ಕರ್ನಾಟಕ ವಿಧಾನಸಭೆಯಲ್ಲಿ ಬಿ.ವಿ. ಕಕ್ಕಿಲ್ಲಾಯ

Author : ಶ್ರೀನಿವಾಸ ಕಕ್ಕಿಲ್ಲಾಯ

Pages 652

₹ 450.00
Year of Publication: 2019
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560001
Phone: 0802220358001

Synopsys

ಬಿ.ವಿ, ಕಕ್ಕಿಲ್ಲಾಯ ಅವರು ಹಿರಿಯ ಸ್ವಾತಂತ್ಯ್ರ ಹೋರಾಟಗಾರರು. ಕರ್ನಾಟಕ ಏಕೀಕರಣ ಚಳವಳಿಯ ನಾಯಕರು. ಭಾರತ ಕಮ್ಯುನಿಸ್ಟ್ ಪಕ್ಷದ ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ನ ಹಿರಿಯ ನಾಯಕರು. ಕರ್ನಾಟಕ ವಿಧಾನಸಭೆ ಹಾಗೂ ರಾಜ್ಯ ಸಭೆಯ ಮಾಜಿ ಸದಸ್ಯರು. ಕರ್ನಾಟಕ ಭೂಸುಧಾರಣಾ ಮಸೂದೆಯ ರೂವಾರಿಗಳು. ರೈತ-ಕಾರ್ಮಿಕರ ಹಕ್ಕುಗಳೇನೆಂದು ತಿಳಿಯದಿದ್ದ ಕಾಲದಲ್ಲೇ (1940-50) ರೈತ-ಕಾರ್ಮಿಕರನ್ನು ಸಂಘಟಿಸಿ ಹೋರಾಡಿದವರು. 1972 ರಿಂದ 1983ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಹಾಗೂ ವಿಟ್ಲ ವಿಧಾನಸಭೆಯನ್ನು ಪ್ರತಿನಿಧಿಸಿ, ಕರ್ನಾಟಕ ವಿಧಾನಸಭೆಯನ್ನು ಪ್ರವೇಶಿಸಿದ್ದರು. 1952ರ ಮೊದಲ ರಾಜ್ಯಸಭಾ ಸದಸ್ಯರಾಗಿ ಮದ್ರಾಸ್ ಪ್ರಾಂತ್ಯದಿಂದ ಆಯ್ಕೆಯಾಗಿ, ಉತ್ತಮ ಜನನಾಯಕತ್ವವನ್ನು ಪಡೆದಿದ್ದರು. ಆದರೆ, ಇಂದು ಇಂತಹ ವಿದ್ವತ್ತಿನ ಮಾದರಿ ವ್ಯಕ್ತಿತ್ವದ ಜನಪ್ರತಿನಿಧಿಗಳು ಕಡಿಮೆ. ಇಂತಹ ಸಂದರ್ಭದಲ್ಲಿ ಪ್ರಕಟಗೊಂಡ ’ಕರ್ನಾಟಕದ ವಿಧಾನಸಭೆಯಲ್ಲಿ ಬಿ.ವಿ.ಕಕ್ಕಿಲ್ಲಾಯ” ಕೃತಿಯು ಉತ್ತಮ ಮಾರ್ಗದರ್ಶಿಯಾಗಿದೆ. ಬಿ.ವಿ.ಕಕ್ಕಿಲ್ಲಾಯ ಅವರು ವಿಧಾನಸಭೆಯಲ್ಲಿ ಮಂಡಿಸಿದ ವಿಚಾರಗಳು, ಬಜೆಟ್ ಮೇಲಿನ ಚರ್ಚೆ ಇತ್ಯಾದಿಗಳನ್ನು ಅತ್ಯಂತ ಪರಿಶ್ರಮದಿಂದ ಸಂಗ್ರಹಿಸಿ ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.

About the Author

ಶ್ರೀನಿವಾಸ ಕಕ್ಕಿಲ್ಲಾಯ

ಮಂಗಳೂರಿನ ಸ್ಪಂದನಾ ಸೆಂಟರ್‌ ಫಾರ್‌ ಮೆಟಾಬಾಲಿಕ್‌ ಮೆಡಿಸಸಿನ್‌ ಕೇಂದ್ರದಲ್ಲಿ ವೈದ್ಯರಾಗಿರುವ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಪ್ರೌಢಶಿಕ್ಷಣವನ್ನು ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ ಪಡೆದರು. ಮಂಗಳೂರಿನ ಕಸ್ತೂರಬಾ ಮೆಡಿಕಲ್‌ ಕಾಲೇಜಿನಲ್ಲಿ ಅಧ್ಯಯನ ನಡೆಸಿ ಎಂ.ಬಿ.ಬಿ.ಎಸ್‌. ಪದವಿ ಪಡೆದ ಶ್ರೀನಿವಾಸ ಅವರು ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್‌ ಕಾಲೇಜಿನಿಂದ 1992ರಲ್ಲಿ ಸ್ನಾತಕೋತ್ತರ (ಎಂ.ಡಿ.) ಪದವಿ ಪಡೆದರು. ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದವರಲ್ಲಿ ಒಬ್ಬರಾದ ಬಿ.ವಿ.ಕಕ್ಕಿಲ್ಲಾಯ ಅವರ ಪುತ್ರರಾಗಿರುವ ಶ್ರೀನಿವಾಸ ಅವರು ಕರ್ನಾಟಕ ವಿಧಾನಸಭೆಯಲ್ಲಿ ಬಿ.ವಿ. ಕಕ್ಕಿಲ್ಲಾಯ ಕೃತಿಯನ್ನು ಸಂಪಾದಿಸಿದ್ದಾರೆ. ...

READ MORE

Related Books