ಕನ್ನಡಪರ ಚಿಂತನೆ ಮತ್ತು ಪರಂಪರೆ

Author : ಕಾ.ವೆಂ. ಶ್ರೀನಿವಾಸಮೂರ್ತಿ

Pages 344

₹ 70.00




Year of Publication: 2000
Published by: ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆ
Address: ಸಿದ್ಧ ಸಂಸ್ಥಾನ ಮಠ, ಚಿಂಚಣಿ ತಾಲೂಕು, ಚಿಕ್ಕೋಡಿ, ಬೆಳಗಾವಿ

Synopsys

‘ಕನ್ನಡಪರ ಚಿಂತನೆ ಮತ್ತು ಪರಂಪರೆ’ ಕೃತಿಯು ಕಾ.ವೆಂ.ಶ್ರೀನಿವಾಸ ಮೂರ್ತಿ ಅವರ ಸಂಶೋಧನಾತ್ಮಕ ಬರವಣಿಗೆಯಾಗಿದೆ. ಈ ಕೃತಿಯು ಏಳು ಅಧ್ಯಾಯಗಳನ್ನು ಒಳಗೊಂಡಿದ್ದು, ಮೊದಲನೇ ಅಧ್ಯಾಯದಲ್ಲಿ ಅಧ್ಯಯನದ ಹಿಂದಿನ ತಾತ್ವಿಕ ಭೂಮಿಕೆಯಡಿ ಮೂರು ವಿಚಾರಗಳನ್ನು ಒಳಗೊಂಡಿದೆ. ಅಧ್ಯಾಯ ಎರಡರಲ್ಲಿ, ಕವಿರಾಜಮಾರ್ಗ ಮತ್ತು ನಾಡು-ನುಡಿ ಜಿಜ್ಞಾಸೆಯಡಿ ಮೂರು ವಿಚಾರಗಳನ್ನು ಒಳಗೊಂಡಿದೆ. ಅಧ್ಯಾಯ ಮೂರರಲ್ಲಿ, ಪ್ರಾಚೀನ ಕನ್ನಡ ಕಾವ್ಯ ಮತ್ತು ನಾಡು ನುಡಿ ಚಿಂತನೆಯಡಿ ಮೂರು ವಿಚಾರಗಳಿವೆ. ಅಧ್ಯಾಯ ನಾಲ್ಕರಲ್ಲಿ, ಮಧ್ಯಕಾಲೀನ ಕನ್ನಡ ಕಾವ್ಯ ಮತ್ತು ಕನ್ನಡಾಭಿಮಾನದ ಸ್ವರೂಪ ವಿಚಾರದಡಿ ಐದು ಭಾಗಗಳನ್ನು ಒಳಗೊಂಡಿದೆ. ಅಧ್ಯಾಯ ಐದರಲ್ಲಿ, ವಸಹಾತುಶಾಹಿ ಸಂಸ್ಕೃತಿ, ಕನ್ನಡ ಕಾವ್ಯ ಮತ್ತು ಕರ್ನಾಟಕತ್ವದ ವಿಕಾಸ ವಿಚಾರದಡಿ ನಾಲ್ಕು ಭಾಗಗಳಿವೆ. ಅಧ್ಯಾಯ ಆರರಲ್ಲಿ, ನವ ವಸಾಹತು ಸಂದರ್ಭ, ಕನ್ನಡ ಕಾವ್ಯ ಮತ್ತು ನಾಡು-ನುಡಿ ಚಿಂತನೆಯಲ್ಲಿ ಮೂರು ಭಾಗಗಳಿವೆ. ಅಧ್ಯಾಯ ಏಳರಲ್ಲಿ, ಸಮಾರೋಪ ಹಾಗೂ ಅನುಬಂಧಗಳನ್ನು ಒಳಗೊಂಡಿದೆ.

ಕೃತಿಗೆ ಬೆನ್ನುಡಿ ಬರೆದಿರುವ ಕೆ.ಪಿ. ಭಟ್ ಅವರು, ಕನ್ನಡ ಕಾವ್ಯ ಪರಂಪರೆಯ ಬೇರೆ ಬೇರೆ ಘಟ್ಟಗಳಲ್ಲಿಯ ಪ್ರಾತಿನಿಧಿಕವಾದ ಕವಿ-ಕಾವ್ಯಗಳ ಹಿನ್ನೆಲೆಯಲ್ಲಿ ನಾಡು-ನುಡಿಯ ಬಗೆಗಿನ ಚಿಂತನೆಯ ಸಮಗ್ರ ಸ್ವರೂಪವನ್ನು ಕಾ.ವೆಂ. ಶ್ರೀನಿವಾಸಮೂರ್ತಿ ಅವರು ಈ ಕೃತಿಯಲ್ಲಿ ಒದಗಿಸಿದ್ದಾರೆ. ಈ ನಿಟ್ಟಿನಲ್ಲಿ ಆಗಬೇಕಾದ ಚರ್ಚೆಗಳಿಗೆ ಉತ್ತಮವಾದ ಪ್ರಾರಂಭವನ್ನು ಹಾಕಿಕೊಟ್ಟಿದ್ದಾರೆ’ ಎಂದಿದೆ.

About the Author

ಕಾ.ವೆಂ. ಶ್ರೀನಿವಾಸಮೂರ್ತಿ
(06 September 1969)

ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ಅವರು ಬೆಂಗಳೂರು ಉತ್ತರಕಾವಲು ಭೈರಸಂದ್ರದವರು. ಉಪನ್ಯಾಸಕರಾಗಿದ್ದಾರೆ. ಚಂದ್ರತಾರೆ ಊರಿನಲ್ಲಿ, ಹೃದಯ ವಿಹಾರಿ, ಬದುಕು, ಕಾವ್ಯಕೋಗಿಲೆ, ನಿತ್ಯಶ್ರಾವಣ, ಅಭಿಮಾನದ ಹಣತೆ, ಮಣ್ಣಿನ ದೋಣಿ, ಆಯ್ದ ಭಾವಗೀತೆಗಳು (ಕಾವ್ಯ), ನೆಲದ ಕಣ್ಣ, ಮೌನ ಮಾತಾದಾಗ, ಕನ್ನಡ ರಂಗಭೂಮಿ, ಕನ್ನಡ ಚಳುವಳಿ ಮತ್ತು ಚಿಂತನ, ಉರಿಯಪೇಟೆ (ವಿಮರ್ಶೆ), ಕನ್ನಡ ಸಾಹಿತ್ಯ ಮತ್ತು ಕರ್ನಾಟಕತ್ವ, ಅಭಿರಾಮ, ಕನ್ನಡ ಭೇರಿ, ಬಂಡಾಯ ಕಾಲು ಶತಮಾನ (ಸಂಪಾದನೆ), ಕನ್ನಡ ಕಾವ್ಯದಲ್ಲಿ ನಾಡು ನುಡಿ ಚಿಂತನೆ (ಪಿಎಚ್‌ಡಿ ಮಹಾಪ್ರಬಂಧ). ...

READ MORE

Related Books