ಕಪ್ಪು ಸೂರ್ಯ

Author : ಟಿ.ಎಸ್. ದಕ್ಷಿಣಾಮೂರ್ತಿ

Pages 173

₹ 60.00




Year of Publication: 2013

Synopsys

ಭರತ್ ಜಂಗಮ್ ನೇಪಾಳದ ಪ್ರಮುಖ ಕಾದಂಬರಿಕಾರ. ಅವರ ’ಕೋಲಾಸೂರ್” ಎಂಬ ಕಾದಂಬರಿ ಇಂಗ್ಲಿಷ್ನಲ್ಲಿ ’ದ ಬ್ಲಾಕ್ ಸನ್’ ಹೆಸರಿನಲ್ಲಿ ಅನುವಾದಗೊಂಡಿದೆ. ಇದನ್ನು ಕನ್ನಡಕ್ಕೆ ತಂದಿರುವುದು  ಟಿ. ಎಸ್. ದಕ್ಷಿಣಾ ಮೂರ್ತಿ ಅವರು. 

ಕಾದಂಬರಿ ನಿರಂಕುಶ ಪ್ರಭುತ್ವದ ಕರಾಳ ಮುಖಗಳನ್ನು ಬಿಚ್ಚಿಡುವ ಕೆಲಸ ಮಾಡಿದೆ.  ವ್ಯಾಪಾರಿಗಳು, ಸಮಾಜ ಸೇವಕರೆಂದು ಹೊರಗೆ ಕರೆಸಿಕೊಳ್ಳುವವರು, ಜನರ ಮುಗ್ಧತೆಯನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಹೇಗೆ ಬಳಸಿಕೊಳ್ಳುತ್ತಾರೆ, ಕಾನೂನನ್ನು ತಮಗೆ ಅನುಕೂಲವಾಗುವಂತೆ ಹೇಗೆ ಬಗ್ಗಿಸಿಕೊಳ್ಳುತ್ತಾರೆ ಎಂಬುದರ ವಿವರಗಳು ಕೃತಿಯಲ್ಲಿವೆ. 

About the Author

ಟಿ.ಎಸ್. ದಕ್ಷಿಣಾಮೂರ್ತಿ

ಟಿ.ಎಸ್.ದಕ್ಷಿಣಾಮೂರ್ತಿ ಅವರು ಚಿಕ್ಕನಾಯಕನಹಳ್ಳಿ ತಾಲೂಕು ತರಬೇನಹಳ್ಳಿ ಗ್ರಾಮದ ಇವರು ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಅವರು ಕೆಲಕಾಲ ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್‌ ಆಗಿದ್ದರು. ಕಪ್ಪು ಸೂರ್ಯ ಅನುವಾದಿತ ಕಾದಂಬರಿ, ಅಕಾಡೆಮಿಯ ಒಳಗು ಹೊರಗು, ಅನುಭವ ಕಥನ ಹಾಗೂ ಸಾಹಿತ್ಯ ಲೋಕದಲ್ಲೊಂದು ಸುತ್ತು ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books