ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣ

Author : ಎಂ. ಅಬ್ದುಲ್ ರೆಹಮಾನ್ ಪಾಷಾ

Pages 138

₹ 100.00




Year of Publication: 2020
Published by: ಕನ್ನಡ ಅಭಿವೃದ್ಧಿ ಪ್ರಾಧಿಕಾರ
Address: ಬೆಂಗಳೂರು

Synopsys

‘ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣ’ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಕಟವಾಗಿರುವ ಕೈಪಿಡಿ. ಈ ಕೃತಿಯ ಪ್ರಧಾನ ಸಂಪಾದಕರು ಟಿ.ಎಸ್. ನಾಗಾಭರಣ, ಸಂಪಾದಕರು ಪ್ರೊ.ಎಂ. ಅಬ್ದುಲ್ ರೆಹಮಾನ್ ಪಾಷ. ಕನ್ನಡ ಭಾಷೆಯನ್ನು ಬಲಪಡಿಸಬೇಕಾದ ಇನ್ನೊಂದು ಕ್ಷೇತ್ರವೆಂದರೆ ವಿಜ್ಞಾನ ಸಾಹಿತ್ಯ. ಇದರಲ್ಲಿ ಬೇಕಾದಷ್ಟು ಕೆಲಸ ಆಗಿದೆ. ಆದರೆ ಹೆಚ್ಚಿನವು ಈ ವರೆಗೆ ಆಗಿರುವ ವಿಜ್ಞಾನ ಸಾಹಿತ್ಯದ ಐತಿಹಾಸಿಕ ಸಮೀಕ್ಷೆಗಳು, ವಿಮರ್ಶೆಗಳು ದಾಖಲೆಗಳ ಸಂಗ್ರಹ ಆಗಿವೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಕೆಲವು ಖಾಸಗಿ ಪ್ರಕಾಶಕರು ಎಲ್ಲಾ ವರ್ಗದ ಓದುಗರಿಗಾಗಿ ನೂರಾರು ಸಂಖ್ಯೆಯಲ್ಲಿ ವಿಜ್ಞಾನ ಪುಸ್ತಕಗಳನ್ನು ತಂದಿದ್ದಾರೆ. ಕ.ರಾ.ವಿ.ಪ ವಿಜ್ಞಾನ ಲೇಖಕರಿಗಾಗಿ ಶಿಬಿರಗಳನ್ನು ನಡೆಸುತ್ತಿದೆ. ಎಲ್ಲದಕ್ಕಿಂತ ಮುಖ್ಯವಾಗಿ ವಿಜ್ಞಾನ ಬರವಣಿಗೆಯನ್ನು ಒಂದು ಕೌಶಲವಾಗಿ ಪರಿಗಣಿಸಿ ಅದರಲ್ಲಿ ಮಾರ್ಗದರ್ಶನವನ್ನು ನೀಡುವಂಥ ಹೆಚ್ಚು ಕೆಲಸಗಳು ಆಗಬೇಕಾಗಿದೆ. ಇಂಥ ಒಂದು ನೇರ ಉದ್ದೇಶದ ಕೃತಿಗಳ ಕೊರತೆ ಕನ್ನಡದಲ್ಲಿದ್ದು ಆ ಕೊರತೆಯನ್ನು ಸರಿದೂಗಿಸುವ ಉದ್ದೇಶದಿಂದ ಈ ಕೃತಿ ಪ್ರಕಟವಾಗಿದೆ. ವಿಜ್ಞಾನ ಸಾಹಿತ್ಯ ಕುರಿತಾದ ಮಾರ್ಗದರ್ಶನವನ್ನು ತನ್ನೊಡಲಲ್ಲಿ ಹೊತ್ತಿದೆ.  ವಿಜ್ಞಾನ ಸಾಹಿತ್ಯ ನಿರ್ಮಾಣದ ಕ್ಷೇತ್ರದಲ್ಲಿ ಪದಾರ್ಪಣ ಮಾಡುವವರಿಗಂತೂ ಉತ್ತಮ ಮಾರ್ಗದರ್ಶಿ ಕೈಪಿಡಿಯಾಗಿದೆ. ಈಗಾಗಲೇ ವಿಜ್ಞಾನ ಸಾಹಿತ್ಯ ಕೃಷಿ ಮಾಡುತ್ತಿರುವವರಿಗೂ ಮತ್ತು ಹೆಚ್ಚು ಅನುಭವ ಇರುವ ಲೇಖಕರ ಪರಿಣತಿಯ ನೆರವು ಸಿಗುತ್ತದೆ.

About the Author

ಎಂ. ಅಬ್ದುಲ್ ರೆಹಮಾನ್ ಪಾಷಾ

ಸಿನಿಮಾ, ಮಾಧ್ಯಮ ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದಂತೆ  ಬರೆಯುವ ಅಬ್ದುಲ್ ರೆಹಮಾನ್ ಪಾಷಾ ಕನ್ನಡ ಲೇಖಕರು. ಗಾಂಧೀ ನೆಹರೂ ಆಯ್ದ ಪತ್ರಗಳು, ಅಭಿವೃದ್ಧಿ ಸಂವಹನ ಕೌಶಲ್ಯಗಳು, ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ, ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು, ಶಿಕ್ಷಕರ ಹೊಣೆ, ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ, ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆಯಲ್ಲಿ ಮಹಾತ್ಮ ಗಾಂಧಿ, ಟೀಪು ಸುಲ್ತಾನ, ಜವಾಹರಲಾಲ್ ನೆಹರೂ, ಪ್ರವಾದಿ ಮುಹಮ್ಮದ್ ಕಿರುಹೊತ್ತಿಗೆಗಳು ಮುದ್ರಣ ಕಂಡಿವೆ. ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ’ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ’ ಪ್ರಶಸ್ತಿ (2015), ಶಿವಮೊಗ್ಗದ ...

READ MORE

Related Books