ಕರ್ನಾಟಕದ ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಶವಸಂಸ್ಕಾರ

Author : ರೇಣುಕಾ ಕೋಡಗುಂಟಿ

Pages 177

₹ 125.00




Year of Publication: 2020
Published by: ಸಾಧನ ಪ್ರಕಾಶನ
Address: #.15/16, 1ನೇ ಮಹಡಿ, ಶಿವಾ ಸಂಕೀರ್ಣ, ಬಳೇಪೇಟೆ ಮುಖ್ಯರಸ್ತೆ, ಬೆಂಗಳೂರು- 560053;
Phone: 8088772785

Synopsys

ಕರ್ನಾಟಕದ ಹಿಂದುಳಿದ ಮತ್ತು ಬುಡಕಟ್ಟಸಮುದಾಯಗಳಲ್ಲಿ ಶವಸಂಸ್ಕಾರ -ಲೇಖಕಿ ರೇಣುಕಾ ಕೋಡಗುಂಟಿ ಅವರು ಬರೆದ ಕೃತಿ. ವಿಷಯಕ್ಕೆ ಸಂಬಂಧಿಸಿ ವಿವಿಧ ಲೇಖಕರಿಂದ ಆಹ್ವಾನಿಸಿದ ಒಟ್ಟು 21 ಲೇಖನಗಳನ್ನು ಸಂಪಾದಿಸಲಾಗಿದೆ. ಅಂತ್ಯ ಸಂಸ್ಕಾರ ಅಥವಾ ಶವಸಂಸ್ಕಾರ ವಿಷಯ ಕುರಿತು ಪಾಶ್ಚಾತ್ಯ ರಲ್ಲಿ ಗಂಭೀರವಾದ ಅಧ್ಯಯನಗಳು ನಡೆದಿವೆ. ಕನ್ನಡದಲ್ಲಿಯಂತು ತೀರಾ ವಿರಳ. ಹಾಗಾಗಿ ಈ ಪುಸ್ತಕ ಇದುವರೆಗೆ ಇದ್ದ, ಕೊರತೆಯನ್ನು ನೀಗಿಸಿದೆ ಎನ್ನಬಹುದು. ಈ ವಿಷಯಕ್ಕೆ ಸಂಬಂಧಿಸಿ ‘ಕರ್ನಾಟಕದಲ್ಲಿ ಶವಸಂಸ್ಕಾರ’  ಪುಸ್ತಕ ವನ್ನು ಈ ಕೃತಿಯ ಸಂಪಾದಕರು 2009 ರಲ್ಲಿಯೇ ತಂದಿದ್ದಾರೆ. ‘ಕರ್ನಾಟಕದ ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಶವಸಂಸ್ಕಾರ’ಎನ್ನುವ ಪುಸ್ತಕ ಎರಡನೇ ಸಂಪುಟವಾಗಿದೆ.ಕನ್ನಡದಲ್ಲಿ ಶವಸಂಸ್ಕಾರ ವಿಷಯಕ್ಕೆ ಸಂಬಂಧಿಸಿದ ಮೊಟ್ಟ ಮೊದಲ ಪುಸ್ತಕಗಳು ಎಂಬ ಹೆಗ್ಗಳಿಕೆಗೂ ಈ ಎರಡೂ ಪುಸ್ತಕಗಳು ಪಾತ್ರವಾಗಿವೆ. 

ಇರುಳಿಗರ ಶವಸಂಸ್ಕಾರದ ಆಚರಣೆಗಳು   ( ರವೀಂದ್ರನಾಥ್ ಬಿ.ಕೆ.), ಕರ್‍ಕರ್ ಮುಂಡರ ಶವಸಂಸ್ಕಾರ     (ಮಂಜಪ್ಪ ಹೆಚ್.ಬಿ.), ಕಾಡುಕುರುಬರ ಸಾವಿಗೆ ಸಂಬಂಧಿüಸಿದ ಆಚರಣೆ   (ನಾಗರಾಜ ಜಿ.ಎಸ್.), ಕಾಡುಗೊಲ್ಲರು ಮಣ್ಣುಮಾಡುವ ವಿಧಾನ  (ಮೋಹನ್ ಕುಮಾರ್ ಎನ್), 
ಕುಡುಬಿ ಜನಾಂಗದಲ್ಲಿ ಶವಸಂಸ್ಕಾರ ಪದ್ದತಿ    (ರಾಘವೇಂದ್ರ), ಕೊರಚ ಸಮುದಾಯದ ಶವಸಂಸ್ಕಾರಪದ್ದತಿ ( ಬಸವರಾಜ ಕೆ.ಗಂಗಪ್ಪ), ಗಂಟಿಚೋರ್ ಸಮುದಾಯದ ಸಾವಿನ ಆಚರಣಾಲೋಕ (ಅರುಣ್ ಜೋಳದಕೂಡ್ಲಿಗಿ), ಗೊಂದಲಿಗರ ಶವಸಂಸ್ಕಾರದ ಆಚರಣೆಗಳು   ( ಮೀನಾಕ್ಷಿ ಎಸ್.ಮುಂಡಗನೂರ), ಗೊರವ ಜನಾಂಗದ ಶವಸಂಸ್ಕಾರಪದ್ದತಿ   ( ರಘುಶಂಖ ಭಾತಂಬ್ರಾ), ಚೆನ್ನದಾಸರ್ ಸಮುದಾಯದ ಶವಸಂಸ್ಕಾರ ಪದ್ದತಿ  (ಮಲ್ಲಿಕಾರ್ಜುನ ಬಿ. ಮಾನ್ಪಡೆ), ಜೇನುಕುರುಬರ ಸಾವಿಗೆ ಸಂಬಂಧಿüಸಿದ ಆಚರಣೆ (ನಾಗರಾಜ ಜಿ.ಎಸ್.), ತಿಗಳರ ಶವಸಂಸ್ಕಾರ ಪದ್ದತಿ  (ನಾಗರತ್ನ), ದುರಗಿ ಮರಗಿಯರ ಶವಸಂಸ್ಕಾರ ಪದ್ದತಿ    ( ಅಂಬಿಕಾ), ಮ್ಯಾಸಬೇಡ ಸಮುದಾಯದ ಶವಸಂಸ್ಕಾರ ವಿಧಾನ  ( ನಾಗೇಶ ಎಂ.), ಪಾರ್ದಿ ಬುಡಕಟ್ಟು ಜನಾಂಗದ ಶವಸಂಸ್ಕಾರ ಪದ್ದತಿ  (ಸಂಗಪ್ಪ ತೌಡಿ), ಪುರಾಣಿ ಸೋಲಿಗ ಜನಾಂಗದ ಶವಸಂಸ್ಕಾರ ( ಮಹಾದೇವಸ್ವಾಮಿ ಪಿ.), ಲಂಬಾಣಿಗಳಲ್ಲಿ ಶವಸಂಸ್ಕಾರದ ಪದ್ದತಿ   ( ಮಾಹಾದೇವಿಬಾಯಿ), ವಡ್ಡ (ಭೋವಿ) ಜನಾಂಗದ ಶವಸಂಸ್ಕಾರ   ( ಮಹದೇವಸ್ವಾಮಿ ಪಿ. ಗೌಡಳ್ಳಿ), ಹಂಡಿಜೋಗಿಗಳ ಶವಸಂಸ್ಕಾರ ಪದ್ದತಿ  ( ಮೇಘರಾಜ), ಹಕ್ಕಿ ಪಿಕ್ಕಿ ಸಮುದಾಯದಲ್ಲಿನ ಶವಸಂಸ್ಕಾರ ಪದ್ದತಿ ( ತಿಪ್ಪನಾಯಕಎಸ್.ಪಿ.) ಹೀಗೆ ವಿಷಯವಸ್ತುವನ್ನು ಚರ್ಚಿಸಲಾಗಿದೆ. 

 

About the Author

ರೇಣುಕಾ ಕೋಡಗುಂಟಿ

ರೇಣುಕಾ ಕೋಡಗುಂಟಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಅಯ್ಯಪ್ಪ ಕೋಡಗುಂಟಿ, ತಾಯಿ ಶಾಂತಮ್ಮ ಕೋಡಗುಂಟಿ, ರೇಣುಕಾ ಕೋಡಗುಂಟಿಯವರು ವಿದ್ಯಾಭ್ಯಾಸ ಎಂ.ಎ, ಎಂ.ಫಿಲ್, ಗೃಹಿಣಿ. ಸಾಹಿತ್ಯ, ಸಂಶೋಧನೆಯಲ್ಲಿ ಅಪಾರ ಆಸಕ್ತಿ. ‘ಕೃತಿ ದೀವಿಗೆ ಟ್ರಸ್ಟ್, ನಡೆಸುತ್ತಿದ್ದಾರೆ. ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಕೆಲಸ ಮಾಡುತ್ತಿದ್ದಾರೆ. ಕೃತಿಗಳು: ಬಳಪದ ಚೂರು(ಕವನ ಸಂಕಲನ-2011), ‘ನಮ್ಮ ಕನ್ನಾಡ ಪ್ರೇಮದ ಜೋತಿ (2011-ರಾಯಚೂರು ಜಿಲ್ಲೆಯ ಕಸಬಾ ಲಿಂಗಸೂಗೂರಿನ ಅಂಪವ್ವ ಪೂಜಾರಿ ಅವರು ಹಾಡಿರುವ ಜನಪದ ಹಾಡುಗಳ ಸಂಗ್ರಹ), ಅದೇ ಗಾಯಕರು ಹಾಡಿರುವ ‘ಇಜಬೂಪನ ಪದ’ (2019- ಎನ್ನುವ ಜನಪದ ಖಂಡಕಾವ್ಯ),  ‘ಭಾಷಾವಿಜ್ಞಾನ ಸಂಶೋಧನೆ ಇಂದು’ (ಸಂಶೋಧನಾ ಪ್ರಬಂಧಗಳ ಸಂಪಾದನೆ-2011), ಕರ್ನಾಟಕದಲ್ಲಿ ಶವಸಂಸ್ಕಾರ (ಸಂಶೋಧನಾತ್ಮಕ ...

READ MORE

Related Books