ಕರ್ನಾಟಕ ಬಹುತ್ವದ ಆಯಾಮಗಳು

Author : ಷ. ಶೆಟ್ಟರ್‌

Pages 92

₹ 75.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಸಂಶೋಧಕರೂ, ಹಿರಿಯ ವಿದ್ವಾಂಸರೂ ಆದ ಷ. ಶೆಟ್ಟರ್ ಅವರ ’ಕರ್ನಾಟಕ ಬಹುತ್ವದ ಆಯಾಮಗಳು’  ಕನ್ನಡವೂ ಹಾಗೆಯೇ  ಅಧ್ಯಯನಶೀಲ ಚಿಂತನೆಗಳಿಗೆ ಓದುಗರನ್ನು ಹಚ್ಚುವ ಕೃತಿಯಾಗಿದೆ. 

ಶಾಸನಗಳ ಕುರಿತಾದ ಹಲವಾರು ಅಭಿಪ್ರಾಯಗಳನ್ಬು ಮತ್ತು ಮರು ವಿಮರ್ಶಿಸಬೇಕಾದ ಪ್ರಸ್ತಾಪಗಳನ್ನೂ ಈ ಕೃತಿಯಲ್ಲಿ ತಿಳಿಸಿದ್ದಾರೆ. ಹಳಗನ್ನಡದ ಸಮೃದ್ಧಿ, ಅದು ಹುಟ್ಟುಹಾಕಿದ ವೈವಿಧ್ಯಮಯ ಪರಂಪರೆಯನ್ನು ಅರಿಯಲು ಬಯಸುವವರು ಓದಲೇ ಬೇಕಾದ ಗ್ರಂಥವಾಗಿದೆ. ಇತಿಹಾಸದುದ್ದಕ್ಕೂ ಭಾಷಾ ರಾಜಕೀಯ ಹೇಗೆ ನಡೆಯುತ್ತಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕೂಡ ಸಹಾಯಕವಾಗಿದೆ.  ಅಲ್ಲದೇ  ಶೆಟ್ಟರ್‌ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಮಾಡಿದ ಭಾಷಣ, ಮುನ್ನುಡಿಗಳನ್ನೂ ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. 

About the Author

ಷ. ಶೆಟ್ಟರ್‌
(11 December 1935)

ಷ.ಶೆಟ್ಟರ್ ಅವರು ಹುಟ್ಟಿದ್ದು 11 ಡಿಸೆಂಬರ್ 1935 ರಂದು. ಊರು ಬಳ್ಳಾರಿ ಜಿಲ್ಲೆಯ ಹಂಪಸಾಗರ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ಗಳಲ್ಲಿ ಉನ್ನತ ವ್ಯಾಸಂಗ, ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕುರಿತು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳ ಪ್ರಕಟಣೆ. ವಿವಿಧ ವಿಶ್ವವಿದ್ಯಾಲಯದಲ್ಲಿ ಬೋಧನೆ. 1960 -96, ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ 1978-95, ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ-1996-99, ಬೆಂಗಳೂರಿನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ಡಾ.ಎಸ್.ರಾಧಾಕೃಷ್ಣನ್ ಪ್ರಾಧ್ಯಾಪಕತ್ವ 2002-2010, ...

READ MORE

Related Books