ಕನ್ನಡದ ಸೊಲ್ಲರಿಮೆ

Author : ಡಿ.ಎನ್. ಶಂಕರ ಬಟ್

Pages 108

₹ 50.00




Year of Publication: 2016
Published by: ಡಿ.ಎನ್. ಶಂಕರ ಬಟ್
Address: ಡಿ.ಎನ್.ಶಂಕರ್ ಬಟ್, ಅಂಚೆ : ಬಿ.ಮಂಚಾಲೆ, ಸಾಗರ ೫೭೭ ೪೩೧

Synopsys

ಕನ್ನಡಕ್ಕೆ ಕೇಶಿರಾಜನ ಕಾಲದಿಂದಲೂ ಬಳಕೆಯಲ್ಲಿರುವ ವ್ಯಾಕರಣಕ್ಕಿಂತ ತೀರ ಬೇರಾಗಿರುವ ಅದರದೇ ಆದ ಒಂದು ವ್ಯಾಕರಣ ಇದೆ. ಅದು ಎಂತಹದು ಎಂಬುದನ್ನು ತೀರ ಚುಟುಕಾಗಿ ತಿಳಿಸುವ ಕೆಲಸವನ್ನು ಈ ಚಿಕ್ಕ ಪುಸ್ತಕದಲ್ಲಿ ಮಾಡಲಾಗಿದೆ. ಒಂದು ನುಡಿಯಲ್ಲಿ ಉಲಿಗಳನ್ನು ಬಳಸಿ ಹೇಗೆ ಪದಗಳನ್ನು ಕಟ್ಟಲಾಗುತ್ತದೆ, ಮತ್ತು ಪದಗಳನ್ನು ಬಳಸಿ ಹೇಗೆ ಸೊಲ್ಲುಗಳನ್ನು ಕಟ್ಟಲಾಗುತ್ತದೆ ಎಂಬುದನ್ನು ಅದರ ವ್ಯಾಕರಣ ತಿಳಿಸಬೇಕು. ಇದಲ್ಲದೆ, ಎರಡು ಇಲ್ಲವೇ ಹೆಚ್ಚು ಸೊಲ್ಲುಗಳನ್ನು ಒಟ್ಟಿಗೆ ಸೇರಿಸಿ ಹೇಳುವುದು ಹೇಗೆ, ಮತ್ತು ಸೊಲ್ಲುಗಳೊಳಗೆ ಇಲ್ಲವೇ ಸೊಲ್ಲುಗಳಲ್ಲಿ ಬರುವ ಪದಕಂತೆಗಳ ಒಳಗೆ ಬೇರೆ ಸೊಲ್ಲುಗಳನ್ನು ಇರಿಸಿ ಹೇಳುವುದು ಹೇಗೆ ಎಂಬುದನ್ನೂ ಅದರ ವ್ಯಾಕರಣ ತಿಳಿಸಬೇಕು. ಕನ್ನಡದಲ್ಲಿ ಈ ಎಲ್ಲಾ ಕೆಲಸಗಳನ್ನೂ ಹೇಗೆ ನಡೆಸಲಾಗುತ್ತದೆ ಎಂಬುದನ್ನು ನೇರವಾಗಿ ತಿಳಿಸುವ ವ್ಯಾಕರಣವನ್ನಶ್ಟೇ ಕನ್ನಡದ್ದೇ ಆದ ವ್ಯಾಕರಣ ಇಲ್ಲವೇ ಸೊಲ್ಲರಿಮೆ ಎಂದು ಕರೆಯಬಹುದು, ಮತ್ತು ಅದನ್ನೇ ಈ ಪುಸ್ತಕ ತುಂಬ ಚುಟುಕಾಗಿ ನಡೆಸುತ್ತದೆ.

About the Author

ಡಿ.ಎನ್. ಶಂಕರ ಬಟ್

ಹಿರಿಯ ಲೇಖಕ ಡಿ.ಎನ್. ಶಂಕರ ಬಟ್ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾಶಾಸ್ತ್ರಜ್ಞರು. ಮದ್ರಾಸ್ ವಿಶ್ವವಿದ್ಯಾಲಯದಿಂದ  ಸಂಸ್ಕೃತದಲ್ಲಿ ಸ್ನಾತಕ್ಕೋತ್ತರ ಪದವೀಧರರು.  ಪುಣೆ ವಿಶ್ವವಿದ್ಯಾಲಯದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ.ಪದವೀಧರರು. ಅಮೇರಿಕಾದ ಸ್ಟ್ಯಾನ್ಪೋರ್‍ಡ್ ಯುನಿವರ್‍ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯುನಿವರ್‍ಸಿಟಿ, ಬೆಲ್ಜಿಯಂ ದೇಶದ ಆಂಟ್ವೆರ್‍ಪ್ ಯುನಿವರ್‍ಸಿಟಿ, ಜರ್‍ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮಯ್ಸೂರಿನಲ್ಲಿರುವ ಬಾರತೀಯ ಬಾಶಾ ಸಂಸ್ತಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಅರಕೆಗಾರರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಅರಕೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ...

READ MORE

Related Books