ಕನ್ನಡದಲ್ಲಿ ಹೊಸ ಸಂವೇದನೆಯ ಹಾಡುಗಳು

Author : ಶಂಭುಲಿಂಗ ವಾಲ್ದೊಡ್ಡಿ

Pages 352




Year of Publication: 2013
Published by: ಶೋಭಾ ಕಲೆ

Synopsys

ಲೇಖಕ ಶಂಭುಲಿಂಗ ವಾಲ್ದೊಡ್ಡಿ ಅವರು ಸಂಪಾದಿಸಿದ ಕಾವ್ಯ ಸಂಕಲನ ಕೃತಿ ʻಕನ್ನಡದಲ್ಲಿ ಹೊಸ ಸಂವೇದನೆಯ ಹಾಡುಗಳುʼ. ಇದರಲ್ಲಿ ಒಟ್ಟು 264 ಹಾಡುಗಳಿವೆ. ಅವುಗಳನ್ನು 7 ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳು; ಜನಜಾಗೃತಿಯ ಹಾಡುಗಳು, ಪರಿಸರಗೀತೆಗಳು, ಸಾಕ್ಷರತಾ ಹಾಡುಗಳು, ಭಾವೈಕ್ಯದ ಹಾಡುಗಳು, ವಿಜ್ಞಾನ ಹಾಡುಗಳು, ಆರೋಗ್ಯದ ಹಾಡುಗಳು ಮತ್ತು ಇತರೆ ಹಾಡುಗಳು. ಹೀಗೆ ಪ್ರತಿಯೊಂದು ಕಾವ್ಯವೂ ಒಂದಕ್ಕಿಂತ ಒಂದು ಭಿನ್ನವಾಗಿದೆ.

About the Author

ಶಂಭುಲಿಂಗ ವಾಲ್ದೊಡ್ಡಿ

ಶಂಭುಲಿಂಗ ವಾಗ್ದೊಡ್ಡಿ ಅವರು ಮೂಲತಃ ಬೀದರ ಜಿಲ್ಲೆಯ ವಾಗ್ದೊಡ್ಡಿ ಯವರು. ಲೇಖಕರು, ಜಾನಪದ ಕಲಾವಿದರು, ಗಾಯಕರು, ಬೀದರಿನ ವಿದ್ಯಾನಗರದ ಸಮತಾ ಪ್ರೌಢ ಶಾಲೆಯ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕೃತಿಗಳು: ಹೊಸ ದಿಗಂತದ ಹಾಯಿಕುಗಳು, ಮಹಾತಾಯಿ (ಜೀವನ ಚಿತ್ರ), ಮಮತೆಯ ಮಂದರ (ವಿಮರ್ಶಾ ಲೇಖನಗಳ ಸಂಕಲನ)  ಪ್ರಶಸ್ತಿ-ಪುರಸ್ಕಾರಗಳು: ಅವರ  ಜಾನಪದ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಕರ್ನಾಟಕ ಜಾನಪದ ಪರಿಷತ್ತಿನಿಂದ 'ಜಾನಪದ ಲೋಕ ಪ್ರಶಸ್ತಿ'  ಹಾಗೂ 2008-2009 ನೇ ಸಾಲಿನ 'ರಾಷ್ಟ್ರೀಯ ಉತ್ತಮ ಶಿಕ್ಷಕ' ಪ್ರಶಸ್ತಿ ಲಭಿಸಿದೆ.    ...

READ MORE

Related Books