ಕನ್ನಡ ಸಿರಿ ಪುಂಡಲೀಕ ಹಾಲಂಬಿ

Author : ರಾಜು ಮಳವಳ್ಳಿ

Pages 24

₹ 20.00




Year of Publication: 2015
Published by: ಅನಿಕೇತನ ಕನ್ನಡ ಬಳಗ
Address: 126, ಅನಿಕೇತನ, 1ನೇ ಮುಖ್ಯರಸ್ತೆ, ವಿನಾಯಕನಗರ, ಶಂಕರ್‌ನಾಗ್‌ ವೃತ್ತ, ಬನಶಂಕರಿ 1ನೇ ಹಂತ, 2ನೇ ವಿಭಾಗ, ಬೆಂಗಳೂರು 560050
Phone: 95386 35551

Synopsys

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಪುಂಡಲೀಕ ಹಾಲಂಬಿಯವರು ವಿದ್ಯಾರ್ಥಿದೆಸೆಯಿಂದಲೇ ನಾಡು-ನುಡಿ ಸಂಬಂಧಿತ ಹೊರಾಟಗಳಲ್ಲಿ ತೊಡಗಿಸಿಕೊಂಡವರು.  ಕನ್ನಡ ದೀಕ್ಷೆ ತೊಟ್ಟು ಕನ್ನಡಿಗರೆದೆಯಲ್ಲಿ ಕನ್ನಡ ಪ್ರಶ್ನೆಯ ಜಾಗೃತಿ ಮೂಡಿಸುತ್ತಿರುವವರು. ಕನ್ನಡ ಸಾಹಿತ್ಯ ಪರಿಷತ್ತನ್ನೂ ಒಳಗೊಂಡಂತೆ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್, ಬೆಂಗಳೂರು ವಿಶ್ವವಿದ್ಯಾಲಯ ಬೋಧಕೇತರ ನೌಕರರ ಸಂಘ, ಬೆಂಗಳೂರು ವಿಶ್ವವಿದ್ಯಾಲಯ ನೌಕರರ ಗೃಹನಿರ್ಮಾಣ ಸಹಕಾರ ಸಂಘ, ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆ ಇತ್ಯಾದಿ ಹತ್ತಾರು ಸಂಘಸಂಸ್ಥೆಗಳಲ್ಲಿ ಅಧ್ಯಕ್ಷರಾಗಿಯೋ, ಕಾರ್ಯದರ್ಶಿಯಾಗಿಯೋ, ಕೋಶಾಧ್ಯಕ್ಷರಾಗಿ ನಿರ್ದೇಶಕರಾಗಿಯೋ ಕಾರನಿರ್ವಹಿಸಿರುವ ಪುಂಡಲೀಕ ಹಾಲಂಬಿಯವರು ಅಯಾ ಸಂಘಸಂಸ್ಥೆಗಳನ್ನು ಕಟ್ಟುವುದರಲ್ಲಿ, ಎತ್ತರಕ್ಕೆ ಬೆಳೆಸುವುದರಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ಸಾರ್ವಜನಿಕ ಹಣ ಆಸ್ತಿ ಎಲ್ಲೂ ವ್ಯರ್ಥವಾಗದಂತೆ, ನಷ್ಟವಾಗದಂತೆ ಎಚ್ಚರ ವಹಿಸಿದ್ದಾರೆ.ಈ ಕೃತಿಯಲ್ಲಿ ಪುಂಡಲೀಕ ಹಾಲಂಬಿಯವರ ಜೀವನ ಮತ್ತು ಸಾಧನೆಯ ಸಂಕ್ಷಿಪ್ತ ಪರಿಚಯವನ್ನು ಕೊಡಲಾಗಿದೆ.

About the Author

ರಾಜು ಮಳವಳ್ಳಿ

ಲೇಖಕ -ಪತ್ರಕರ್ತ ರಾಜು ಮಳವಳ್ಳಿ ಅವರು ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಬೆಂಗಳೂರು ಆವೃತ್ತಿಯಲ್ಲಿ ಉಪಸಂಪಾದಕರಾಗಿದ್ದಾರೆ. ‘ಕನ್ನಡ ಸಿರಿ ಪುಂಡಲೀಕ ಹಾಲಂಬಿ’ ಎಂಬುದು ಇವರ ಕೃತಿ.  ಅಂದದೂರು (ಬೆಂಗಳೂರು ನಗರ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಸಂಚಿಕೆ),  ಕೆಂಪಾಂಬುಧಿ (ಬೆಂಗಳೂರು ನಗರ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಸಂಚಿಕೆ),  ನವರತ್ನ ಕನ್ನಡ ಚಿಂತನೆ (ಸಮ್ಮೇಳನಾಧ್ಯಕ್ಷರ ಭಾಷಣಗಳ ಸಂಕಲನ), ಅಂಗೈಯಲ್ಲಿ ಬೆಂಗಳೂರು (ಶ್ರೀ ರಾ.ನಂ.ಚಂದ್ರಶೇಖರ್ ಅವರೊಡಗೂಡಿ) ಕೃತಿಗಳನ್ನು ಸಂಪಾದಿಸಿದ್ದಾರೆ.  ...

READ MORE

Related Books