪ್ರಸ್ತುತ ಡಾ. ಅಂಬೇಡ್ಕರ್ ಚಿಂತನೆಗಳ ಎಳೆಗಳನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಡಾ. ಅಂಬೇಡ್ಕರ್ - ವ್ಯಕ್ತಿ ಮತ್ತು ವಿಚಾರಗಳು, ಹಳಗನ್ನಡ ಸಾಹಿತ್ಯದಲ್ಲಿ, ನಡುಗನ್ನಡ ಸಾಹಿತ್ಯದಲ್ಲಿ ಅಂಬೇಡ್ಕರ್‌ ಅವರ ವಿಚಾರಗಳನ್ನು ಇಲ್ಲಿ ಕಾಣಬಹುದು.

About the Author

ಎಸ್.ಪಿ. ಪದ್ಮಪ್ರಸಾದ್‌

ಎಸ್.ಪಿ. ಪದ್ಮಪ್ರಸಾದ್‌ ಜಾನಪದ, ಕಾವ್ಯ, ನಾಟಕ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪದ್ಮ ಪ್ರಸಾದವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ.  ತಂದೆ ಎಸ್.ಪಿ. ಪಾಯಪ್ಪಶೆಟ್ಟಿ, ತಾಯಿ ಜಿನ್ನಮ್ಮ. ಪ್ರಾರಂಭಿಕ ಶಿಕ್ಷಣ ಹೊಸನಗರದಲ್ಲಿ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಿಂದ ಬಿ.ಎಸ್ಸಿ ಪದವಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್‌ನಿಂದ ಬಿ.ಇಡಿ. ಪದವಿಯನ್ನೂ,. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಹಾಗೂ ‘‘ಜೈನ ಜನಪದ ಸಾಹಿತ್ಯ-ಸಂಪಾದನೆ ಹಾಗೂ ಅಧ್ಯಯನ’’ ಪ್ರಬಂದ ಮಂಡಿಸಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ.  ಹೈಸ್ಕೂಲು ಅಧ್ಯಾಪಕರಾಗಿ ಪಿಎಚ್.ಡಿ. ಪದವಿಗಳಿಸಿದ ರಾಜ್ಯದ ...

READ MORE

Related Books