ಕರ್ನಾಟಕ ಜನಪದ ಮಹಾಕಾವ್ಯ

Author : ಹಿ.ಚಿ. ಬೋರಲಿಂಗಯ್ಯ

Pages 286

₹ 240.00




Year of Publication: 2018
Published by: ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ 583276
Address: ಪ್ರಾದೇಶಿಕ ಕಚೇರಿ ನಂ. 1, ಕಾನೂನು ಕಾಲೇಜಿನ ಹಳೆಯ ಕಟ್ಟಡ ಮೈಸೂರು ಬ್ಯಾಂಕ್ ವೃತ್ತ, ಅರಮನೆ ರಸ್ತೆ ಬೆಂಗಳೂರು 560009
Phone: 080-2232388

Synopsys

ಕರ್ನಾಟಕದ ಜನಪದ ಮಹಾಕಾವ್ಯದ ಮೀಮಾಂಸೆ ಹಾಗೂ ತಾತ್ವಿಕತೆಯನ್ನು ಕುರಿತು ಚರ್ಚಿಸುವ ಗ್ರಂಥವಿದು. ಜನಪದ ಮಹಾಕಾವ್ಯಗಳ ಸ್ವರೂಪ-ಮಹತ್ವ ಹಾಗೂ ಅದರ ತಾತ್ವಿಕತೆಯನ್ನು ವಿವರವಾಗಿ ಚರ್ಚಿಸಲಾಗಿದೆ. ಕನ್ನಡ ಜನಪದ ಮೀಮಾಂಸೆ-ಒಂದು ಪೂರ್ವಪೀಠಿಕೆ, ಜನಪದ ಕಾವ್ಯ ಮೀಮಾಂಸೆ, ಕನ್ನಡ ಜನಪದ ಮಹಾಕಾವ್ಯ ತಾತ್ವಿಕತೆಗಳ ಬಗ್ಗೆ ಚರ್ಚಿಸಲಾಗಿದೆ.  ಪ್ರಮುಖ ಮಹಾಕಾವ್ಯಗಳಾದ ಮಲೆ ಮಾದೇಶ್ವರ ಮಹಾಕಾವ್ಯ, ಮಂಟೇಸ್ವಾಮಿ ಮಹಾಕಾವ್ಯ, ಜುಂಜಪ್ಪ ಮಹಾಕಾವ್ಯ, ಜನಪದ ಮಹಾಭಾರತ, ಬುಡಕಟ್ಟು ರಾಮಾಯಣ, ಮೈಲಾರಲಿಂಗನ ಕಾವ್ಯಗಳನ್ನು ಲೇಖಕರು ಚರ್ಚಿಸಿದ್ದಾರೆ.

About the Author

ಹಿ.ಚಿ. ಬೋರಲಿಂಗಯ್ಯ
(25 October 1955)

ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ಜಾನಪದ ವಿದ್ವಾಂಸರು. ತುಮಕೂರು ಜಿಲ್ಲೆಯ ತಲಪುರ ಮೂಲದವರಾದ ಬೋರಲಿಂಗಯ್ಯ ಅವರ ತಂದೆ ಚಿಕ್ಕೇಗೌಡ ಮತ್ತು ತಾಯಿ ಕಾಳಮ್ಮ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾಗಿ, ನಾಟಕ ಅಕಾಡೆಮಿ ರಿಜಿಸ್ಟಾರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಾಂಸ್ಕೃತಿಕ ಪ್ರತಿನಿಧಿಯಾಗಿ ಫ್ರಾನ್ಸ್‌, ಇಟಲಿ, ಹಾಲೆಂಡ್, ಸೌದಿ, ದುಬಾಯ್, ಇರಾನ್ ದೇಶಗಳಿಗೆ ಭೇಟಿ ನೀಡಿದ್ದಾರೆ. ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಗುಂಡ್ಮಿ ಜಾನಪದ ಪ್ರಶಸ್ತಿ ದೊರೆತಿವೆ. 'ಕಾಡು ಮತ್ತು ಕಾಂಕ್ರೀಟ್', 'ಜಾನಪದ ಗಂಗೋತ್ರಿ', 'ಗಿರಿಜನ ನಾಡಿಗೆ ಪಯಣ', ಉಜ್ಜನಿ ಚೌಡಮ್ಮ, ದಾಸಪ್ಪ ಜೋಗಪ್ಪ, ಎಸ್ಕೃತಿ ಮತ್ತು ...

READ MORE

Related Books