ಕನ್ನಡ ಸಾಹಿತ್ಯ ಸಂಗಾತಿ

Author : ಬರಗೂರು ರಾಮಚಂದ್ರಪ್ಪ

₹ 320.00
Year of Publication: 2018
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಬೆಂಗಳೂರು

Synopsys

ಡಾ. ಬಸವರಾಜ ಕಲ್ಗುಡಿ, ಪ್ರೊ. ಚಿ. ಶ್ರೀನಿವಾಸ ರಾಜು ಹಾಗೂ ಡಾ. ಎಂ.ಎಸ್. ಲಠ್ಠೆ ಅವರ ಸಂಪಾದಕತ್ವದಲ್ಲಿ ಯೋಜನಾ ಸಂಪಾದಕರಾಗಿ ಡಾ. ಬರಗೂರು ರಾಮಚಂದ್ರಪ್ಪನವರು ಸಿದ್ಧಪಡಿಸಿದ ಕೃತಿ-ಕನ್ನಡ ಸಾಹಿತ್ಯ ಸಂಗಾತಿ. ಪ್ರಾಚೀನ ಕನ್ನಡ ಸಾಹಿತ್ಯದ ಸುದೀರ್ಘ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಈ ಕೃತಿ ಸಿದ್ಧಪಡಿಸಿದೆ. ಕನ್ನಡ ಸಾಹಿತ್ಯದ ಸಮಗ್ರ ಪಕ್ಷಿನೋಟ ನೀಡುವಲ್ಲಿ ಈ ಕೃತಿ ಸಫಲವಾಗಿದೆ.

About the Author

ಬರಗೂರು ರಾಮಚಂದ್ರಪ್ಪ
(18 October 1946)

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...

READ MORE

Related Books