ಕಾರಣವಾದ

Author : ಕೆ. ಕೇಶವ ಶರ್ಮ

Pages 192

₹ 190.00




Year of Publication: 2021
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಸಾಹಿತ್ಯಕ ಹಾಗೂ ಸಾಂಸ್ಕೃತಿಕ ವಾಗ್ವಾದಗಳು ಎಂಬ ಉಪಶೀರ್ಷಿಕೆಯಡಿ ಲೇಖಕ ಡಾ. ಕೆ. ಕೇಶವ ಶರ್ಮ ಅವರು ರಚಿಸಿದ ಪ್ರಮುಖ  ಕೃತಿ-ಕಾರಣವಾದ. ಸಾಹಿತ್ಯ ರಚನೆಯಲ್ಲಿ ಸಾಂಸ್ಕೃತಿಕ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಅವು ಒಂದಕ್ಕೊಂದು ಹೇಗೆ ಪೂರಕವಾಗಿ, ವಿರುದ್ಧವಾಗಿ ಕಾರಕ ಅಂಶಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಚರ್ಚಿಸಿದ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಒಳಗೊಂಡ ಬರಹಗಳು ಇಲ್ಲಿವೆ. ಇಂತಹ ಚರ್ಚೆಗಳು ಹೊಸದಾದ ‘ಕಾರಣವಾದ’ವನ್ನು ಹುಟ್ಟು ಹಾಕುವ ಪರಿಯನ್ನು ಅನಾವರಣಗೊಳಿಸುತ್ತವೆ.

About the Author

ಕೆ. ಕೇಶವ ಶರ್ಮ

ಲೇಖಕ ಕೇಶವ ಶರ್ಮ ಕೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಹತ್ತಿರವಿರುವ ಕೋಡಂದೂರಿನವರು. ತಂದೆ ದಿವಂಗತ ಕೆ.ಕೆ. ನರಸಿಂಹಭಟ್ಟ, ತಾಯಿ ಕೆ.ಎನ್.ಸೀತಾ. ಲೇಖಕಿ ಸಬಿತಾ ಬನ್ನಾಡಿ ಕೇಶವ ಶರ್ಮ ಅವರ ಬಾಳ ಸಂಗಾತಿ. ಯಕ್ಷಗಾನದತ್ತ ಒಲವಿದ್ದ ಕೇಶವ ಶರ್ಮ ಅವರು ಹವ್ಯಾಸಿ ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೇಶವ ಶರ್ಮ ಅವರು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ವಿಷಯದಡಿ ಪಿಎಚ್.ಡಿ ...

READ MORE

Related Books