ಕರ್ನಾಟಕ ಸಾಮ್ರಾಜ್ಯ ವಿಜಯನಗರ

Author : ಲಿಂಗದಹಳ್ಳಿ ಹಾಲಪ್ಪ

Pages 264

₹ 250.00




Year of Publication: 2019
Published by: ಹಾಲುಮತ  ಹಕ್ಕಬುಕ್ಕ ಸಂಸ್ಕೃತಿ ಪ್ರತಿಷ್ಠಾನ
Address: ಬಳ್ಳಾರಿ.

Synopsys

ಸಾಹಿತಿಗಳಾದ ಡಾ. ಲಿಂಗದಹಳ್ಳಿ ಹಾಲಪ್ಪ ಹಾಗೂ ಕೆ. ವೆಂಕಟೇಶ ಅವರು ಜಂಟಿಯಾಗಿ ರಚಿಸಿರುವ ಕೃತಿ-ಕರ್ನಾಟಕ ಸಾಮ್ರಾಜ್ಯ ವಿಜಯನಗರ. ಪಶುಪಾಲನಾ ಸಂಸ್ಕೃತಿಯನ್ನು ಅನಾವರಣ ಮಾಡಿದ್ದಾಗಿ ಕೃತಿಗೆ ನೀಡಿರುವ ಉಪಶೀರ್ಷಿಕೆ ಸೂಚಿಸುತ್ತದೆ. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಪ್ರೊ. ಎಫ್.ಟಿ. ಹಳ್ಳಿಕೇರಿ ಅವರು ‘ಈ ಕೃತಿಯು ಆಧುನಿಕ ಸಂಶೋಧನೆಯ ಒಂದು ಭಾಗವಾಗಿ, ಸಂಶೋಧನೆಯ ನವೀನ ಆಯಾಮಗಳನ್ನು ಪರಿಚಯಿಸುತ್ತಾ, ಹೊಸ ಬೆಳಕನ್ನು ಚೆಲ್ಲುವ ಮಹತ್ವದ ಕೃತಿಯಾಗಿ ನಿಲ್ಲುತ್ತದೆ. ಇಲ್ಲಿಯ ಅಧ್ಯಯನದ ಕೇಂದ್ರಬಿಂದು-‘ವಿರೂಪಾಕ್ಷ’ ಸಾಂಪ್ರದಾಯಿಕ ಅಧ್ಯಯನಗಳ ರೂಪುರೇಷೆಗಳನ್ನು ಪಕ್ಕಕ್ಕೆ ಸರಿಸಿಟ್ಟು, ವಿರೂಪಾಕ್ಷನ ದೇಸಿ ಮೂಲವನ್ನು ವಿಶ್ಲೇಷಿಸಿ, ಅವನನ್ನು ಜನಪದರ ಮುಂದೆ ನಿಲ್ಲಿಸಲಾಗಿದೆ. ಪ್ರಾಚೀನ ಕಾಲದಲ್ಲಿ ವಿರೂಪಾಕ್ಷನಾಗಿರದೇ, ಪಂಪಾಪತಿ ಎಂದು ಕರೆಯಿಸಿಕೊಂಡಿದ್ದ ಇವನು, ಮೂಲದಲ್ಲಿ ಮೈಲಾರನೇ ಎಂಬ ಪ್ರಶ್ನೆಗೆ ಆಚರಣೆಗಳ ಮೂಲಕ ಸಮರ್ಥ ಉತ್ತರವನ್ನು ಕಂಡುಕೊಳ್ಳಲಾಗಿದೆ. ಎರಡನೆಯದಾಗಿ, ಜನಪದರ ಭಾವನಾತ್ಮಕ ನಂಟು, ಶಿಲ್ಪ, ಜನಪದರ ಗೀತೆ-ಆಚರಣೆಗಳನ್ನು ಹಂತಹಂತವಾಗಿ ವಿಶ್ಲೇಷಿಸುತ್ತಾ, ‘ಪಶುಪಾಲಕರ ದೈವ ಬೀರಪ್ಪನೇ ಹೌದು’ ಎಂಬ ಜಿಜ್ಞಾಸೆಗೆ ಉತ್ತರವನ್ನು ಪಡೆಯುವಂತೆ ಓದುಗರನ್ನು ಕೃತಿ ಕಟ್ಟಿಹಾಕುತ್ತದೆ. ಮೈಲಾರ-ಬೀರದೇವರು ಇಬ್ಬರೂ ಅಭಿನ್ನರು. ಕಾಲಭೈರವನ ಅಂಶಗಳೆಂದು ಓದುಗ ನಿರ್ಣಯಿಸುವಂತೆ ಕೃತಿಯ ಸಂಶೋಧನೆಯು ಪ್ರಭಾವ ಬೀರುತ್ತದೆ. ಸಾಮ್ರಾಟರ ಕುಲಮೂಲ ಚರ್ಚೆಯೂ ಈ ಕೃತಿಯ ವೈಶಿಷ್ಟ್ಯವಾಗಿದೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ಲಿಂಗದಹಳ್ಳಿ ಹಾಲಪ್ಪ
(03 February 1958)

ಕವಿ, ಕತೆಗಾರ ಡಾ. ಲಿಂಗದಹಳ್ಳಿ ಹಾಲಪ್ಪನವರು (ಜನನ: 1958 ಫೆಬ್ರುವರಿ 3ರಂದು) ಹಾವೇರಿ, ಸೂರತ್ಕಲ್‌ ಹಾಗೂ ಮೈಸೂರಿನಲ್ಲಿ ಶಿಕ್ಷಣ ಪಡೆದು, ಪ್ರಸ್ತುತ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಆಗಿ, ನಿವೃತ್ತರು. ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.  ಕಳೆದ 15 ವರ್ಷಗಳಿಂದ ಸಾಹಿತ್ಯ ಸಮಾಜ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಹಾಗೂ ಅದಕ್ಕೆ ಹೊಂದಿಕೊಂಡಂತೆ ಆಂಧ್ರಪ್ರದೇಶದ ಅನೇಕ ಭಾಗಗಳಲ್ಲಿ ವ್ಯಾಪಕ ಕ್ಷೇತ್ರಕಾರ್ಯ ಕೈಗೊಂಡು ಅನೇಕ ಮಾಹಿತಿಗಳನ್ನು ಸಂಗ್ರಹಿಸಿದ್ದು, ಹಾಲುಮತ ದೈವಗಳ ಹುಟ್ಟು, ಇತಿಹಾಸ, ಆಚರಣೆ ಮತ್ತು ಸಂಪ್ರದಾಯ ಮುಂತಾದ ವಿಷಯಗಳು ಹೊಸ ಹೊಸ ಚಚೆ೯ಯನ್ನು ಹುಟ್ಟುಹಾಕಿವೆ. ಇವರ ಹಲವು ಕ್ರತಿಗಳನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಪಡಿಸಿದೆ.   ಕೃತಿಗಳು: ಹಾಲುಮತದ ಹಿರಿಮೆ ...

READ MORE

Related Books