ಕರಡಚ್ಚು ತಿದ್ದುವಿಕೆ ಮತ್ತು ಕನ್ನಡ ಭಾಷೆ

Author : ಜಿ. ಅಶ್ವತ್ಥನಾರಾಯಣ

Pages 244

₹ 170.00




Year of Publication: 2017
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಪ್ರಸ್ತುತ ದಿನಗಳಲ್ಲಿ ಕನ್ನಡ ಪುಸ್ತಕಗಳು ತಮ್ಮ ಪ್ರಕಟಣಾ ಸಂಖ್ಯೆ ಮತ್ತು ಮುದ್ರಣಾ ಗುಣಮಟ್ಟವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಲೇಖಕರು, ಪ್ರಕಾಶಕರು ಮತ್ತು ಮುದ್ರಕರಷ್ಟೇ ಪ್ರಾಮುಖ್ಯತೆ ಮತ್ತು ಹೊಣೆಗಾರಿಕೆಯೂ ಕರಡಚ್ಚು ತಿದ್ದುವವರಿಗೂ ಇರುತ್ತದೆ. ಈ ವಿಷಯವನ್ನು ಮನಗಂಡು ಆ ಕೆಲಸಕ್ಕೆ ತಜ್ಞತೆ, ತರಬೇತಿ, ತಾದ್ಯಾತ್ಮತೆಗಳ ಅಗತ್ಯತೆಯನ್ನೂ ಲೇಖಕ ಜಿ. ಅಶ್ವತ್ಥನಾರಾಯಣರು ಈ ಕೃತಿಯಲ್ಲಿ ವಿವರವಾಗಿ ವಿವರಿಸಿದ್ದಾರೆ.

About the Author

ಜಿ. ಅಶ್ವತ್ಥನಾರಾಯಣ
(12 May 1938)

ಸಂಶೋಧಕರು, ಸಾಹಿತಿ, ಭಾಷಾ ತಜ್ಞ, ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಜಿ. ಅಶ್ವತ್ಥನಾರಾಯಣ ಅವರು 1938 ಮೇ 12 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಚ್.ಗುಂಡಪ್ಪ, ತಾಯಿ ಜಾನಕಮ್ಮ. ಸಮಾಜಶಾಸ್ತ್ರ ಮತ್ತು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪುರುಷೋತ್ತಮ ದಾಸರ ಸಮಗ್ರ ಕೃತಿಗಳು, ವಿಜಯ ದಾಸರ ಸಮಗ್ರ ಕೀರ್ತನೆಗಳು, ರತ್ನಾಕರವರ್ಣಿಯ ಶತಕತ್ರಯ, ಜ್ಞಾನವಂತರಾಗಿ ಜಾಗರೂಕರಾಗಿರಿ, ಉತ್ತಮ ಕ್ಷಮಾಧರ್ಮ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.  ...

READ MORE

Related Books