ಕಾರಂತ ಸ್ಮರಣೆ ಭಾಗ-1

Author : ಎಚ್.ಜಿ. ಶ್ರೀಧರ

Pages 56

₹ 36.00




Year of Publication: 2002
Published by: ಶಿವರಾಮ ಕಾರಂತ ಅಧ್ಯಯನ ಕೇಂದ್ರ
Address: ವಿವೇಕಾನಂದ ಕಾಲೇಜು ಪುತ್ತೂರು-574203, ದಕ್ಷಿಣ ಕನ್ನಡ

Synopsys

ಶ್ರೀಧರ ಎಚ್. ಜಿ ಅವರ ಸಂಪಾದಕತ್ವದ ’ಕಾರಂತ ಸ್ಮರಣೆ’ ಕೃತಿಯು ಕಾರಂತರ ಕುರಿತ ವಿಮರ್ಶಾತ್ಮಕ ಲೇಖನಗಳ ಸಂಗ್ರಹವಾಗಿದೆ. ಕೃತಿಯು ಪ್ರಮುಖವಾಗಿ ಶಿವರಾಮ ಕಾರಂತರ ನಾಟಕಗಳು : ರಂಗಸಾಧ್ಯತೆಯ ಮರುನೋಟಗಳು( ಉದ್ಯಾವರ ಮಾಧವ ಆಚಾರ್ಯ), ಯಕ್ಷಗಾನ: ಕಾರಂತ ಕ್ರೀಡಾಂಗಣ( ಕೆ. ಎಂ ರಾಘವ ನಂಬಿಯಾರ್), ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಪರಂಪರೆ ಮತ್ತು ಆಧುನಿಕತೆಯ ಸಂಘರ್ಷ( ಪ್ರಜ್ಞಾ ಅಮ್ಮೆಂಬಳ), ಕಾರಂತರ ಕಾದಂಬರಿಗಳಲ್ಲಿ ಬರುವ ವಿಷಯ ದಾಂಪತ್ಯ ( ಈಶ್ವರ ಪ್ರಸಾದ ಎಸ್), ಮರಳಿ ಮಣ್ಣಿಗೆ ಕಾದಂಬರಿಯಲ್ಲಿ ಕಾರಂತರು ಎತ್ತಿಹಿಡಿಯುವ ಜೀವನ ಮೌಲ್ಯಗಳು (ಮುಟ್ಗುಪ್ಪೆ ಪರಶುರಾಮ) ಎನ್ನುವ ಐದು ಅಧ್ಯಾಯಗಳನ್ನು ಒಳಗೊಂಡಿದೆ.

ಕೋಟ ಶಿವರಾಮ ಕಾರಂತರು ಯಕ್ಷಗಾನ ರಂಗಕ್ಕೆ ಸಲ್ಲಿಸಿರುವ ಸೇವೆ ಬೆಲೆಕಟ್ಟಲಾಗದಂಥದು. ಯಕ್ಷಗಾನವನ್ನು ಒಂದು ಕಲಾರೂಪವಾಗಿ ಆಧುನಿಕ ದೃಷ್ಟಿಯಲ್ಲಿ ನೋಡಿದ ಮೊದಲಿಗರಾಗಿದ್ದು, ತಮ್ಮ ಲೇಖನ, ಗ್ರಂಥ ರಚನೆ, ಮತ್ತು ಭಾಷಣಗಳಿಂದ ಯಕ್ಷಗಾನದ ಸೌಂದರ್ಯದ ಕಡೆಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದರು ಎನ್ನುವ ಹಲವಾರು ವಿಚಾರಗಳು ಇಲ್ಲಿದೆ. ಸಾಹಿತ್ಯದಲ್ಲಿ ಕೆಲವು ಕೃತಿಗಳು ಆಗಾಗ ಚರ್ಚೆಗೆ ಗ್ರಾಸವಾಗುತ್ತವೆ. ಇಂತಹ ಕೃತಿಗಳಲ್ಲಿ ’ಮರಳಿ ಮಣ್ಣಿಗೆ’ ಕಾದಂಬರಿಯೂ ಒಂದಾಗಿದೆ. ಕಾವ್ಯಾತ್ಮಕ ದನಿಯಲ್ಲಿ ಸುಮಾರು ಒಂದು ಶತಮಾನದ ಮೂರು ತಲೆಮಾರುಗಳ ತಮ್ಮ ಬದುಕಿನಲ್ಲಿ ಎದುರಾದ ಸಮಸ್ಯೆಗಳಿಗೆ ಕಂಡುಕೊಂಡ ಪರಿಹಾರವನ್ನು ವಿವರಿಸುವ ಮಹಾಕಾದಂಬರಿಯಂತಿದೆ.

ಕಾರಂತರ ನಾಟಕ ಕೃತಿಗಳು ಮೌಲಿಕ ನಿಲುವುಗಳನ್ನು ವ್ಯಕ್ತಪಡಿಸುವಂತಿದೆ. ಈ ಹಿನ್ನೆಲೆಯಲ್ಲಿ ಸ್ವತಃ ರಂಗಕರ್ಮಿಯಾಗಿರುವ ಪ್ರೊ. ಉದ್ಯಾವರ ಮಾಧವ ಆಚಾರ್ಯರು ಕಾರಂತರ ನಾಟಕಗಳ ರಂಗಪ್ರಯೋಗದ ಸಾಧ್ಯತೆಗಳ ಬಗೆಗೆ ಉಪಯುಕ್ತ ಚರ್ಚೆಯನ್ನು ಈ ಕೃತಿಯಲ್ಲಿ ಆರಂಭಿಸುತ್ತಾರೆ. 1958 ರಲ್ಲಿ ಬ್ರಹ್ಮಾವರದಲ್ಲಿ ನಡೆಸಿದ ಪ್ರಥಮ ಯಕ್ಷಗಾಣ ಅಧ್ಯಯನ ಶಿಬಿರದಿಂದ ತೊಡಗಿ 1972 ರಲ್ಲಿ ಯಕ್ಷಗಾನವೆಂಬ ಸಂಸ್ಥೆಯನ್ನು ಕಟ್ಟುವವರೆಗೆ ಕಾರಂತರು ಕೈಗೊಂಡ ಅಧ್ಯಯನ ಚಟುವಟಿಕೆ ವಿಶೇಷವಾದದ್ದು. ಇದರ ಕುರಿತ ವಿಚಾರಧಾರೆಗಳು ಇಲ್ಲಿ ಮುಖ್ಯವೆನಿಸುತ್ತದೆ. ಒಟ್ಟಾರೆಯಾಗಿ, ಕಾರಂತರು ಏರ್ಪಡಿಸಿದ ವಿವಿಧ ಗೋಷ್ಠಿಗಳು, ತರಬೇತಿ ಶಿಬಿರಗಳು, ನಾಟಕ ಪ್ರದರ್ಶನಗಳು ಹಾಗೂ ಯಕ್ಷಗಾನ ರಂಗವನ್ನು ಭಿನ್ನವಾಗಿ ನೋಡಲು, ತಿಳಿದುಕೊಳ್ಳಲು ’ಕಾರಂತ ಸ್ಮರಣೆ’ ಉಪಯುಕ್ತವಾಗಿದೆ.

About the Author

ಎಚ್.ಜಿ. ಶ್ರೀಧರ

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಚ್.ಜಿ. ಶ್ರೀಧರ ಅವರು ಕನ್ನಡ ವಿಭಾಗ ಮುಖ್ಯಸ್ಥರು ಕೂಡ. ಹೆಸರಾಂತ ವಿಮರ್ಶಕ, ಸಂಶೋಧಕರಾಗಿರುವ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಮುಂಡಿಗೆಹಳ್ಳದವರು. ಸಾಗರದ ಲಾಲ್‌ಬಹಾದೂರ್ ಶಾಸ್ತಿ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದಿದ್ದಾರೆ. ’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ' ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿ, ಪದವಿ ತರಗತಿ ಪಠ್ಯಪುಸ್ತಕಗಳ ರಚನಾ ಸಮಿತಿ; ಕ್ಯಾಲಿಕತ್ ವಿಶ್ವವಿದ್ಯಾಲಯದ ಪದವಿ ಪರೀಕ್ಷಾ ಮಂಡಳಿಯ ಸದಸ್ಯರಾಗಿರುವ ಅವರು ...

READ MORE

Related Books