ಕನ್ನಡದಲ್ಲಿ ವಿಜ್ಞಾನ ಸಂವಹನೆ

Author : ಟಿ. ಆರ್. ಅನಂತರಾಮು

Pages 252

₹ 150.00




Year of Publication: 2011
Published by: ಉದಯಭಾನು ಉನ್ನತ ಶಿಕ್ಷಣ ಕೇಂದ್ರ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಕನ್ನಡದಲ್ಲಿ ವಿಜ್ಞಾನ ಸಂವಹನವನ್ನು ಪರಿಚಯಿಸುವ ಕೃತಿ ಪ್ರೊ.ಎಚ್‌.ಆರ್. ರಾಮಕೃಷ್ಣರಾವ್‌ ಮತ್ತು ಟಿ,ಆರ್‌. ಅನಂತರಾಮು ಅವರು ಬರೆದಿರುವ ’ಕನ್ನಡದಲ್ಲಿ ವಿಜ್ಞಾನ ಸಂವಹನೆ’. ಇಲ್ಲಿ ಹದಿಮೂರು ಮಂದಿ ಲೇಖಕರು ಬರೆದ ಹದಿನೈದು ಪ್ರೌಢ ಪ್ರಬಂಧಗಳಿವೆ.

ಇಂಗ್ಲಿಷ್‌ನಲ್ಲಿ ಈ ಬಗೆಯ ಗ್ರಂಥಗಳು ಹೇರಳವಾಗಿ ದೊರೆಯುತ್ತವೆ. ಆದರೆ ಕನ್ನಡದಲ್ಲಿ ಮಾತ್ರ ವಿರಳ ಪ್ರಯೋಗ. ವಿಜ್ಞಾನದ ವಿವಿಧ ಪ್ರಾಯೋಗಿಕ ಶಾಖೆಗಳಲ್ಲಿ  ಈವರೆಗೆ ನಡೆದಿರುವ ಚಿಂತನೆ ಹಾಗೂ ಪ್ರಾಯೋಗಿಕ ವಿವರಣೆಗಳ ಕುರಿತ ಸಮಗ್ರ ಮಾಹಿತಿಯನ್ನು ಲೇಖಕರು ಕೃತಿಯಲ್ಲಿ ನೀಡಿದ್ದಾರೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books