ಕರ್ನಾಟಕ ಭಿತ್ತಿ ಚಿತ್ರ ಪರಂಪರೆ

Author : ಅ.ಲ. ನರಸಿಂಹನ್

Pages 224

₹ 100.00




Year of Publication: 1998
Published by: ಕರ್ನಾಟಕ ಲಲಿತಕಲಾ ಅಕಾಡೆಮಿ
Address: ನೃಪತುಂಗ ರಸ್ತೆ, ಬೆಂಗಳೂರು- 560001

Synopsys

‘ಕರ್ನಾಟಕ ಭಿತ್ತಿ ಚಿತ್ರ ಪರಂಪರೆ’ ಅ.ಲ. ನರಸಿಂಹನ್ ಅವರ ಕೃತಿ. ''ಕರ್ನಾಟಕದ ಚಿತ್ರಕಲೆಯಲ್ಲಿ ಸಾಂಸ್ಕೃತಿಕ ಅಧ್ಯಯನವೊಂದು ವ್ಯಾಪಕವೂ, ಸುವಿಸ್ತಾರವೂ, ಕುತೂಹಲಕಾರಿಯೂ ಆದ ವಿಷಯಗಳನ್ನು ಈ ಗ್ರಂಥ ಒಳಗೊಂಡಿದೆ. ಕನ್ನಡದಲ್ಲಿ ಈ ತನಕ ಈ ವಿಷಯವನ್ನು ಕುರಿತಂತೆ ಬಿಡಿ ಲೇಖನಗಳು, ಸಣ್ಣಪುಟ್ಟ ಗ್ರಂಥಗಳು ಪ್ರಕಟಗೊಂಡಿದ್ದರೂ, ಇಷ್ಟು ವ್ಯವಸ್ಥಿತವಾಗಿ, ಸಕ್ರಮವಾಗಿ, ತಲಸ್ಪರ್ಶಿಯಾಗಿ, ಸುದೀರ್ಘವಾಗಿ ಅಭ್ಯಾಸ ಮಾಡಿದ ಫಲವಾಗಿ ರಚನೆಗೊಂಡ ಸಮಗ್ರ ಗ್ರಂಥಗಳು ಇಲ್ಲವೆಂದೇ ಹೇಳಬಹುದು. ಈ ಮಹಾ ನಿಬಂಧವನ್ನೋದಿದ ನಂತರ, ಈ ಗುರುಕಾರ್ಯಕ್ಕೆ ಅವಶ್ಯವಾದ ವಿದ್ವತ್ತು, ಸತತಭ್ಯಾಸ, ವಿಷಯ ಸಂಗ್ರಹ ಸಾಮರ್ಥ್ಯ, ಜ್ಞಾನ ಸಂಪಾದನಾ ಶ್ರದ್ದೆ, ವಿಶ್ಲೇಷಣ ಶಕ್ತಿ, ಬುದ್ದಿ ಸಂಪತ್ತು ನಿಬಂಧಕಾರರಲ್ಲಿ ಸಾಕಷ್ಟು ಪ್ರಮಾಣದಲ್ಲಿವೆ ಎಂದು ಸ್ಪಷ್ಟವಾಗುತ್ತದೆ.

ಅವರು ವ್ಯಾಸಂಗ ಮಾಡಿರುವ ಗ್ರಂಥಗಳ ರಾಶಿಯೇ ಅಪಾರವಾಗಿದ್ದು, ಅದನ್ನೆಲ್ಲಾ ತಮ್ಮ ಅವಶ್ಯಕತೆಗನುಗುಣವಾಗಿ ಸೂರೆಗೊಂಡಿದ್ದಾರೆ. ಈ ಕೃತಿಯಲ್ಲಿಯ ಭಾಷೆ ಸರಳವಾಗಿಯೂ ಇದ್ದು ಚಿತ್ರಕಲೆಯಂಥ ಪಾರಿಭಾಷಿಕ ವಿಷಯದ ನಿರೂಪಣೆಗೆ ಹಾಗೂ ವ್ಯಾಖ್ಯಾನಕ್ಕೆ ತಕ್ಕಂತಿದೆ.''

About the Author

ಅ.ಲ. ನರಸಿಂಹನ್

ಕಲಾವಿದ, ಲೇಖಕ ಅ.ಲ. ನರಸಿಂಹನ್ ಅವರು ಮೂಲತಃ ಬೆಂಗಳೂರಿನವರು. ತಂದೆ ಅಗ್ರಹಾರ ತಿರುಮಲಾಚಾರ್, ತಾಯಿ-ಅಲಮೇಲಮ್ಮ. `ಅಲನ' ಎಂದೇ ಚಿರಪರಿಚಿತರು. ‘ಕರ್ನಾಟಕ ಚಿತ್ರಕಲೆಯ ಸಾಂಸ್ಕೃತಿಕ ಅಧ್ಯಯನ’ ವಿಷಯದಡಿ ಮಹಾಪ್ರಬಂಧ ರಚಿಸಿ ಡಾಕ್ಟರೇಟ್ ಪದವೀಧರರು. ಚಿತ್ರಕಲೆ, ಶಿಲ್ಪಕಲೆಯ ಕ್ಷೇತ್ರಗಳಲ್ಲಿ ಅಗಾಧ ಪಾಂಡಿತ್ಯ ಪಡೆದಿದ್ದು. ಮುದ್ರಣ-ತಾಂತ್ರಿಕ ಕಲೆ, ಚಿತ್ರಕಲೆಯಲ್ಲಿ ಡಿಪ್ಲೊಮಾ, ಶಾಸನ ವ್ಯಾಸಂಗ ಸೇರಿದಂತೆ ಹತ್ತು ಹಲವು ವಿದ್ಯೆಗಳಲ್ಲಿ ಪರಿಣಿತರು.  ಸರಕಾರಿ ಮುದ್ರಣಾಲಯದಲ್ಲಿ ವಿವಿಧ ಹುದ್ದೆ, ರಾಜ್ಯ ಗ್ಯಾಜೆಟಿಯರ್ ಇಲಾಖೆಯಲ್ಲಿ ಅನ್ವೇಷಕರಾಗಿದ್ದರು. ಚಿತ್ರಕಲೆ, ಶಿಲ್ಪಕಲೆ ಕುರಿತಂತೆ ನೂರಾರು ಲೇಖನಗಳನ್ನುಬರೆದಿದ್ದು, ಹಲವು ಸ್ಮರಣಸಂಚಿಕೆ, ಗೌರವ ಗ್ರಂಥಗಳಲ್ಲೂ ಇವರ ಲೇಖನಗಳು ಪ್ರಕಟಗೊಂಡಿವೆ. 25ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕಲಾವಿಕಾಸ, ಕಲಾವಾರ್ತೆ ಸೇರಿದಂತೆ ...

READ MORE

Related Books