ಕರ್ನಾಟಕ ಚರಿತ್ರೆ (ಆದಿ ಹಳೆ ಶಿಲಾಯುಗದಿಂದ ಕ್ರಿ.ಶ 1956)

Author : ಬಿ. ಷೇಕ್ ಅಲಿ

₹ 3800.00




Year of Publication: 2018
Published by: ಹಂಪಿಯ ಕನ್ನಡ ವಿಶ್ವವಿದ್ಯಾಲಯ
Address: ವಿದ್ಯಾರಣ್ಯ, ಹಂಪಿ (ತಾ: ಹೊಸಪೇಟೆ, ಜಿ: ಬಳ್ಳಾರಿ)

Synopsys

ಕರ್ನಾಟಕ ಚರಿತ್ರೆಯ ಒಟ್ಟು ಏಳು ಸಂಪುಟಗಳ ಸಂಗ್ರಹ ಕೃತಿ -ಕರ್ನಾಟಕ ಚರಿತ್ರೆ. ಪ್ರೊ. ಬಿ. ಷೇಕ್ ಅಲಿ ಪ್ರಧಾನ ಸಂಪಾದಕರು ಹಾಗೂ ಪ್ರೊ ಅ. ಸುಂದರ, ಕೆ ಎಸ್ ಶಿವಣ್ಣ, ಪ್ರೊ ಎಸ್ ಚಂದ್ರಶೇಖರ್, ಬಿ ಸುರೇಂದ್ರರಾವ್, ಸೆಬಾಸ್ಟಿಯನ್ ಜೋಸೆಫ್-ಸಂಪುಟ ಸಂಪಾದಕರು. ಈ ಏಳೂ ಸಂಪುಟಗಳಲ್ಲಿ ಕರ್ನಾಟಕದ ಚರಿತ್ರೆಯನ್ನು ಚಿತ್ರಿಸಲಾಗಿದೆ. ಈ ಕೃತಿಗಳಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಮಹತ್ವದ ಸಂಗತಿಗಳನ್ನು, ಶಾಸನಗಳನ್ನು, ರಾಜಕೀಯ ಏಳು-ಬೀಳುಗಳನ್ನು, ಯುದ್ಧಗಳನ್ನು ಉಲ್ಲೇಖಿಸಲಾಗಿದೆ. ಆದಿ ಹಳೆ ಶಿಲಾಯುದಿಂದ ಕ್ರಿ.ಶ. 1956ರವರೆಗೆ ಅಧ್ಯಯನದ ಮಿತಿ ಈ ಬೃಹತ್ ಸಂಪುಟಗಳಿಗಿದೆ.

About the Author

ಬಿ. ಷೇಕ್ ಅಲಿ

ಹಿರಿಯ ಇತಿಹಾಸ ತಜ್ಞ, ಶಿಕ್ಷಣ ತಜ್ಞರಾದ ಪ್ರೊ. ಬಿ. ಷೇಕ್ ಅಲಿ ಹಾಸನ ಜಿಲ್ಲೆಯ ಬೆಳಗೋಡು ಗ್ರಾಮದವರು. ಮೈಸೂರು ವಿ.ವಿ.ಯಿಂದ ಆನರ್ಸ್‌ ಪದವಿ ಹಾಗೂ ಆಲಿಘರ್‌ ಮುಸ್ಲಿಂ ವಿ.ವಿ,ಯಿಂದ ಪಿಎಚ್‌ಡಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಉರ್ದು, ಇಂಗ್ಲಿಷ್, ಫ್ರೆಂಚ್ ಭಾಷೆ ಬಲ್ಲವರು. ಪ್ರೊ. ಷೇಕ್ ಅಲಿ ಅವರು ಸಾಲಾರ್ ಉರ್ದು ದಿನಪತ್ರಿಕೆ ಹಾಗೂ ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ, ನೂರ್-ಎ-ಬಸೀರತ್ ಉರ್ದು ಮಾಸಿಕದ ಸಂಪಾದಕರಾಗಿದ್ದಾರೆ. ಕನ್ನಡ ವಿ.ವಿ.ಪ್ರಕಟಿಸಿರುವ ”ಕರ್ನಾಟಕ ಇತಿಹಾಸದ ಏಳು ಸಂಪುಟಗಳು’ ಪ್ರಧಾನ ಸಂಪಾದಕರು.   ಇವರಿಗೆ ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.  ...

READ MORE

Related Books