ಕಣ್ಣೊಳಗಣ ಕಟ್ಟಿಗೆ

Author : ಬಿ. ಯು. ಸುಮಾ

Pages 114

₹ 80.00




Year of Publication: 2019
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ- 583276

Synopsys

‘ಕಣ್ಣೊಳಗಣ ಕಟ್ಟಿಗೆ’ ಲೇಖಕಿ ಬಿ.ಯು. ಸುಮಾ ಅವರ ಲೇಖನ ಸಂಕಲನ. ಈ ಕೃತಿಗೆ ಡಾ. ಸ.ಚಿ. ರಮೇಶ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಕಣ್ಣೊಳಗಣ ಕಟ್ಟಿಗೆ’ ಕೃತಿಯು ಹದಿಮೂರು ಲೇಖನಗಳನ್ನು ಒಳಗೊಂಡಿದೆ. ನಾಡು, ಸಮಾಜ, ಕುಟುಂಬ-ಮಹಿಳೆ, ದಲಿತ- ಬಂಡಾಯ ಸಂವೇದನೆಗಳನ್ನು ಅನಾವರಣಗೊಳಿಸಿರುವುದು ಇಲ್ಲಿಯ ಲೇಖನಗಳ ವಸ್ತು, ಪಿತೃಪ್ರಧಾನ ಸಮಾಜದಲ್ಲಿ ಹೆಣ್ಣನ್ನು ನಡೆಸಿಕೊಳ್ಳುವ ರೀತಿ, ಅದರ ನಿವಾರಣೆಗಾಗಿ ಪರಿಹಾರ ಮಾರ್ಗಗಳನ್ನು ಹುಡುಕುವುದು, ಸಾಮಾಜಿಕ ವ್ಯವಸ್ಥೆಯ ಸಂಕೀರ್ಣತೆಯನ್ನು ಪ್ರಶ್ನಿಸುವ ಲಿಂಗ ತಾರತಮ್ಯಗಳನ್ನು ವಿರೋಧಿಸುವ, ಮಹಿಳಾ ಹಕ್ಕುಗಳನ್ನು ನ್ಯಾಯಯುತವಾಗಿ ಪಡೆಯುವ ಆಂದೋಲನ, ಚಳವಳಿ ಹಾಗೂ ಸಂಘಟನೆಗಳಿಗೆ ಹಾದಿ ಮಾಡಿಕೊಟ್ಟಿರುವ ಪರಿಸರವನ್ನು ಲೇಖಕರು ಈ ಕೃತಿಯಲ್ಲಿ ಚರ್ಚಿಸಿದ್ದಾರೆ. ಒಟ್ಟಿನಲ್ಲಿ ಮಹಿಳೆ, ಬದುಕು ಹಾಗೂ ಸಂಘರ್ಷದ ವಾಸ್ತವ ನೆಲೆಯಲ್ಲಿ ವಿಶ್ಲೇಷಿಸಿರುವ ಬಿ.ಯು. ಸುಮಾ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ ಎಂದು ಪ್ರಶಂಸಿಸಿದ್ದಾರೆ.

About the Author

ಬಿ. ಯು. ಸುಮಾ
(07 November 1967)

ಬೆಂಗಳೂರಿನಲ್ಲಿ 1967ರ ನವೆಂಬರ್ 7 ರಂದು ಜನಿಸಿದ ಸುಮಾ ಅವರು ಮೂಲತಃ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಭೂಪಸಂದ್ರದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (1990 ಕನ್ನಡ ಎಂ.ಎ.) ಪಡೆದು, 1992 ರಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಕಣ ಇಲಾಖೆಗೆ ಉಪನ್ಯಾಸಕರಾಗಿ ನೇಮಕ ಹೊಂದಿದರು. 2007ರಲ್ಲಿ 'ಕನ್ನಡ ಸಾಹಿತ್ಯ ಪ್ರತಿಭೆ ಮತ್ತು ಪ್ರಭುತ್ವ : 1600-1900' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದರು. ಬೆಂಗಳೂರಿನ ವಿಜಯನಗರ ಬಡಾವಣೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2008ರಲ್ಲಿ ಇವರು ಸಂಪಾದಿಸಿದ 'ಡಾ.ಬಿ.ಆರ್.ಅಂಬೇಡ್ಕರ್ -ವರ್ತಮಾನದೊಂದಿಗೆ ...

READ MORE

Related Books