ಕಂಠಪತ್ರ-4

Author : ಎಫ್.ಟಿ.ಹಳ್ಳಿಕೇರಿ

Pages 250

₹ 250.00




Year of Publication: 2021
Published by: ವಿಕಾಸ ಪ್ರಕಾಶನ
Address: # ಶೋಧನ, ಟೀಚರ್‍ಸ್ ಕಾಲೊನಿ, ಎಂಪಿ. ಪ್ರಕಾಶ ನಗರ, ಹೊಸಪೇಟೆ-583201, (ಜಿಲ್ಲೆ: ವಿಜಯನಗರ)
Phone: 9480553969

Synopsys

ಸಾಹಿತಿ-ಸಂಶೋಧಕ ಪ್ರೊ. ಎಫ್.ಟಿ.ಹಳ್ಳಿಕೇರಿ ಅವರ ಕೃತಿ-ಕಂಠ ಪತ್ರ-4. ಲೇಖಕರು ಹೇಳುವ ಹಾಗೆ ‘ಇಲ್ಲಿಯ ಸಂಪ್ರಬಂಧಗಳನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಿದೆ. ಹಸ್ತಪ್ರತಿ ಶಾಸ್ತ್ರಕ್ಕೆ ಸಂಬಂಧಿಸಿದ 9 ಸಂಪ್ರಬಂಧಗಳಿವೆ. ಕವಿ-ಲಿಪಿಕಾರ ಹಾಗೂ ಪ್ರತಿಕಾರ. ಈ ಮೂವರು ಹಸ್ತಪ್ರತಿಗಳ ರಚನೆ ಮತ್ತು ಪರಿಚಲನೆಯಲ್ಲಿ ವಹಿಸಿದ ಪಾತ್ರ, ಲಿಪಿಕಾರರ ಚರಿತ್ರೆ, ಚಾರಿತ್ಯ್ರ, ಹಸ್ತಪ್ರತಿಗಳ ಕುರಿತು ಜನರಿಗಿದ್ದ ನಂಬಿಕೆಗಳು, ಹಸ್ತಪ್ರತಿ ಸಂರಕ್ಷಣೆಯಲ್ಲಿ ಮಠಮಾನ್ಯಗಳು ಮಾಡಿದ ಕೆಲಸದ ಬಗೆಗಿನ ವಿವೇಚನೆ , ಕನ್ನಡ ಹಸ್ತಪ್ರತಿಶಾಸ್ತ್ರ, ಐದು ಕಲ್ಲಚ್ಚಿನ ಪುಸ್ತಕಗಳ ಅವಲೋಕನ, ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಕಾಲದ ಹಸ್ತಪ್ರತಿಗಳು, ಮಹಾರಾಷ್ಟ್ರದಲ್ಲಿ ಕನ್ನಡ ಹಸ್ತಪ್ರತಿಗಳು, ತಗರ ಪವಾಡ: ಮತ್ತೆ ಎರಡು ಹಸ್ತಪ್ರತಿಗಳ ಶೋಧ ಹೀಗೆ ಹಸ್ತಪ್ರತಿಶಾಸ್ತ್ರದ ವಿವಿಧ ಆಯಾಮಗಳ ಅಧ್ಯಯನವನ್ನು ಒಳಗೊಂಡಿವೆ.

ಎರಡನೇ ಭಾಗದಲ್ಲಿ, 11 ಸಂಪ್ರಬಂಧಗಳು ಗ್ರಂಥಸಂಪಾದನಾ ಶಾಸ್ತ್ರಕ್ಕೆ ಸಂಬಂಧಿಸಿವೆ. ಕನ್ನಡ ಗ್ರಂಥ ಸಂಪಾದನೆ: ಹೊಸ ಸಾಧ್ಯತೆಗಳು, ಉದಯಾದಿತ್ಯಾಲಂಕಾರ: ಪರಿಷ್ಕರಣೆ ಮತ್ತು ಅಧ್ಯಯನ, ಹರಿಹರನ ರಗಳೆಗಳು: ಪರಿಷ್ಕರಣೆಗಳ ಪರಿಶೀಲನೆ, ಪ್ರಾಚೀನ ಕನ್ನಡ ಪಠ್ಯಗಳ ಸಂಶೋಧನೆ: ಕ್ರೈಸ್ತ ಮಿಶನರಿಗಳ ಕೊಡುಗೆ, ಎರ್ತೂರು ಶಾಂತಿರಾಜ ಶಾಸ್ತ್ರೀ ಅವರ ಗ್ರಂಥ ಸಂಪಾದನೆ  ಹೀಗೆ  ಒಟ್ಟು 20 ಸಂಪ್ರಬಂಧಗಳು ಹಸ್ತಪ್ರತಿ ಗ್ರಂಥಸಂಪಾದನಾಶಾಸ್ತ್ರಗಳ ಅಧ್ಯಯನದ ಫಲಗಳಾಗಿವೆ’ ಎಂದು ಕೃತಿಯ ಒಟ್ಟು ಸ್ವರೂಪವನ್ನು ತೋರಿದ್ದಾರೆ.  

About the Author

ಎಫ್.ಟಿ.ಹಳ್ಳಿಕೇರಿ
(01 June 1966)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ್ರಪ್ರತಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕ ಮತ್ತು ಮುಖ್ಯಸ್ಥರು. ಎಂ.ಎ, ಎಂಫಿಲ್ ಪಿಎಚ್‌.ಡಿ ಪದವಿ ಪಡೆದಿರುವ ಅವರಿಗೆ ಹಸ್ತಪ್ರತಿ-ಗ್ರಂಥಸಂಪಾದನೆ, ಹಾಲುಮತ ಸಂಸ್ಕ್ರತಿ, ಹಳೆಗನ್ನಡ-ನಡುಗನ್ನಡ -ನಡುಗನ್ನಡ ಸಾಹಿತ್ಯ, ಯೋಗವಿಜ್ಞಾನ ಆಸಕ್ತಿಯ  ಅಧ್ಯಯನದ ಕ್ಷೇತ್ರಗಳು. ’ಕೆರೆಯ ಪದ್ಮರಸ ಮತ್ತು ಆತನ ವಂಶಜರು , ಕಂಠಪತ್ರ (1,2,3), ಹಾಲುಪತ್ರ’ ಪ್ರಕಟಿತ ಕೃತಿಗಳು. ಹಾಲುಮಠ ಅಧ್ಯಯನ ಪೀಠದ ಸಂಚಾಲಕ, ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ  ಮುಖ್ಯಸ್ಥರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾನಿಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅತ್ಯುನ್ನತ ಸಂಶೋಧನಾ ಗ್ರಂಥ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು ಇವರಿಗೆ ...

READ MORE

Related Books